• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈನು ಮತ್ತು ವಯನಾದ ಊಟಕ್ಕೆ ಫೈನ್ ಹೋಟೆಲ್

By Rajendra
|

ಬೆಂಗಳೂರು, ಡಿ.30 : ಡೆಲಿಕಟೆಸನ್, ಮಧುಲೋಕದ ಒಂದು ಹೊಸ ಡೆಲಿ, ಇದು ಇಂದು ಸಾರ್ವಜನಿಕರಿಗೆ ತೆರೆದಿದ್ದು, ಭೋಜನರಸಿಕತೆಯ ಸಂತುಷ್ಟ ಜಗತ್ತಿನ ಭರವಸೆಯನ್ನು ನಿಮಗೆ ನೀಡುತ್ತದೆ. ಪ್ರಸಿದ್ಧ ಮಾಲೆಕ್ಯುಲಾರ್ ಗ್ಯಾಸ್ಟ್ರಾನಮಿ ಚೆಫ್ ಮತ್ತು ಫಾವಾ, ಕ್ಯಾಪರ್ ಬೆರ್ರಿ ಮತ್ತು ಸಾಹಾ ಸಿಗ್ನೇಚರ್ ಇಂಡಿಯನ್ ರೆಸ್ಟೋರೆಂಟ್ ಮತ್ತು ಸಿಂಗಾಪುರದ ಟೆರೇಸ್ ಬಾರ್ ನ ಮಾಲೀಕರಾಗಿರುವ ಚೆಫ್ ಅಭಿಜಿತ್ ಸಾಹಾ ಇದರ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಡೆಲಿಕಟೆಸನ್ ನಿಮಗೆ ಅದ್ಭುತ ಭೋಜನರಸಿಕ ಅನುಭವ ಒದಗಿಸುತ್ತದೆ.

ಕುಂದಲಹಳ್ಳಿ ಗೇಟ್ ನಲ್ಲಿರುವ ಸ್ಟಾರ್ ಎಕ್ಸ್ಟ್ರಾ ಮತ್ತು ಟೆಸ್ಕೋದ ಮೇಲೆ ಡೆಲಿಕಟೆಸನ್ ಕಾರ್ಯಾರಂಭ ಮಾಡಿದ್ದು, ಬೆಚ್ಚನೆಯ ಹಾಗೂ ಆಕರ್ಷಕ ಒಳಾಂಗಣ ನಿಮ್ಮನ್ನು ಸ್ವಾಗತಿಸುತ್ತದೆ. ನಗರದ ದೈನಂದಿನ ಜೀವನದ ಜಂಜಡದಿಂದ ಪ್ರತ್ಯೇಕವಾಗಿರಲು ಹೇಳಿಮಾಡಿಸಿದ ತಾಣದಂತಿದೆ. ನೀವು ವ್ಯವಹಾರದ ಮಾತುಕತೆಗೋ, ಗೆಳೆಯರೊಂದಿಗಿನ ಹರಟೆಗೆ, ಮಾತುಕತೆಗೆ ಈ ಡೈನಿಂಗ್ ಏರಿಯಾ ಉತ್ತಮ ಸ್ಥಳವಾಗಿದೆ.

ಡೆಲಿಕಟೆಸನ್ ನ ವಿಶೇಷತೆ ಎಂದರೆ, ಇದು ಕಪ್ಪುಹಲಿಗೆ ಮೆನು ತತ್ವದ ಆಧಾರಿತವಾಗಿದೆ ಹಾಗೂ ಪ್ರತಿ ದಿನ ಏನಾದರೊಂದು ವಿಶೇಷ ಆಯ್ಕೆಯನ್ನು ನೀವು ಇಲ್ಲಿ ಎದುರು ನೋಡಬಹುದು. ಒಂದರ ಹಿಂದೆ ಒಂದು ಸತತ ಎರಡು ಭೋಜನಗಳು ಒಂದೇ ರೀತಿ ಆಗಿರುವುದೇ ಇಲ್ಲ. ಮೆನುವಿನಲ್ಲಿ ಕೆಲವು ಕ್ಲಾಸಿಕ್ ಡೆಲಿ ಖಾದ್ಯಗಳಾದ ಸಲಾಡ್ ಗಳು, ಸ್ಯಾಂಡ್ ವಿಚ್ ಗಳು, ಬರ್ಗರ್ ಗಳು ಮತ್ತು ಪಿಜ್ಜಾಗಳನ್ನು ನೀವು ಕಾಣಬಹುದು.

