ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕತ್ತೆ ಹಾಲಿಗೆ ಭಾರೀ ಡಿಮಾಂಡ್‌ ಅಂತೆ!

|
Google Oneindia Kannada News

ಬೆಂಗಳೂರು, ಸೆ.2 : ಬೆಂಗಳೂರಿನ ಪ್ರತಿ ಬೀದಿಯಲ್ಲಿ ಕಾಲಿಟ್ಟರೆ ನಂದಿನಿ ಹಾಲಿನ ಬೂತ್ ಕಾಣಿಸುತ್ತದೆ, ಜೊತೆಗೆ ಹಾಲು ದೊರೆಯುತ್ತದೆ. ಆದರೆ, ಆಶ್ಚರ್ಯವೆಂಬಂತೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದುಬಾರಿ ಬೆಲೆಗೆ ಕತ್ತೆ ಹಾಲು ಮಾರಾಟವಾಗುತ್ತಿದೆ.

ನಗರದ ನಾಗರಬಾವಿ, ಚಂದ್ರಾಲೇಔಟ್‌, ಸುಂಕದಕಟ್ಟೆ, ಅಂಜನಾನಗರ, ಆರ್‌.ಟಿ.ನಗರ, ಗಂಗಾನಗರ, ಹೆಬ್ಬಾಳ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕತ್ತೆ ಹಾಲು ಮಾರಾಟ ಜೋರಾಗಿದೆ. ಕತ್ತೆಗಳನ್ನು ಹೊಡೆದುಕೊಂಡು ಬರುವ ಜನರು ಸ್ಥಳದಲ್ಲಿಯೇ ಹಾಲು ಕರೆದು ಮಾರಾಟ ಮಾಡಿ, ಹಣ ಪಡೆಯುತ್ತಾರೆ.

donkey

ಪ್ರತಿ ವಳಲೆ ಕತ್ತೆ ಹಾಲಿಗೆ 50 ರಿಂ 100 ರೂ. ದರ ನಿಗದಿ ಮಾಡಲಾಗಿದೆ. ಒಂದು ಲೀಟರ್ ಹಾಲು ಬೇಕಾದರೆ 1000 ರೂ. ಪಾವತಿ ಮಾಡಬೇಕಾಗುತ್ತದೆ. ಬೆಂಗಳೂರಿನ ಧೋಬಿಘಾಟ್‌ಗಳಿಗೆ ವಾಷಿಂಗ್ ಮೆಷಿನ್‌ಗಳು ಕಾಲಿಟ್ಟಿವೆ. ಆದ್ದರಿಂದ ಅಲ್ಲಿ ಕೆಲಸ ಕಳೆದುಕೊಂಡಿರುವ ಕತ್ತೆಗಳನ್ನು ಹೊಡೆದುಕೊಂಡು ಬಂದು ಹಾಲು ಮಾರಿ ಕೆಲವರು ಜೀವನ ಸಾಗಿಸುತ್ತಿದ್ದಾರೆ. [ಕತ್ತಿ ಲಗ್ನಾ ಮಾಡಿದ್ರ... ಮಳಿ ಹೆಂಗ ಬರತದ?]

ಮಕ್ಕಳ ಆರೋಗ್ಯ ಸಮಸ್ಯೆಗೆ ಕತ್ತೆ ಹಾಲು ರಾಮಬಾಣ ಎಂಬುದು ಜನರ ನಂಬಿಕೆ ಜೊತೆಗೆ ಇದು ಮಹಿಳೆಯರಲ್ಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬ ಜನರು ನಂಬಿದ್ದಾರೆ. ಆದ್ದರಿಂದ, ನಗರದ ವಿವಿಧ ಬಡಾವಣೆಗಳಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಪರಿಷತ್ತಿನಲ್ಲೂ ಚರ್ಚೆ ನಡೆದಿತ್ತು : ಕತ್ತೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವ ಬಗ್ಗೆ ಕೆಲವು ದಿನಗಳ ಹಿಂದೆ ವಿಧಾನಪರಿಷತ್ತಿನಲ್ಲಿಯೂ ಚರ್ಚೆ ನಡೆದಿತ್ತು. ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ, ಮಕ್ಕಳ ಹಕ್ಕುಗಳ ಮೇಲಿನ ಚರ್ಚೆಗೆ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಚಯಂದ್ರ ಅವರು ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿ, ಕತ್ತೆ ಹಾಲು ಮಕ್ಕಳಿಗೆ ನೀಡುವುದು ವೈಜ್ಞಾನಿಕವಾಗಿ ಸರಿಯೇ? ಇಲ್ಲವೇ ಎಂಬ ಬಗ್ಗೆ ಅಧ್ಯಯನ ನಡೆಸುವ ಕುರಿತು ಸರ್ಕಾರಕ್ಕೆ ಸಲಹೆ ನೀಡಿದ್ದೆ. ಆದರೆ, ಉತ್ತರ ಬಂದಿಲ್ಲ ಎಂದಿದ್ದರು.

ಕತ್ತೆ ಹಾಲಿನಲ್ಲಿ ಸೌಂದರ್ಯ ವರ್ಧಕ ಅಂಶಗಳಿವೆ ಎನ್ನುವ ಕಾರಣಕ್ಕೆ ಸಾವಿರಾರು ವರ್ಷಗಳ ಹಿಂದೆ ಈಜಿಫ್ಟ್‌ನಲ್ಲಿ ನೆಲೆಸಿದ್ದ ರಾಣಿ ಕ್ಲಿಯೋಪಾತ್ರ ಕತ್ತೆ ಹಾಲಿನಲ್ಲಿ ದಿನವೂ ಅಭ್ಯಂಜನ ಮಾಡುತ್ತಿದ್ದರಂತೆ. ಅದಕ್ಕಾಗಿಯೇ ಅವರು 600 ಕತ್ತೆಗಳನ್ನು ಕಟ್ಟಿದ್ದರಂತೆ ಎಂದು ಪರಿಷತ್ತಿನಲ್ಲಿ ಉಗ್ರಪ್ಪ ಅವರು ವಿಷಯ ಪ್ರಸ್ತಾಪಿಸಿದ್ದನ್ನು ನೆನಪುಮಾಡಿಕೊಳ್ಳಬಹುದು.

English summary
Many continue to believe that donkey’s milk boosts immunity in newborns so demand for donkey’s milk is increasing in the Bangalore city. Traditionally, donkeys were reared by dhobis in the city, who would use them to carry bundles of clothes. People would approach dhobis and ask for donkey’s milk. 50 ml of donkey’s milk can cost between Rs. 50 and Rs. 300.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X