• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರೀತಿಸಿ, ಅತ್ಯಾಚಾರವೆಸಗಿ ಓಡಿಹೋದ ಎಸ್‌ಐ!

By Ashwath
|

ಬೆಂಗಳೂರು, ಜು.3: ಯುವತಿಯೊಬ್ಬಳು ಕಬ್ಬನ್‌ಪಾರ್ಕ್ ಸಂಚಾರ ಠಾಣೆ ಸಬ್ ಇನ್ಸ್‌ಪೆಕ್ಟರ್ ಬಿ. ಧನಂಜಯ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಅತ್ಯಾಚಾರ ಹಾಗೂ ವಂಚನೆ ಸಂಬಂಧ ದೂರು ನೀಡಿದ್ದು ಎಸ್‌‌ಐ ಬಂಧನಕ್ಕೆ ದೆಹಲಿ ಪೊಲೀಸರು ನಗರದಲ್ಲಿ ಬೀಡು ಬಿಟ್ಟಿದ್ದಾರೆ.

ದೂರು ಆಧರಿಸಿ ನ್ಯಾಯಾಲಯ ಧನಂಜಯ್‌ ಅವರ ಬಂಧನಕ್ಕೆ ವಾರೆಂಟ್‌ ಜಾರಿ ಮಾಡಿರುವ ಹಿನ್ನಲೆಯಲ್ಲಿ ದೆಹಲಿ ಮಲ್ವಿಯಾ ನಗರ ಪೊಲೀಸ್ ಠಾಣೆ ಸಿಬ್ಬಂದಿ ಬಂಧನ ವಾರೆಂಟ್‌ನೊಂದಿಗೆ ನಗರಕ್ಕೆ ಆಗಮಿಸಿದ್ದಾರೆ. ವಿಷಯ ತಿಳಿದ ಎಸ್ಸೈ ಧನಂಜಯ ಅವರು ಎಂಟು ದಿನಗಳಿಂದ ಭೂಗತರಾಗಿದ್ದಾರೆ.

ಎಂ.ಜಿ.ರಸ್ತೆಯ ಪಬ್‌ವೊಂದರಲ್ಲಿ ದೆಹಲಿ ಮೂಲದ 28 ವರ್ಷದ ಯುವತಿ ಬಾರ್‌ಟೆಂಡರ್ ಆಗಿ ಕೆಲಸ ಮಾಡುತ್ತಿದ್ದಳು. 2012ರ ಡಿಸೆಂಬರ್‌ನಲ್ಲಿ ಅದೇ ಪಬ್‌ಗೆ ಹೋಗಿದ್ದ ಧನಂಜಯ್‌ ಅವರಿಗೆ ಆ ಯುವತಿ ಪರಿಚಯವಾಗಿತ್ತು. ನಂತರ ಫೇಸ್‌ಬುಕ್‌ನಲ್ಲಿ ಪರಸ್ಪರ ಚಾಟಿಂಗ್ ನಡೆಸಿ, ಆತ್ಮೀಯರಾಗಿದ್ದರು. ಕ್ರಮೇಣ ಅದು ಪ್ರೇಮಕ್ಕೆ ತಿರುಗಿದೆ.

ಯುವತಿಗೆ ಬಾಡಿಗೆ ಮನೆಯನ್ನು ಕೊಡಿಸಿ ಅವಳೊಂದಿಗೆ ಒಂದು ವರ್ಷ‌ಗಳ ಕಾಲ ಲಿವ್‌ ಇನ್‌ ಸಂಬಂಧವನ್ನು ಧನಂಜಯ್‌ ಹೊಂದಿದ್ದರು. ನಂತರದ ದಿನಗಳಲ್ಲಿ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು ಎನ್ನಲಾಗಿದೆ.

