ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿ ಹಿಂಸಾಚಾರ: ಕೇಂದ್ರ ಸರ್ಕಾರದ ವೈಫಲ್ಯ ಎಂದ ದೇವೇಗೌಡ

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ದೆಹಲಿ ಹಿಂಸಾಚಾರದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷರ ಭಾರತ ಭೇಟಿ ಸಂದರ್ಭದಲ್ಲಿ ದೆಹಲಿಯಲ್ಲಿ ಗಲಾಟೆ ನಡೆದಿದ್ದು, ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಅವರು ಹೇಳಿದರು.

ಅಭಿವೃದ್ಧಿಗೆ ಜನರು ನೀಡಿದ ಗೆಲುವು: ಕೇಜ್ರಿವಾಲ್‌ಗೆ ದೇವೇಗೌಡರ ಶ್ಲಾಘನೆಅಭಿವೃದ್ಧಿಗೆ ಜನರು ನೀಡಿದ ಗೆಲುವು: ಕೇಜ್ರಿವಾಲ್‌ಗೆ ದೇವೇಗೌಡರ ಶ್ಲಾಘನೆ

ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿದೆ. ಟ್ರಂಪ್ ಕಡೆ ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಿತು. ಗಲಾಟೆ ವಿಚಾರದಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ ಎನಿಸುತ್ತಿದೆ ಎಂದು ಅವರು ಹೇಳಿದರು.

Delhi Violence Is Failure Of Central Intelligence :Deve Gowda

ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ಮಹದಾಯಿ ನದಿ ನೀರಿನ ಅಂತರ್ ರಾಜ್ಯಗಳ ನದಿ ನೀರು ಹಂಚಿಕೆ ಕುರಿತಂತೆ ಕೇಂದ್ರ ಸರ್ಕಾರದ ಅಧಿಸೂಚನೆ ಹೊರಡಿಸಿರುವುದನ್ನು ಸ್ವಾಗತಿಸುತ್ತೇನೆ ಎಂದರು.

ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ವಿಳಂಬ ಇಲ್ಲದೆ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಜನರು ತುಂಬಾ ಹೋರಾಟ ಮಾಡಿದ್ದಾರೆ ಇದು ಅವರ ಹೋರಾಟಕ್ಕೆ ದೊರೆತ ಜಯ ಎಂದರು.

ಯಡಿಯೂರಪ್ಪ ಮೂರು ವರ್ಷ ಅಧಿಕಾರ ನಡೆಸಲಿ: ದೇವೇಗೌಡ ಹಾರೈಕೆಯಡಿಯೂರಪ್ಪ ಮೂರು ವರ್ಷ ಅಧಿಕಾರ ನಡೆಸಲಿ: ದೇವೇಗೌಡ ಹಾರೈಕೆ

ಯಡಿಯೂರಪ್ಪ ಹುಟ್ಟುಹಬ್ಬ ಕಾರ್ಯಕ್ರಮದ ಬಗ್ಗೆ ಮಾತನಾಡಿದ ದೇವೇಗೌಡ, ''ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡುವಾಗ ಯಡಿಯೂರಪ್ಪ ಭಾವುಕರಾಗಿದ್ದರು. ನನ್ನನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಹೋಗಲು ಸಾಧ್ಯವಾಗದೆ ಶುಭಾಶಯದ ಸಂದೇಶವನ್ನು ಕಳುಹಿಸಿಕೊಟ್ಟೆ' ಎಂದರು.

English summary
Former prime minister Deve Gowda said, Delhi violence is failure of central intelligence. He also thanked central for ordering gazette notification for Mahadayi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X