ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಣಿವಿಲಾಸ ಆಸ್ಪತ್ರೆಯ 'ಅಮೃತಧಾರೆ' ಎದೆಹಾಲು ಬ್ಯಾಂಕ್‌ಗೆ ಭಾರಿ ಬೇಡಿಕೆ!

|
Google Oneindia Kannada News

ಬೆಂಗಳೂರು, ಮೇ 23: ವಾಣಿವಿಲಾಸ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪನೆಯಾಗಿರುವ 'ಅಮೃತಧಾರೆ' ತಾಯಂದಿರ ಎದೆಹಾಲು ಬ್ಯಾಂಕ್‌ಗೆ ಬೆಂಗಳೂರು ನಗರದ ಪ್ರೈವೇಟ್ ಆಸ್ಪತ್ರೆಗಳಿಂದ ಬಾರೀ ಬೇಡಿಕೆ ಬಂದಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ವಾಣಿವಿಲಾಸ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದ್ದ 'ಅಮೃತಧಾರೆ' ಎದೆಹಾಲು ಬ್ಯಾಂಕ್, ವಾಣಿವಿಲಾಸ ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಂದಿರು ಹಾಗೂ ಹೊರಗಡೆಯಿಂದ ಸ್ವ-ಇಚ್ಛೆಯಿಂದ ಬಂದ ತಾಯಂದಿರಿಂದ ಎದೆಹಾಲು ದಾನ ಮಾಡುವುದನ್ನು ಶೇಖರಣೆ ಮಾಡುವ ಸಲುವಾಗಿ ಅಮೃತಧಾರೆ ಯನ್ನ ಸ್ಥಾಪನೆ ಮಾಡಲಾಗಿತ್ತು. ಶೇಖರಣೆಯಾದ ಎದೆಹಾಲನ್ನು ಅನಾಥ ಶಿಶುಗಳು, ಹೆರಿಗೆಯಾದ ಬಳಿಕ ತಾಯಿ ಕಳೆದುಕೊಂಡ ಶಿಶುಗಳು, ಅನಾರೋಗ್ಯದಿಂದ ಬಳುವ ಬಾಣಂತಿಯರ ಶಿಶುಗಳಿಗೆ ಹಾಲು ಪೂರೈಸುವ ಕಾರ್ಯ ಇದಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ಪ್ರಕಾರ ಹುಟ್ಟಿದ ಆರು ತಿಂಗಳ ಒಳಗಿನ ಮಕ್ಕಳಿಗೆ ಬಾಣಂತಿಯರ ಅನಾರೋಗ್ಯ, ನವಜಾತ ಶಿಶು (ಅನಾಥ), ತಾಯಿಯಲ್ಲಿ ಎದೆಹಾಲು ಕೊರತೆ, ಅಪೌಷ್ಟಿಕತೆ ಹೀಗೆ ನಾನಾ ಕಾರಣಗಳಿಂದ ಎದೆಹಾಲು ಸಿಗದೆ ಮಕ್ಕಳು ನರಳುತ್ತಿರುವುದಾಗಿ ತಿಳಿಸಿತ್ತು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಮನಗಂಡು ಹುಟ್ಟಿದ ಆರು ತಿಂಗಳ ಒಳಗಿನ ಮಕ್ಕಳಿಗೆ ಎದೆಹಾಲು ಕೊರತೆ ನೀಗಿಸಲು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್ಐ) ಅಡಿ ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆಯಲ್ಲಿ 'ಅಮೃತಧಾರೆ' ಎದೆಹಾಲು ಬ್ಯಾಂಕ್ ಗೆ ಇದೀಗ ಖಾಸಗಿ ಆಸ್ಪತ್ರೆಗಳಿಂದ ಡಿಮ್ಯಾಂಡ್ ಶುರುವಾಗಿದೆ.

'ಅಮೃತಧಾರೆ' ಎಂತಹ ಮಕ್ಕಳಿಗೆ ಅವಶ್ಯಕ

'ಅಮೃತಧಾರೆ' ಎಂತಹ ಮಕ್ಕಳಿಗೆ ಅವಶ್ಯಕ

"ಒಂಬತ್ತು ತಿಂಗಳಿನಗಿಂತ ಮೊದಲೇ ಜನಿಸಿದ ಮಕ್ಕಳಿ, ಅಸ್ವಸ್ತ ಶಿಶುಗಳು, ಹೆರಿಗೆಯಾದ ಬಳಿಕ ತಾಯಿ ಕಳೆದುಕೊಂಡು ಶಿಶುಗಳು, ಅನಾಥ ಶಿಶುಗಳು, ಅನಾರೋಗ್ಯದಿಮದ ಬಳಲುತ್ತಿರುವ ಬಾಣಂತಿಯರ ಶಿಶುಗಳಿಗೆ ಅಮೃತಧಾರೆ ಎದೆಹಾಲು ನೀಡಲಾಗುವುದು. ಇನ್ನೂ ಶಿಶುಗಳಿಗೆ ಹಾಲನ್ನು ನೀಡುವ ಮುನ್ನ ಅಗತ್ಯ ಪರೀಕ್ಷೆ ನಡೆಸಿ ಆರೋಗ್ಯವಂತ ತಾಯಂದಿರಿಂದ ಎದೆ ಸಂಗ್ರಹ ಮಾಡಲಾಗುತ್ತಿದೆ. 'ಅಮೃತಧಾರೆ' ಬಗ್ಗೆ ತಾಯಂದಿರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸುವ ಯೋಜನೆ ಸಹ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶೇಖರಣೆ ಸಾಮರ್ಥ್ಯವನ್ನೂ ವಿಸ್ತರಣೆ ಮಾಡುವುದಾಗಿ," ಸ್ಥಾನಿಕ ವೈದ್ಯಾಧಿಕಾರಿ ಡಾ.ಸಂತೋಷ್ ತಿಳಿಸಿದ್ದಾರೆ.

