ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆಲ್ ಉದ್ಯೋಗಿ ಪಾಯಲ್ ಕೊಲೆ ಕೇಸ್: ಜೇಮ್ಸ್ ಅಪರಾಧಿ ಎಂದ ಸಿಬಿಐ ಕೋರ್ಟ್

|
Google Oneindia Kannada News

ಬೆಂಗಳೂರು, ನವೆಂಬರ್ 06: ಜೆ.ಪಿ ನಗರದ ನಿವಾಸಿಯಾಗಿದ್ದ ಡೆಲ್ ಸಂಸ್ಥೆ ಉದ್ಯೋಗಿ ಪಾಯಲ್ ಸುರೇಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಅಂತಿಮ ತೀರ್ಪು ಹೊರಬೀಳುವ ಹಂತ ತಲುಪಿದೆ. ಜಿಮ್ ತರಬೇತುದಾರ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯವು ಇಂದು ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣ ನಾಳೆ ಪ್ರಕಟವಾಗಲಿದೆ.

ಸಿಬಿಐ ತಂಡವು 17ನೇ ಎಸಿಎಂಎಂ ನ್ಯಾಯಾಲಯದಲ್ಲಿ2015ರಲ್ಲಿ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲೂ ಜಿಮ್ ತರಬೇತುದಾರ ಜೇಮ್ಸ್ ಕುಮಾರ್ ರೇ ಅವರನ್ನು ಕೊಲೆಗಾರ ಎಂದು ಹೆಸರಿಸಲಾಗಿತ್ತು.

ಪಾಯಲ್ ತಂದೆ ದೀನದಯಾಳ್ ಸುರೇಖಾ ಮತ್ತು ಆರೋಪಿ ಜೇಮ್ಸ್ ಕುಮಾರ್ ರಾಯ್ ಸಲ್ಲಿಸಿದ ಎರಡು ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾ. ಕೆ.ಎಸ್.ರಾಧಾಕೃಷ್ಣನ್ ಹಾಗೂ ನ್ಯಾ. ದೀಪಕ್ ಮಿಶ್ರ ಅವರಿದ್ದ ನ್ಯಾಯಪೀಠ ಸಿಬಿಐ ತನಿಖೆಗೆ ನಿರ್ದೇಶಿಸಿತ್ತು. ಅದರಂತೆ ತನಿಖೆ ಕೈಗೆತ್ತಿಕೊಂಡ ಸಿಬಿಐ ತಂಡಕ್ಕೆ ಜೇಮ್ಸ್ ಕುಮಾರ್ ರೇ ಮಾತ್ರ ಈ ಪ್ರಕರಣದ ಪ್ರಮುಖ ಆರೋಪಿ ಎನ್ನುವುದಕ್ಕೆ ಸೂಕ್ತ ಆಧಾರ ಸಿಕ್ಕಿದೆ

ಇದಕ್ಕೂ ಮುನ್ನ ಜೆಪಿ ನಗರ ಪೊಲೀಸರು ಮುಂಚೆ ತನಿಖೆ ಕೈಗೊಂಡು ಜೇಮ್ಸ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಎತ್ತಿ ಹಿಡಿದಿರುವ ಸಿಬಿಐ ತಂಡ ಜೇಮ್ಸ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಕ್ಲೋಸ್ ಆದ ಕೇಸ್ ರೀ ಓಪನ್: ಡೆಲ್ ಬಿಪಿಒ ಉದ್ಯೋಗಿ, ಜೆಪಿನಗರ ಏಳನೇ ಹಂತದ ನಿವಾಸಿ ಪಾಯಲ್ ಸುರೇಖಾ(29) ಅಮಾನುಷ ಕೊಲೆ ಕೇಸ್ ಕ್ಲೋಸ್ ಆಗಿತ್ತು. ಈ ಪ್ರಕರಣ ತನಿಖೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಷರಾ ಹಾಕಿತ್ತು. ಸಿಬಿಐ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನ್ಯಾ ಆನಂದ್ ಅವರು ಎಸಿಪಿ ಜಿತೇಂದ್ರನಾಥ್ ಅವರಿಗೆ ನಿರ್ದೇಶನ ನೀಡಿ ಡಿಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ ಮುಂದುವರೆಸುವಂತೆ ಸೂಚಿಸಿದ್ದರು.

