ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ವಿಲೇವಾರಿ ಟೆಂಡರ್; ಬಿಬಿಎಂಪಿಗೆ ಪ್ರತಿ ತಿಂಗಳು 2 ಕೋಟಿ ನಷ್ಟ

|
Google Oneindia Kannada News

ಬೆಂಗಳೂರು, ಮಾರ್ಚ್ 04 : ಬೆಂಗಳೂರು ನಗರದ ಕಸದ ಸಮಸ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಬಿಳಿಯಾನೆ ಸಾಕಿದ ರೀತಿ ಆಗುತ್ತಿದೆ. ಸರಿಯಾದ ಸಮಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸ ಕಾರಣ ಪ್ರತಿ ತಿಂಗಳು ಪಾಲಿಕೆಗೆ 2 ಕೋಟಿ ನಷ್ಟವಾಗುತ್ತಿದೆ. ಈ ನಷ್ಟ ಜನರು ಕಟ್ಟಿದ ತೆರಿಗೆ ಹಣದ್ದು ಎಂಬುದು ಗಮನಿಸಬೇಕಾದ ಅಂಶ.

18/1/2019ರಂದು ಬಿಬಿಎಂಪಿ ನಗರದ ಕಸ ವಿಲೇವಾರಿಗೆ ಒಂದು ಟೆಂಡರ್ ಕರೆದಿತ್ತು. ಒಂದು ವರ್ಷ ಕಳೆದರೂ ಈ ಟೆಂಡರ್ ಇನ್ನೂ ಅಂತಿವಾಗಿಲ್ಲ. ಆದ್ದರಿಂದ, ಹಳೆಯ ಗುತ್ತಿಗೆದಾರರ ಕೈಯಲ್ಲಿಯೇ ಕಸ ವಿಲೇವಾರಿ ಹೊಣೆ ಇದ್ದು, ಇದು ಪಾಲಿಕೆಗೆ ನಷ್ಟ ಉಂಟು ಮಾಡುತ್ತಿದೆ.

ಬಿಬಿಎಂಪಿ ಮತ್ತೊಂದು ಹಗರಣ ಎಸಿಬಿ ತನಿಖೆಗೆಬಿಬಿಎಂಪಿ ಮತ್ತೊಂದು ಹಗರಣ ಎಸಿಬಿ ತನಿಖೆಗೆ

2019ರಲ್ಲಿ ಆನ್‌ಲೈನ್ ಮೂಲಕ 198 ವಾರ್ಡ್‌ಗಳ ರಸ್ತೆಯಲ್ಲಿನ ಕಸ, ಮನೆಯಿಂದ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವ ಟೆಂಡರ್ ಕರೆಯಲಾಗಿತ್ತು. 167 ವಾರ್ಡ್ ಟೆಂಡರ್ ಅಂತಿಮವಾಯಿತು. 30 ವಾರ್ಡ್‌ಗಳ ಟೆಂಡರ್‌ಗೆ ನ್ಯಾಯಾಲಯದ ತಡೆಯಾಜ್ಞೆ ಇದ್ದು, ಅಂತಿಮಗೊಂಡಿಲ್ಲ.

ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...

Delay In Garbage Disposal Tender Monthly 2 Crore Loss For BBMP

ಯಾವುದೇ ಸಂಸ್ಥೆ ಟೆಂಡರ್ ಸಲ್ಲಿಸಿದ ಕಾರಣ ಒಂದು ವಾರ್ಡ್ ಬಾಕಿ ಉಳಿಯಿತು. ಒಟ್ಟು 569 ಗುತ್ತಿಗೆದಾರರು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದರು. 440 ಗುತ್ತಿಗೆದಾರರನ್ನು ತಾಂತ್ರಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಂತಿಮಗೊಳಿಸಲಾಯಿತು.

ಎಚ್ಚರಿಕೆ! ಎಲ್ಲೆಂದರಲ್ಲಿ ಕಸ ಹಾಕಿದರೆ ಬರಲಿದ್ದಾರೆ ಚಾರ್ಲಿಗಳು...ಎಚ್ಚರಿಕೆ! ಎಲ್ಲೆಂದರಲ್ಲಿ ಕಸ ಹಾಕಿದರೆ ಬರಲಿದ್ದಾರೆ ಚಾರ್ಲಿಗಳು...

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಅದನ್ನು ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ಸಮಿತಿಗೆ ಕಳುಹಿಸಲು ಅಧಿಕಾರಿಗಳು ಕಾಳಜಿ ತೋರಿಸಲಿಲ್ಲ. ಬಿಬಿಎಂಪಿಯ ಯಾವುದೇ ಟೆಂಡರ್ 3 ಕೋಟಿಗಿಂತ ಕಡಿಮೆ ಇದ್ದರೆ ಅದು ಸಮಿತಿಯ ಅಡಿ ಬರುತ್ತದೆ. 3 ಕೋಟಿಗಿಂತ ಹೆಚ್ಚಿನ ಮೊತ್ತದ ಟೆಂಡರ್‌ಗೆ ಪಾಲಿಕೆ ಕೌನ್ಸಿಲ್ ಸಭೆಯ ಒಪ್ಪಿಗೆ ಬೇಕು.

ಟೆಂಡರ್ ಸಲ್ಲಿಸಿದ ಗುತ್ತಿಗೆದಾರ ಮತ್ತು ಅಧಿಕಾರಿಗಳ ನಡುವಿನ ವ್ಯವಹಾರ ಕಾರಣಕ್ಕಾಗಿ 2019ರಲ್ಲಿ ಅಂತಿಮಗೊಂಡ ಟೆಂಡರ್‌ನ ವರ್ಕ್ ಆರ್ಡರ್ ಇನ್ನೂ ಆಗಿಲ್ಲ. ಹೊಸ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡುವುದು ಬಿಟ್ಟು ಹಳೆಯ ಗುತ್ತಿಗೆದಾರರ ಬಳಿಯೇ ಮುಂದುವರೆಸಲಾಗುತ್ತಿದೆ. ಇದರಿಂದಾಗಿ ಪಾಲಿಕೆಗೆ ತಿಂಗಳಿಗೆ 2 ಕೋಟಿ ಹೊರೆಯಾಗುತ್ತಿದೆ.

ಟೆಂಡರ್ ಪ್ರಕ್ರಿಯೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಾಲಿಕೆಗೆ ಆಗಿರುವ ನಷ್ಟವನ್ನು ಅಧಿಕಾರಿಗಳ ಕೈಯಲ್ಲಿಯೇ ವಸೂಲಿ ಮಾಡಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಸರಿಯಾದ ಸಮಯಕ್ಕೆ ಎಲ್ಲಾ ಕೆಲಸ ಆಗಿದ್ದರೆ ಪಾಲಿಕೆಗೆ 22 ಕೋಟಿ ಉಳಿತಾಯ ಆಗುತ್ತಿತ್ತು.

20/2/2020ರಂದು ಕರ್ನಾಟಕ ಹೈಕೋರ್ಟ್ 4 ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ವರ್ಕ್ ಆರ್ಡರ್‌ ನೀಡುವಂತೆ ಸೂಚನೆ ಕೊಟ್ಟಿದೆ. ಆದರೆ, ಇದುವರೆಗೂ ಕಡತಗಳು ಇದ್ದಲ್ಲಿಂದ ಅಲ್ಲಾಡಿಲ್ಲ.

English summary
Delay in garbage disposal tender process leads to loss of more than Rs.2 crores for BBMP each month. Now Karnataka high court ordered to clear tender.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X