ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲೇ ಮುಂದಿನ 'ಏರೋ ಇಂಡಿಯಾ 2021' ದಿನಾಂಕ ಪ್ರಕಟ

|
Google Oneindia Kannada News

ನವದೆಹಲಿ, ಆಗಸ್ಟ್ 28: ಮುಂದಿನ 'ಏರೋ ಇಂಡಿಯಾ 2021' ಬೆಂಗಳೂರಿನಲ್ಲೇ ನಡೆಯಲಿದ್ದು, ದಿನಾಂಕ ಕೂಡ ಪ್ರಕಟವಾಗಿದೆ.

Recommended Video

US ಶಾಂತಿಗೆ ಧಕ್ಕೆ ತರುತ್ತಿರುವ ಚೀನಾ | Oneindia Kannada

ಏರೋ ಇಂಡಿಯಾ ಮುಂದಿನ ಆವೃತ್ತಿಯ ಸಂಬಂಧ ರಕ್ಷಣಾ ಸಚಿವಾಲಯವು ನಿರ್ಧಾರವನ್ನು ತೆಗೆದುಕೊಂಡಿದ್ದು ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ತನ್ನ ಪಾರಂಪರಿಕ ತಾಣವಾಗಿರುವ ಬೆಂಗಳೂರಿನಲ್ಲಿ 2021ರ ಫೆಬ್ರವರಿ 3ರಿಂದ 7ರನಡುವೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.

ಬೆಂಗಳೂರಲ್ಲೇ ಮುಂದಿನ ಏರ್‌ ಶೋ ನಡೆಸಲು ರಕ್ಷಣಾ ಇಲಾಖೆ ನಿರ್ಧಾರ ಬೆಂಗಳೂರಲ್ಲೇ ಮುಂದಿನ ಏರ್‌ ಶೋ ನಡೆಸಲು ರಕ್ಷಣಾ ಇಲಾಖೆ ನಿರ್ಧಾರ

ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಹಲವಾರು ಆಂತರಿಕ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಗರಿಷ್ಠ ಮುನ್ನೆಚ್ಚರಿಕೆ ವಹಿಸುವುದರೊಡನೆ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ನಿರ್ಧರಿಸಲಾಗಿದೆ.

Defence Ministry To Host Aero-India In Bengaluru Coming February

ಹಲವಾರು ದೇಶಗಳ ಅಧಿಕೃತ ನಿಯೋಗಗಳಲ್ಲದೆ ಗಮನಾರ್ಹ ಸಂಖ್ಯೆಯ ಜಾಗತಿಕ ರಕ್ಷಣಾ ಉತ್ಪಾದಕ ಸಂಸ್ಥೆಗಳು ದೊಡ್ಡ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ದೇಶೀಯ ರಕ್ಷಣಾ ಉದ್ಯಮ ಮತ್ತು ಜಾಗತಿಕ ವೈಮಾನಿಕ ಸಂಸ್ಥೆಗಳ ಒತ್ತಾಸೆಯ ಮೇರೆಗೆ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ವೈಮಾನಿಕ ಪ್ರದರ್ಶನ ನಡೆಸಲು ಸಚಿವಾಲಯ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ವಿವರಿಸಿದೆ.

1996 ರಲ್ಲಿ ಮೊದಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಪ್ರಾರಂಭವಾದಾಗಿನಿಂದ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

English summary
The defence ministry has taken an in-principle decision to host the next edition of Aero India -- considered Asia's largest aerospace exhibition -- in its traditional venue of Bengaluru from February 3-7 next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X