ಪ್ರತಿ ಖಾದ್ಯ ಒದಗಿಸುವ ಭೋಜನರಸಿಕತೆಯ ಅನುಭವ ನಿಮಗೆ ಸಂಪೂರ್ಣ ಅಚ್ಚರಿ ನೀಡಲಿದೆ. ಸ್ವಾದ, ಸಂಯೋಜನೆ ಮತ್ತು ತಾಜಾ ಆಗಿ ಒದಗಿಸುವಲ್ಲಿ ಹೆಚ್ಚಿನ ಗಮನ ನೀಡಲಾಗುತ್ತದೆ. ನೀವು ಏನನ್ನು ಮತ್ತು ಎಷ್ಟು ಇಷ್ಟಪಡುತ್ತೀರಿ ಅನ್ನುವುದರ ಮೇಲೆ ಹಾಫ್ ಅಥವಾ ಫುಲ್ ಭಾಗವನ್ನು ಸರ್ವ್ ಮಾಡಲಾಗುತ್ತದೆ.

ಈ ಡೆಲಿ ಜತೆಗೆ ಸುಸಜ್ಜಿತ ವೈನ್ ಬಾರ್ ಇದ್ದು, ಅದು ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ವೈನ್ ಲೇಬಲ್ ಗಳ ಆಯ್ಕೆಯನ್ನು ಹೊಂದಿದೆ. ನಿಮ್ಮ ಸ್ಯಾಂಡ್ ವಿಚ್ ಜತೆಗೆ ಒಂದು ಗ್ಲಾಸ್ ವೈನ್ ಜತೆಗೂಡಿಸಿ. ಒಂದು ವಿಶಿಷ್ಟ ರೆಫ್ರಿಜರೇಟರ್ ಅದ್ಭುತ ವೈನ್ ಗಳ ಸಂಗ್ರಹವನ್ನೇ ಹೊಂದಿದೆ, ತಣ್ಣನೆಯದರಿಂದ ಹಿಡಿದು ಸರಿಯಾದ ತಾಪದ ತನಕ ಒಂದು ಬಾಟಲಿ ಪಡೆದುಕೊಳ್ಳಲು ಸುಲಭ ಮಾಡಿದೆ. ಕೆಲವು ದಿನಗಳ ಸ್ಪೆಶಲ್ ಆಫ್ ಮೆನುವನ್ನು ಬಾಚಿಕೊಳ್ಳಿ. ಉತ್ತಮ ಆಹಾರ ಹಾಗೂ ಉತ್ತಮ ವೈನ್ ಯಾವಾಗಲೂ ಅದ್ಭುತವಾದ ಜೋಡಿಯಾಗಿದೆ.

ಈ ಡೆಲಿಯ ಪ್ರಾರಂಭವು ಮಧುಲೋಕದ ಎರಡನೇ ವೈನ್ ಎಕ್ಸ್ ಪ್ರೆಸ್ ನ ಉದ್ಘಾಟನೆಯನ್ನೂ ಕಂಡಿದೆ. ಉದ್ಘಾಟನೆ ವೇಳೆ ಮಾತನಾಡಿದ ಮಧುಲೋಕದ ಡೆಲಿಕಟೆಸೆನ್ ಸಂಸ್ಥಾಪಕ ಲೋಕೇಶ್ ಕಸ್ಲಗೆರೆ, "ಉತ್ತಮ ಆಹಾರ ಮತ್ತು ಉತ್ತಮ ವೈನ್ ಯಾವಾಗಲೂ ಅದ್ಭುತ ಜೋಡಿಯಾಗಿದೆ. ಆದರೆ ಅದನ್ನು ಮಾಮೂಲಿ ಕುಳಿತುಕೊಳ್ಳುವ ಮಾದರಿಯ ರೆಸ್ಟೋರೆಂಟ್ ಗೆ ಯಾಕೆ ಸೀಮಿತಗೊಳಿಸಬೇಕು?

ಡೆಲಿಕಟೆಸೆನ್ ಈ ಎರಡೂ ಸಂಗತಿಗಳನ್ನು ಕ್ಯಾಶುವಲ್ ವಾತಾವರಣದಲ್ಲಿ ಆರಾಮವಾಗಿ ಕುಳಿತುಕೊಂಡು ಉತ್ತಮ ಆಹಾರ ಹಾಗೂ ವೈನ್ ಸೇವಿಸುವ ಸೌಲಭ್ಯ ಕಲ್ಪಿಸಿದೆ. ಬೆಲೆಯ ವಿಚಾರದಲ್ಲಿ ಎಲ್ಲಾ ಖಾದ್ಯಗಳು ಕಿಸೆಸ್ನೇಹಿಯಾಗಿರುತ್ತವೆ ಎಂಬ ಖಾತರಿಯನ್ನು ನಾವು ನೀಡುತ್ತೇವೆ'' ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಲಾಗಿನ್ ಆಗಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delicatessen, the new Deli by Madhuloka promises you a world of gastronomic delights as it opens its doors to the public. Inaugurated by celebrated molecular gastronomy chef and owner of Fava, Caperberry and Saha Signature Indian Restaurant and Terrace bar in Singapore, Chef Abhijit Saha – Delicatessen, offers you a great fine gourmet experience. Placed atop Star Extra and Tesco in Kundalahalli Gate, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more