• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗರೇ..ನಿಮ್ಮ ವಾಹನದ ಕೊನೆ ಸಂಖ್ಯೆ ಯಾವುದು?

|

ಬೆಂಗಳೂರು, ಡಿಸೆಂಬರ್, 18: ದೇಶದ ರಾಜಧಾನಿ ನವದೆಹಲಿಯಲ್ಲಿ ಜನವರಿ 1 ರಿಂದ ಜಾರಿಗೆ ಬರಲಿರುವ ಸಮ-ಬೆಸ ವಾಹನ ಸಂಚಾರ ಪದ್ಧತಿಯನ್ನೂ ಬೆಂಗಳೂರಿಗೂ ಅಳವಡಿಸಿಕೊಳ್ಳುವ ಚಿಂತನೆಯಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ.

ಮಹಾನಗರ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಇದು ನೆರವು ನೀಡಬಹುದು. ಬೆಂಗಳೂರಲ್ಲಿ ಸುಮಾರು 58 ಲಕ್ಷ ವಾಹನಗಳಿವೆ. ಪದ್ಧತಿ ಅಳವಡಿಸಿಕೊಂಡರೆ ಅರ್ಧದಷ್ಟು ವಾಹನಗಳು ರಸ್ತೆಗೆ ಇಳಿಯುತ್ತವೆ ಎಂದು ಪರಮೇಶ್ವರ ಹೇಳಿದ್ದಾರೆ.[ಕರ್ಕಶ ಹಾರ್ನಿಗೆ ಸಾವಿರ ದಂಡ, ಭಲೇ ಬೆಂಗಳೂರು ಪೊಲೀಸ್!]

ಸಿಲ್ಕ್ ಬೋರ್ಡ್ ಜಂಕ್ಷನ್, ಕೆಂಪೇಗೌಡ ಏರ್ ಪೋರ್ಟ್ ರಸ್ತೆ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು. ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದು ಹೊಸದಾಗಿ 16 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಟ್ರಾಫಿಕ್ ಟಾಸ್ಕ್ ಫೋರ್ಸ್ ರಚನೆ ಕುರಿತು ಚಿಂತನೆ ನಡೆದಿದೆ. ಹೆಬ್ಬಾಳದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ರಸ್ತೆ ಅಗಲೀಕರಣ ಮಾಡುವ ಯೋಜನೆಯೂ ಸರ್ಕಾರದ ಮುಂದಿದೆ ಎಂದರು.[ದೆಹಲಿಯಲ್ಲಿ ಕಾರು ಕೊಳ್ಳಲು ಸಾಧ್ಯವೇ ಇಲ್ಲ]

ದೆಹಲಿ ಸರ್ಕಾರ ಟ್ರಾಫಿಕ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಅಲ್ಲದೇ ಮುಂದಿನ ಮಾರ್ಚ್ 1 ರವರೆಗೆ ಐಷಾರಾಮಿ ಕಾರು ನೋಂದಣಿ ಮಾಡುವಂತೆ ಇಲ್ಲ ಎಂದು ತಿಳಿಸಿದೆ. ಒಂದು ವೇಳೆ ಈ ಕಾನೂನನ್ನು ಮುರಿದಲ್ಲಿ ಸ್ಥಳದಲ್ಲೇ 2000 ರು. ದಂಡ ವಿಧಿಸಲು ಆದೇಶ ನೀಡಲಾಗಿದೆ.

ಏನಿದು ಸಮ-ಬೆಸ ಯೋಜನೆ?

ನಿಮ್ಮ ವಾಃನದ ಕೊನೆ ಸಂಖ್ಯೆ ಸಮಸಂಖ್ಯೆಯಾಗಿದೆಯೋ ಅಥವಾ ಬೆಸ ಸಂಖ್ಯೆಯೋ ಎಂಬ ಆಧಾರದಲ್ಲಿ ನಿಮಗೆ ವಾಹನ ಹೊರಗೆ ತೆಗೆಯಲು ಅವಕಾಶ ನೀಡಲಾಗುತ್ತದೆ. ಸರಕಾರ ಅಥವಾ ಸಾರಿಗೆ ಇಲಾಖೆ ಸೂಚಿಸಿದ ದಿನದಂದು ಸಮ ಅಥವಾ ಬೆಸ ಸಂಖ್ಯೆಯ ವಾಹನಗಳು ಸಂಚಾರ ಮಾಡಬೇಕು. ಅವು ದ್ವಿಚಕ್ರ ವಾಹನ ಇರಬಹುದು ಅಥವಾ ನಾಲ್ಕು ಚಕ್ರದ ವಾಹನ ಇರಬಹುದು. ಅಂದರೆ ಸರಳವಾಗಿ ನಿಮ್ಮ ವಾಹನದ ಸಂಖ್ಯೆಯ ಆಧಾರದ ಮೇಲೆ ರಸ್ತೆಗೆ ಪ್ರವೇಶ ಪಡೆದುಕೊಳ್ಳಬೇಕಾಗುತ್ತದೆ.

ಬೆಂಗಳೂರಿಗೆ ಸಮ-ಬೆಸ ಯೋಜನೆ ಬೇಕೆ? ಓಟ್ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In what could be a shocker to the people of Bengaluru, the state government is mulling to implement a Delhi-like even-odd vehicle scheme in the 'city of gardens' to curb traffic snarls on the city roads. As per a report published in The Indian Express, Karnataka Home Minister G Parameshwara has admitted that managing city's traffic was a great challenge and that the government is not averse to introducing even-odd vehicle registration rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more