30 ಲೀಟರ್ ತಾಯಂದಿರ ಎದೆಹಾಲು ಸಂಗ್ರಹ

30 ಲೀಟರ್ ತಾಯಂದಿರ ಎದೆಹಾಲು ಸಂಗ್ರಹ

ಒಂದು ಕೋಟಿ ವೆಚ್ಚದಲ್ಲಿ ವಾಣಿವಿಲಾಸ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿರುವ 'ಅಮೃಧಾರೆ' ಎದೆಹಾಲು ಬ್ಯಾಂಕ್ ನಲ್ಲಿ ಇದುವರೆಗೆ 30 ಲೀಟರ್ ತಾಯಂದಿರ ಎದೆಹಾಲು ಶೇಖರಣೆ ಮಾಡಲಾಗಿದೆ. ಸುಮಾರು 30 ಲೀಟರ್ ನಲ್ಲಿ 120 ಶಿಶುಗಳಿಗೆ ತಾಯಂದಿರ ಎದೆಹಾಲು ಕೊರತೆ ನೀಗಿಸುವ ಮೂಲಕ ವಾಣಿವಿಲಾಸ ಆಸ್ಪತ್ರೆ ಮತ್ತೊಂದು ಹಿರಿಮೆಗೆ ಸಾಕ್ಷಿಯಾಗಿದೆ.

ಖಾಸಗಿ ಆಸ್ಪತ್ರೆಗಳಿಂದ ಬೇಡಿಕೆ

ಖಾಸಗಿ ಆಸ್ಪತ್ರೆಗಳಿಂದ ಬೇಡಿಕೆ

ಇನ್ನೂ ವಾಣಿವಿಲಾಸ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಪರೀಶೀಲಿಸಿ, ಎದೆಹಾಲು ಪೂರೈಕೆ ಮಾಡಲು ಅಮೃತಧಾರೆ ಎದೆಹಾಲು ಬ್ಯಾಂಕ್ ಗೆ ಶಿಫಾರಸ್ಸು ಸಲ್ಲಿಸುವ ಮೂಲಕ ಶಿಶುಗಳಿಗೆ ಎದೆಹಾಲು ಕೊರತೆ ನೀಗಿಸಲು ಸಹಕಾರಿಯಾಗಿದೆ. ಸದ್ಯ ಅಮೃತಧಾರೆ ಎದೆಹಾಲು ಬ್ಯಾಂಕ್ ನಲ್ಲಿ 6 ಲೀಟರ್‌ನಷ್ಟು ನಷ್ಟು ಮಾತ್ರ ತಾಯಂದಿರ ಎದೆಹಾಲು ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಆದರೆ ನಮ್ಮ ಆಸ್ಪತ್ರೆಯಲ್ಲಿರುವ ಶಿಶುಗಳಿಗೆ ಅಗತ್ಯವಿರುವುದರಿಂದ ಪೂರೈಕೆ ಕಷ್ಟ ಎಂದು ವಾಣಿವಿಲಾಸ ಆಸ್ಪತ್ರೆ ಮಕ್ಕಳ ವಿಭಾಗದ ಮುಖ್ಯಸ್ಥ ಮಲ್ಲೇಶ್ ಕೆ.ಹೇಳಿದರು

ವಾಣಿವಿಲಾಸ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಲು ಪೂರೈಕೆ

ವಾಣಿವಿಲಾಸ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಲು ಪೂರೈಕೆ

ಕೆಲ ಪ್ರೈವೇಟ್ ತಾಯಿ ಎದೆಹಾಲು ಬ್ಯಾಂಕ್ ಗಳಲ್ಲಿ 150 ಮಿ.ಲೀ ಹಾಲಿಗೆ 6,500 ರಿಂದ 8,000 ಸಾವಿರ ಪಾವತಿಸಬೇಕು. ಆದರೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಗತ್ಯವಿರುವ ಶಿಶುಗಳಿಗೆ ಉಚಿತವಾಗಿ ಒದಗಿಸಲಾಗುತ್ತದೆ. ಇನ್ನೂ ತಾಯಂದಿರ ಎದೆಹಾಲು ಶೇಖರಿಸಿದ ಬಳಿಕ ಬ್ಯಾಂಕ್ ನಲ್ಲಿ ಸಂಗ್ರಹಿಸಿ ಪ್ಯಾಶ್ಚೀಕರಿಸಿದ ಬಳಿಕ ಪ್ಯಾಕ್ ಮಾಡಿ, ಸಂರಕ್ಷಿಸಲಾಗುತ್ತದೆ. ಶಿಶುವಿಗೆ ನೀಡುವಾಗ ಸಾಮಾನ್ಯ ಉಷ್ಣಾಂಶಕ್ಕೆ ತರಲಾಗುತ್ತಿದೆ. ಇದನ್ನೂ ಆರು ತಿಂಗಳು ಶೇಖರಿಸಿಬಹುದು ಎಂದು ವಾಣಿವಿಲಾಸ ವೈದ್ಯರು ತಿಳಿಸಿದ್ದಾರೆ.

Recommended Video

Protein Shake ಕುಡಿಯುವುದು ಎಷ್ಟು ಡೇಂಜರ್ ಗೊತ್ತಾ? ದೇಹಕ್ಕೆ ಎಷ್ಟು ಪ್ರೊಟೀನ್ ಬೇಕು? | Oneindia Kannada

English summary
Demand from private hospital for vanivilasa Amrutadhare mother breast milk bank, Last month march Amrutadhare breast milk bank set up at Vanivilasa Hospital at a cost of Rs 1 crore,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X