ಅಸ್ಸಾಂ ಮೂಲದ ಪಾಯಲ್ (29) ಅವರನ್ನು ಡಿ.17,2010ರಂದು ಜೆಪಿ ನಗರದ ತಮ್ಮ ಅಪಾರ್ಟ್ಮೆಂಟ್ ನಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ಜೇಮ್ಸ ಕುಮಾರ್ ರೇ ಅವರನ್ನು ನಾಲ್ಕು ದಿನದ ನಂತರ ಬಂಧಿಸಿದ್ದರು. ಅನಂತರ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದ ರೇ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ತನಿಖೆಯಿಂದ ಹಿಂದೆ ಸರಿದಿದ್ದ ಸಿಬಿಐ

ತನಿಖೆಯಿಂದ ಹಿಂದೆ ಸರಿದಿದ್ದ ಸಿಬಿಐ

ಜೆಪಿನಗರ ಏಳನೇ ಹಂತದ ನಿವಾಸಿ ಪಾಯಲ್ ಸುರೇಖಾ(29) ಅಮಾನುಷ ಕೊಲೆ ಕೇಸ್ ಕ್ಲೋಸ್ ಆಗಿದೆ. ಈ ಪ್ರಕರಣ ತನಿಖೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಷರಾ ಹಾಕಿ ಸಿಬಿಐ ತನ್ನ ಅಫಿಡವಿಟ್ ಅನ್ನು ಗುರುವಾರ(ಏ.19, 2013)ದಂದು ಕರ್ನಾಟಕ ಹೈಕೋರ್ಟ್ ಗೆ ಸಿಬಿಐ ತಂಡ ಸಲ್ಲಿಸಿತ್ತು. ಸಿಬಿಐ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನ್ಯಾ ಆನಂದ್ ಅವರು ಎಸಿಪಿ ಜಿತೇಂದ್ರನಾಥ್ ಅವರಿಗೆ ನಿರ್ದೇಶನ ನೀಡಿ ಡಿಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ ಮುಂದುವರೆಸುವಂತೆ ಸೂಚಿಸಿದರು

ಅಸ್ಸಾಂ ಮೂಲದ ಪಾಯಲ್ (29) ಅವರನ್ನು ಡಿ.17,2010ರಂದು ಜೆಪಿ ನಗರದ ತಮ್ಮ ಅಪಾರ್ಟ್ಮೆಂಟ್ ನಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು

ನಿಧಾನಗತಿಯ ತನಿಖೆ ನಡೆಸಿದ್ದ ಸಿಬಿಐ

ನಿಧಾನಗತಿಯ ತನಿಖೆ ನಡೆಸಿದ್ದ ಸಿಬಿಐ

ಕೆಳ ಹಂತದ ನ್ಯಾಯಾಲಯ ಸಿಬಿಐಗೆ ನಿರ್ದೇಶನ ನೀಡುವ ಅಧಿಕಾರ ಇಲ್ಲ ಎನ್ನುವ ಸಣ್ಣ ಕಾರಣ ಹಿಡಿದುಕೊಂಡು ತನಿಖೆ ವಿಳಂಬಗೊಳಿಸಿದ ಸಿಬಿಐ, ಈಗ ಕೇಸ್ ನಿಂದ ಕೈತೊಳೆದುಕೊಂಡಿತ್ತು. ಆದರೆ 2013ರಲ್ಲಿ ಕೈಬಿಟ್ಟ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡು ತನಿಖೆ ನಡೆಸಿ 2019ರಲ್ಲಿ ಕೊನೆಗೂ ಸಿಬಿಐ ನ್ಯಾಯಾಲಯಕ್ಕೆ ಅಂತಿಮ ದೋಷರೋಪಣ ಮಟ್ಟಿ ವರದಿ ಸಲ್ಲಿಸಿತ್ತು.

ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮಾತ್ರ ತನಿಖೆ ಆದೇಶಿಸಿದರೆ ಪ್ರಕರಣ ಕೈಗೆತ್ತಿಕೊಳ್ಳಬೇಕು ಎಂಬ ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿರುವ ಸಿಬಿಐ ಸೂಪಿರಿಯಾರಿಟಿ ಕಾಂಪ್ಲೆಕ್ಸ್ ಗೆ ಒಳಗಾದಂತೆ ನಡೆದುಕೊಂಡಿತ್ತು ಎಂದು ವಿಶ್ಲೇಷಿಸಬಹುದು.

ಪೊಲೀಸ್ ತನಿಖೆಯಲ್ಲಿ ಏನಾಗಿತ್ತು?

ಪೊಲೀಸ್ ತನಿಖೆಯಲ್ಲಿ ಏನಾಗಿತ್ತು?

ಪಾಯಲ್ ಸುರೇಖಾ ಕೊಲೆ ಕೇಸಿಗೆ ಮುಕ್ತಾಯ ಹಾಡಿರುವ ಜೆಪಿ ನಗರ ಪೊಲೀಸರು, ಪಾಯಲ್ ಪತಿ ಅನಂತ್ ನಾರಾಯಣ ಮಿಶ್ರಾ ಹೇಳಿಕೆ ಪಡೆದು ಆತನ ಬಿಸಿನೆಸ್ ಪಾರ್ಟ್ನರ್ ಜೇಮ್ಸ್ ಕುಮಾರ್ ರಾಯ್ ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಆದರೆ, ಪಾಯಲ್ ತಂದೆ ಮಾತ್ರ 'ನನ್ನ ಮಗಳ ಅತ್ತೆ ಮನೆಯರ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈಗ ಸಿಬಿಐ ಸಂಸ್ಥೆಯ ಬದಲಿಗೆ ಪೊಲೀಸರ ಕೈಗೆ ಕೇಸ್ ಒಪ್ಪಿಸಿತ್ತು. ಮೊದಲಿಗೆ ಮಿಶ್ರಾ ಮೇಲೆ ಸಂಶಯ ಮೂಡಿತ್ತು, ನಂತರ ಜೇಮ್ಸ್ ಬಂಧಿಸಿ ವಿಚಾರಿಸಲಾಯಿತು. ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡ ಎಂದು ಜೆಪಿನಗರ ಪೊಲೀಸರು ಕೇಸ್ ಕಥೆ ಮುಗಿಸಿದ್ದರು.

ಪಾಯಲ್ ದುರಂತ ಸಾವಿನ ಕಥೆ

ಪಾಯಲ್ ದುರಂತ ಸಾವಿನ ಕಥೆ

ಒಡಿಶಾ ಮೂಲದ ಜೇಮ್ಸ್ ರೇ, ಪಾಯಲ್ ಸುರೇಖಾಳ ಬಾಲ್ಯ ಸ್ನೇಹಿತ. ಅಲ್ಲದೇ ಆತ ಸುರೇಖಾರ ಪತಿ ಅನಂತ್ ನಾರಾಯಣ್ ಮಿಶ್ರಾಗೂ ಸ್ನೇಹಿತನಾಗಿದ್ದ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಜೇಮ್ಸ್ ಗೆ ಮಿಶ್ರಾ ಒಡೆತನದ ಜಿಮ್ ನಲ್ಲಿ ಕೆಲಸ ಕೊಡಿಸಿದ್ದ. ಪಾಯಲ್ ಕುಟುಂಬದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಆತ ಸುರೇಖಾರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಪೂರ್ವಯೋಜಿತ ಸಂಚಿನಂತೆ ಆತ, ಮಿಶ್ರಾ ಅವರು ಒಡಿಶಾಗೆ ಹೋಗಿದ್ದ ಸಂದರ್ಭವನ್ನು ನೋಡಿಕೊಂಡು ಅವರ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆ. ಪಾಯಲ್ ಸ್ತನ, ಗುಪ್ತಾಂಗಗಳ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಆದರೆ, ಪಾಯಲ್ ಮೇಲೆ ಅತ್ಯಾಚಾರ ಎಸೆಗಿಲ್ಲ ಎಂದು ಜೆಪಿ ನಗರ ಠಾಣೆ ಪೊಲೀಸರು ಕೊಲೆ ಕೇಸ್ ಕಥೆ ಹೇಳಿದ್ದರು.

