ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐದು ಲಕ್ಷ ರೂ. ಕೇಸಲ್ಲಿ ವೈಟ್ ಫೀಲ್ಡ್ ಸೈಬರ್ ಪೊಲೀಸರು ಮಾಡಿದ್ದೇನು?

|
Google Oneindia Kannada News

ಬೆಂಗಳೂರು, ಜು. 24: ಹಣಕಾಸಿನ ವಿವಾದ ಬಗೆಹರಿಸಲು ಐದು ಲಕ್ಷ ರೂ. ಲಂಚ ವಸೂಲಿ ಮಾಡಿ ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಇದೀಗ ಎಸಿಬಿ ತನಿಖೆಗೆ ಗುರಿಯಾಗಿದ್ದಾರೆ. ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರ ವಿರುದ್ಧ ಎಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವೈಟ್‌ಫೀಲ್ಡ್ ವಿಭಾಗದ ಸೈಬರ್ ಠಾಣೆ ಇನ್‌ಸ್ಪೆಕ್ಟರ್ ರೇಣುಕಾ, ಪಿಎಸ್ಐ ನವೀನ್, ಪೇದೆಗಳಾದ ಹೇಮಂತ್ ಮತ್ತು ಮಂಜುನಾಥ್ ವಿರುದ್ಧ ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ ಇನ್‌ಸ್ಪೆಕ್ಟರ್ ರೇಣುಕಾ ಮನೆಯಲ್ಲಿ ಎಸಿಬಿ ಪೊಲೀಸರು ಲಂಚದ ಹಣಕ್ಕಾಗಿ ಶೋಧ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ವೈಟ್‌ಫೀಲ್ಡ್ ನಿವಾಸಿ ಸುದೀಪ್ ಇಂಟೀರಿಯರ್ ಡಿಸೈನ್ ಗುತ್ತಿಗೆದಾರನಾಗಿದ್ದ ಶ್ವೇತಾ ಸಿಂಗ್ ಅವರ ಮನೆಯ ಇಂಟೀರಿಯರ್ ಡಿಸೈನ್ ಮಾಡುವ ಕೆಲಸ ಸಂಬಂಧ ಐದು ಲಕ್ಷ ರೂ. ಹಣ ಪಡೆದಿದ್ದರು. ಕೆಲಸ ಮಾಡಿಕೊಡದ ಕಾರಣ ಶ್ವೇತಾ ಸಿಂಗ್ ಸುದೀಪ್ ವಿರುದ್ಧ ಹಣ ಮೋಸ ಮಾಡಿರುವ ಆರೋಪ ಹೊರಿಸಿ ವೈಟ್‌ಫೀಲ್ಡ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Demand for Bribe : ACB officials Registered case Against white field cyber station PI and PSi

ದೂರಿನ ಮೇರೆಗೆ ಸುದೀಪ್ ಅವರ ಮನೆಗೆ ತೆರಳೀದ್ದ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿ, "ನಿನ್ನ ಹಾಗೂ ನಿನ್ನ ಪತ್ನಿ ವಿರುದ್ದ ಚೀಟಿಂಗ್ ಕೇಸ್ ದಾಖಲಾಗಿದೆ ಎಂದೇಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ದೂರುದಾರರಿಗೆ ಐದು ಲಕ್ಷ ರೂ.ಹಣ ಜತೆಗೆ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗದಂತೆ ಮನೆಗೆ ಹೋಗಲು ಲಂಚದ ಹಣ ಹತ್ತು ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಾತ್ರವಲ್ಲ ಮನೆಗೆ ಬಿಡದೇ ಸುದೀಪ್ ಹಾಗೂ ಅವರ ಪತ್ನಿ ಸಿಸ್ನಾಸಿಂಗ್ ಅವರನ್ನು ಠಾಣೆಯಲ್ಲಿ ಕೂರಿಸಿದ್ದಾರೆ.

ಪರಿಚಿತರ ಮೂಲಕ ಹತ್ತು ಲಕ್ಷ ರೂ. ಹಣ ಬ್ಯಾಂಕ್ ಗೆ ಹಾಕಿಸಿಕೊಂಡು ಹಣವನ್ನು ತಲುಪಿಸಿದ್ದಾರೆ. ಇಷ್ಟಾಗಿಯೂ ಪುನಃ ಐದು ಲಕ್ಷ ರೂ. ಹಣ ನೀಡುವಂತೆ ಪಿಎಸ್ಐ ನವೀನ್ ಬೇಡಿಕೆ ಇಟ್ಟಿದ್ದಾರೆ. ಐದು ಲಕ್ಷ ರೂ. ಹಣ ವಾಪಸು ನೀಡಿದರೂ ಹತ್ತು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈಟ್ ಫೀಲ್ಡ್ ಸೈಬರ್ ಠಾಣೆ ಪೊಲೀಸರ ಮಾತುಕತೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಸುದೀಪ್ ಎಸಿಬಿಗೆ ಪೊಲೀಸರಿಗೆ ದೂರು ನೀಡಿದ್ದ.

Demand for Bribe : ACB officials Registered case Against white field cyber station PI and PSi

Recommended Video

Monsoon Latest Updates: ಮುಂಬೈನಲ್ಲಿ ವರುಣನ ಅಟ್ಟಹಾಸ ! | Oneindia Kannada

ದೂರಿನ ಮೇರೆಗೆ ಪ್ರಾಥಮಿಕ ತನಿಖೆ ನಡೆಸಿದ ಎಸಿಬಿ ಪೊಲೀಸರು ಪೊಲೀಸ್ ಇನ್‌ಸ್ಪೆಕ್ಟರ್ ರೇಣುಕಾ, ಪಿಎಸ್ಐ ನವೀನ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಐದು ಲಕ್ಷ ರೂ. ಹಣವನ್ನು ದೂರುದಾರೆಯ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಅದನ್ನು ಡ್ರಾ ಮಾಡಿಸಿಕೊಂಡಿದ್ದ ನವೀನ್ ಈ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ. ಐದು ಲಕ್ಷ ರೂ. ಹಣ ಕೊಡಿಸುವ ಪ್ರಕರಣದಲ್ಲಿ ಹತ್ತು ಲಕ್ಷ ರೂ. ಲಂಚದ ಹಣವನ್ನು ವಸೂಲಿ ಮಾಡಲು ಹೋಗಿ ಇದೀಗ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ.

English summary
Five lakh bribe case : ACB officials have lodged an FIR against four people, including the Inspector of Whitefield Cyber Station, for accepting a bribe know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X