ಕೆಲ ತಿಂಗಳುಗಳಿಂದ ಯುವತಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಆಗ ಧನಂಜಯ ತನಗೆ ಮದುವೆಯಾಗಿ ಮಕ್ಕಳಿದ್ದಾರೆ. ಹೀಗಾಗಿ ಮದುವೆ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ. ಆದರೆ, ಮದುವೆಯಾಗದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಳು.[ಅತ್ಯಾಚಾರ, ಪಿಜಿ ನಿಯಂತ್ರಣಕ್ಕೆ ತಜ್ಞ ಸಮಿತಿ ರಚನೆ]

ಈ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಧನಂಜಯ್‌ ಅವರು ಯುವತಿಯನ್ನು ಮನವೊಲಿಸುವ ಸಲುವಾಗಿ 2014ರ ಮಾ.24ರಂದು ಆಕೆಯನ್ನು ನಂದಿಬೆಟ್ಟಕ್ಕೆ ಕರೆದೊಯ್ದಿದ್ದರು. ಆದರೆ, ಅದು ಸಫಲವಾಗದೆ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾಗ ಅವರ ಮಧ್ಯೆ ಜಗಳವಾಗಿದ್ದು, ಈ ವೇಳೆ ಅಪಘಾತವಾಗಿ ಧನಂಜಯ ತಲೆಗೆ ಪೆಟ್ಟಾಗಿತ್ತು.

ಈ ಸಮಯ ಬಳಸಿಕೊಂಡ ರಮಾ, ಧನಂಜಯರ ಸರ್ವಿಸ್ ರಿವಾಲ್ವರ್, ವಾಕಿಟಾಕಿ, ಎಟಿಎಂ ಕಾರ್ಡ್ ತೆಗೆದುಕೊಂಡು ಹೊಸದಿಲ್ಲಿಗೆ ಹೋಗಿದ್ದಳು ಎನ್ನಲಾಗಿದೆ.

ರಿವಾಲ್ವರ್ ಹಾಗೂ ವಾಕಿಟಾಕಿ ನಾಪತ್ತೆಯಾಗಿರುವ ವಿಚಾರ ಹಿರಿಯ ಅಧಿಕಾರಿಗಳಿಗೆ ತಿಳಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಆತಂಕಗೊಂಡ ಧನಂಜಯ, ದಿಲ್ಲಿಗೆ ತೆರಳಿ ಯುವತಿಯ ಓಲೈಸಿದ್ದಾರೆ. ಅಲ್ಲೂ ಆಕೆ ಎಸ್‌ಐ ಅವರನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.

ಯುವತಿಯ ಒತ್ತಾಯಕ್ಕೆ ಮಣಿದು ಆಕೆಯನ್ನು ಅಲ್ಲಿಯೇ ವಿವಾಹವಾಗಿದ್ದರು. ನಂತರ ಆಕೆ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದು ದೆಹಲಿಯಲ್ಲೇ ನೆಲೆಸುವಂತೆ ಧನಂಜಯ್‌ ಅವರಲ್ಲಿ ಒತ್ತಡ ಹೇರಿದ್ದಳು. ಆದರೆ ಧನಂಜಯ್‌ ಅವರು ಬೆಂಗಳೂರಿಗೆ ವಾಪಸ್‌ ಬಂದಿದ್ದಾರೆ. ಇದರಿಂದ ಕೋಪಗೊಂಡ ಯುವತಿ ಅತ್ಯಾಚಾರ ಮತ್ತು ವಂಚನೆ ಆರೋಪದಡಿ ದೆಹಲಿಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಧನಂಜಯ್‌ ಅವರು ನಕಲಿ ಕ್ರೆಡಿಟ್ ಕಾರ್ಡ್‌ ತಯಾರಿಸುತ್ತಿದ್ದ ಅಂತರರಾಷ್ಟ್ರೀಯ ಮಟ್ಟದ ವಂಚಕರ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 28-year-old woman had filed a private complaint in a Delhi court, alleging that Dhananjaya B, had married her without disclosing that he was already married and raped her.A Delhi Police team from Malviya Nagar has reached Bangalore city to arrest a Bangalore Police sub-inspector accused of rape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more