ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಋತ್ಯ ರೈಲ್ವೆ ವಿಸ್ಟಾಡಾಮ್ ಕೋಚ್‌ಗೆ ಭಾರೀ ಬೇಡಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಗಾಜಿನ ಛಾವಣಿಯನ್ನು ಹೊಂದಿರುವ ಸಂಪೂರ್ಣ ಹವಾನಿಯಂತ್ರಿತವಾದ ರೈಲು ಬೋಗಿ ಬೆಂಗಳೂರು ನಗರಕ್ಕೆ ಆಗಮಿಸಿದೆ. ಮೊದಲ ಬಾರಿಗೆ ನೈಋತ್ಯ ರೈಲ್ವೆಗೆ ವಿಸ್ಟಾಡಾಮ್ ಕೋಚ್‌ನ ಒಂದು ಬೋಗಿ ಲಭಿಸಿದೆ.

ನೈಋತ್ಯ ರೈಲ್ವೆ ಮಂಗಳವಾರ ಈ ರೈಲು ಬೋಗಿಯನ್ನು ಸ್ವೀಕಾರ ಮಾಡಿದೆ. ಯಾವ ರೈಲು ಮಾರ್ಗದಲ್ಲಿ ಈ ಬೋಗಿಯನ್ನು ಬಳಕೆ ಮಾಡಲಾಗುತ್ತದೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಗಂಗಾವತಿಯಿಂದ ಅಕ್ಕಿ ಸಾಗಾಣೆಗೆ ಪ್ರತ್ಯೇಕ ರೈಲು ಮಾರ್ಗ ಗಂಗಾವತಿಯಿಂದ ಅಕ್ಕಿ ಸಾಗಾಣೆಗೆ ಪ್ರತ್ಯೇಕ ರೈಲು ಮಾರ್ಗ

ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ಹಗಲು ರೈಲಿಗೆ ಈ ಬೋಗಿ ಅಳವಡಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ, ರೈಲ್ವೆ ಇಲಾಖೆ ಈ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ.

ಮೈಸೂರು-ಚಾಮರಾಜನಗರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಮೈಸೂರು-ಚಾಮರಾಜನಗರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

Demand For Vistadome Coach Of South Western Railway

ಬೆಂಗಳೂರು-ಕಾರವಾರ ಮಾರ್ಗದಲ್ಲಿ ಸಾಗುವ ರೈಲಿಗೆ ಅಳವಡಿಕೆ ಮಾಡಬೇಕು ಎಂಬ ಬೇಡಿಕೆಯೂ ಇದೆ. ದೂದ್ ಸಾಗರ್ ಮಾರ್ಗದಲ್ಲಿ ಸಾಗುವ ರೈಲಿಗೆ ಅಳವಡಿಕೆ ಮಾಡಬೇಕು ಎಂದೂ ಬೇಡಿಕೆ ಇಡಲಾಗಿದೆ.

ಬೆಂಗಳೂರು ನಗರಕ್ಕೆ ಸಿಹಿಸುದ್ದಿ ಕೊಟ್ಟ ರೈಲ್ವೆ ಸಚಿವರುಬೆಂಗಳೂರು ನಗರಕ್ಕೆ ಸಿಹಿಸುದ್ದಿ ಕೊಟ್ಟ ರೈಲ್ವೆ ಸಚಿವರು

ರೈಲ್ವೆ ಇಲಾಖೆಯು ಸೂಚಿಸುವ ಮಾರ್ಗದ ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ ಎಂಬ ಸುದ್ದಿಯೂ ಇದೆ. ಈ ಬೋಗಿಯಲ್ಲಿ ಸಂಚಾರ ನಡೆಸುವ ಜನರು ಹೆಚ್ಚಿನ ಪ್ರಯಾಣ ದರವನ್ನು ನೀಡಬೇಕಾಗುತ್ತದೆ ಎಂಬ ಚರ್ಚೆಯೂ ಸಾಗಿದೆ.

ಬೆಂಗಳೂರು-ಮಂಗಳೂರು: ಬೆಂಗಳೂರು-ಮಂಗಳೂರು ನಡುವಿನ ಹಗಲು ರೈಲಿಗೆ ಈ ಬೋಗಿ ಅಳವಡಿಕೆ ಮಾಡಲಾಗುತ್ತದೆ ಎಂಬ ಚರ್ಚೆ ಇದೆ. ಈ ಮಾರ್ಗದಲ್ಲಿ ಸುಬ್ರಮಣ್ಯ ರಸ್ತೆ-ಸಕಲೇಶಪುರ ಘಟ್ಟ ಪ್ರದೇಶದ 55 ಕಿ. ಮೀ. ಮಾರ್ಗದಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಈ ಬೋಗಿ ಉತ್ತಮವಾಗಿದೆ.

Recommended Video

ಮತ್ತೆ ಜನಸಾಮಾನ್ಯರಿಗೆ ಅನಿಲಾಘಾತ- ಅಡುಗೆ ಅನಿಲ ದರ 25 ರೂಪಾಯಿ ಹೆಚ್ಚಳ..! | Oneindia Kannada

ಭಾರತೀಯ ರೈಲ್ವೆ ನೈಋತ್ಯ ರೈಲ್ವೆಗೆ ಒಟ್ಟು 4 ವಿಸ್ಟಾಡಾಮ್ ಕೋಚ್ ರೈಲು ಬೋಗಿಯನ್ನು ಮಂಜೂರು ಮಾಡಿದೆ. ಪ್ರಸ್ತುತ ಒಂದು ಬೋಗಿ ಬೆಂಗಳೂರು ನಗರವನ್ನು ತಲುಪಿದೆ. ಮಾರ್ಚ್ ಅಂತ್ಯಕ್ಕೆ ಉಳಿದ ಮೂರು ಬೋಗಿ ನಗರಕ್ಕೆ ಬಂದು ಸೇರಲಿದೆ.

English summary
South Western Railways (SWR) received one Vistadome coach. For which train this coach will attach, Railway yet to decide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X