ನನ್ನ ಪತಿ ಅಮಾಯಕ ಎಂದಿದ್ದ ಸ್ಮೃತಿರೇಖಾ ರಾಯ್

ನನ್ನ ಪತಿ ಅಮಾಯಕ ಎಂದಿದ್ದ ಸ್ಮೃತಿರೇಖಾ ರಾಯ್

ನನ್ನ ಪತಿ ಅಮಾಯಕ, ಈ ಪ್ರಕರಣದಲ್ಲಿ ಅವರನ್ನು ಬಲಿಪಶು ಮಾಡಲಾಗಿದೆ, ಸಿಬಿಐ ತನಿಖೆ ನಂತರ ಸತ್ಯ ಹೊರಬೀಳಲಿದೆ. ಪಾಯಲ್ ಳನ್ನು ಜೇಮ್ಸ್ ಕೊಂದಿಲ್ಲ. ಜೆಪಿ ನಗರ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದರು ಎಂದು ಜೇಮ್ಸ್ ಪತ್ನಿ ಸ್ಮೃತಿರೇಖಾ ರೇ ಪ್ರತಿಕ್ರಿಯಿಸಿದ್ದಾರೆ.

ಡೆಲ್ ಉದ್ಯೋಗಿಯಾಗಿದ್ದ ಪಾಯಲ್ ಸಾವಿನ ನಂತರ ಅನಂತ್ ಗೆ ವಿಮೆ ಹಣದ ರೂಪದಲ್ಲಿ 7 ಲಕ್ಷ ರು ಲಭಿಸಿದೆ. ಆದರೆ, ಪಾಯಲ್ ತಂದೆಗೆ ಇನ್ನೂ ಅನಂತ್ ಮೇಲೆ ಸಂಶಯವಿದೆ ಎಂದು ಪೊಲೀಸರು ಹೇಳಿದ್ದರು.

ಅತ್ಯಂತ ಕ್ರೂರವಾಗಿ ಕೊಲ್ಲಲಾಗಿತ್ತು

ಅತ್ಯಂತ ಕ್ರೂರವಾಗಿ ಕೊಲ್ಲಲಾಗಿತ್ತು

ಜೆ.ಪಿ.ನಗರ ಏಳನೇ ಹಂತದ ಲಕ್ಷ್ಮಿ ಲೇಔಟ್‌ನ ರಮಣಬಾಹು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಸುರೇಖಾ ಅವರನ್ನು ಡಿ.17ರಂದು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಲ್ಲದೇ ಅವರ ಎಡ ಸ್ತನದ ಸುತ್ತಮುತ್ತ ಹನ್ನೊಂದು ಬಾರಿ ಹಾಗೂ ಗುಪ್ತಾಂಗದ ಸುತ್ತಮುತ್ತ ನಾಲ್ಕು ಬಾರಿ ಚಾಕುವಿನಿಂದ ಇರಿಯಲಾಗಿತ್ತು. ಈ ಕೇಸ್ ನಲ್ಲಿ ಮೊದಲು ಪಾಯಲ್ ಅವರ ಪತಿ ಮಿಶ್ರಾ ಅವರ ಮೇಲೆ ಸಂಶಯ ವ್ಯಕ್ತವಾಗಿತ್ತು. ಸುಪಾರಿ ಕೊಲೆ ಇರಬಹುದು ಎಂದು ಪೊಲೀಸರು ಮೊದಲಿಗೆ ಶಂಕಿಸಿದ್ದರು. ಆರೋಪಿ ಜೇಮ್ಸ್ ನನ್ನು ತನಿಖಾಧಿಕಾರಿ ಎಸ್ ಕೆ ಉಮೇಶ್ ಬಂಧಿಸಿ ಕೆಳಹಂತದ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

English summary
Dell employee Payal Surekha murder: The Central Bureau of Investigation (CBI) special court on Wednesday pronounced James Kumar Ray, a gym instructor is convicted in this case. Dell BPO employee Payal Surekha A native of Assam, Payal, 29, was found murdered in her apartment in JP Nagar, Bangalore on December 17, 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X