ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾತೆ ಸ್ಥಗಿತ, PACL ಕಚೇರಿಗೆ ಠೇವಣಿದಾರರ ಮುತ್ತಿಗೆ

By Srinath
|
Google Oneindia Kannada News

ಬೆಂಗಳೂರು, ಏ.22: ಮೋಸ ಮಾಡುವವರು ಹತ್ತಾರು ಮಂದಿಯಿದ್ದರೆ, ಮೋಸ ಹೋಗೋದಕ್ಕೇ ಅಂತಾನೆ ನೂರಾರು ಮಂದಿ ಇರುತ್ತಾರಂತೆ. ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಜನರ ಮನದಲ್ಲಿ ಯಾವಾಗ ಹೆಚ್ಚು ದುಡ್ಡು ಮಾಡುವ ಆಸೆ ಬಂತೋ ಆ ಕಾಲದಿಂದಲೂ ಎರಡೂ ವರ್ಗದ ಜನ ಇದ್ದಾರೆ. ಇಷ್ಟಾದರೂ ಮೋಸ ಹೋಗುವ ಮಂದಿ ಎಚ್ಚೆತ್ತುಕೊಳ್ಳುವುದಿಲ್ಲವಲ್ಲಾ ಎಂಬುದೇ ಬೇಸರದ ಸಂಗತಿ.

ಅಂದಹಾಗೆ ದೆಹಲಿ ನೆಲೆಯ PACL (Pearls) ಮತ್ತು PGF ಎಂಬ 2 ಕಂಪನಿಗಳು ಮಹಾ ದಗಾಕೋರ ಕಂಪನಿಗಳು ಜನರಿಗೆ ಬರೋಬ್ಬರಿ 45,000 ಕೋಟಿ ರೂ ಅಗಾಧ ಪ್ರಮಾಣದ ವಂಚನೆ ಮಾಡಿದೆ ಎಂದು ಸಿಬಿಐ ತನಿಖಾ ಸಂಸ್ಥೆಯು ತನಿಖೆ ಕೈಗೆತ್ತಿಕೊಂಡಿದ್ದರ ಬಗ್ಗೆ ಈ ಹಿಂದೆ ಓದಿದ್ದಿರಿ. ಅದರ ಮುಂದುವರಿದ ಭಾಗವಾಗಿ, ಈ ಸಂಸ್ಥೆಗಳ ಏಜೆಂಟರುಗಳ ಕೈಗೆ ತಿಂಗಳಾ ತಿಂಗಳಾ ವಂತಿಗೆ ತುಂಬುತ್ತಾ ಲಕ್ಷಾಂತರ ರೂಪಾಯಿ ಕಳೆದುಕೊಂಡ ಕರ್ನಾಟಕದ ಜನ ಈಗ ನಿಜಕ್ಕೂ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.

delhi-pacl-pgf-companies-fraud-depositors-attack-office-at-bangalore
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ PACL(Pearls) ಸಂಸ್ಥೆಯ ವ್ಯವಹಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಠೇವಣಿದಾರರು ಸೋಮವಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಜನರಿಂದ ಠೇವಣಿ ಸಂಗ್ರಹಿಸುತ್ತಿದ್ದ ಈ ಕಂಪನಿಯು ಚಂದಾದಾರರು ಬಯಸಿದ ಕಡೆ ನಿವೇಶನ ಅಥವಾ ಶೇ. 12ರಷ್ಟು ಬಡ್ಡಿ ಸೇರಿಸಿ, ನಗದು ಪಾವತಿ ಮಾಡುವ ಸ್ಕೀಂ ನಡೆಸುತ್ತಿತ್ತು.

PACL(Pearls) ಕಂಪನಿಯಲ್ಲಿ ಅವ್ಯವಹಾರ/ಅಕ್ರಮಗಳು ನಡೆಯುತ್ತಿವೆ ಎಂದು ದೂರುಗಳು ಕೇಳಿಬಂದಾಗ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿದೆ. ಅದರಂತೆ ದಿಲ್ಲಿ ಹೈಕೋರ್ಟಿನಲ್ಲಿ ವಿಚಾರಣೆ ಸಹ ನಡೆಯುತ್ತಿದೆ. ಹಾಗಾಗಿ ಕಂಪನಿಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಕೋರ್ಟ್ ಆದೇಶ ನೀಡಿದೆ. (PACL 45000 ಕೋ ರೂ ಹಗರಣ ಬಯಲಿಗೆಳೆದ ಸಿಬಿಐ!)

ಆದರೆ ಫೆ. 26ಕ್ಕೂ ಮೊದಲು ಕಂಪನಿ ಕೊಟ್ಟಿದ್ದ ಚೆಕ್ ಗಳು ಬೌನ್ಸ್ ಆಗಿ ಠೇವಣಿದಾರರಲ್ಲಿ ಆತಂಕ ಮೂಡಿಸಿದೆ. ಆತಂಕಕ್ಕೊಳಗಾದ ಠೇವಣಿದಾರರು ನಿನ್ನೆ ಕಚೇರಿಗೆ ಮುತ್ತಿಗೆ ಹಾಕಿ ಅಲ್ಲಿದ್ದ ಏಜೆಂಟರುಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಷಯ ತಿಳಿದ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಧಾವಿಸಿ, ವಿಚಾರಣೆ ನಡೆಸಿದ್ದಾರೆ

English summary
Delhi PACL (Pearls) - PGF companies fraud - Rs 45000 crore scam unearthed by CBI effect intesifies. Hundreds of depositors attacked PACL office at Cunningham Road, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X