ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೂರೈಕೆಯಲ್ಲಿ ಅಡಚಣೆ, ಬೆಂಗಳೂರಿನಲ್ಲಿ ತರಕಾರಿಗಳು ಮತ್ತು ಹೂವುಗಳಿಗೆ ಕಡಿಮೆಯಾದ ಬೇಡಿಕೆ

|
Google Oneindia Kannada News

ಬೆಂಗಳೂರು ನವೆಂಬರ್ 3: ಹಣದುಬ್ಬರದಿಂದ ಜನಸಾಮಾನ್ಯರ ಕೊಳ್ಳುವ ಶಕ್ತಿ ಕುಂಠಿತವಾಗಿರುವುದರಿಂದ ನಗರದಾದ್ಯಂತ ತರಕಾರಿ, ಹೂವಿನ ಮಾರುಕಟ್ಟೆಗಳಲ್ಲಿ ಎಂದಿನಂತೆ ಸಂತೆ, ಮಾರುಕಟ್ಟೆಗಳಲ್ಲಿ ಜನ ಕಾಣುತ್ತಿಲ್ಲ. ನಿರಂತರ ಮಳೆಯಿಂದಾಗಿ ಪೂರೈಕೆ ಸರಪಳಿಗೆ ಅಡ್ಡಿಯುಂಟಾಗಿದ್ದು, ಹಬ್ಬದ ಅಗತ್ಯ ವಸ್ತುಗಳ ಬೆಲೆಗಳು ಸ್ವಲ್ಪಮಟ್ಟಿಗೆ ಹೆಚ್ಚಿವೆ. ಆದರೂ ವ್ಯಾಪಾರಿಗಳು ದಸರಾ ಸಮಯದಲ್ಲಿ ಇದ್ದ ಬೆಲೆಗಿಂತ ಕಡಿಮೆ ಎಂದು ಹೇಳುತ್ತಾರೆ. ಬೀನ್ಸ್ ಮತ್ತು ಕ್ಯಾರೆಟ್‌ಗಳಂತಹ ಸಾಮಾನ್ಯ ತರಕಾರಿಗಳ ಬೆಲೆ ಹೆಚ್ಚಾಗಲಿಲ್ಲ. ಆದರೆ ಟೊಮೆಟೊ ಮತ್ತು ಈರುಳ್ಳಿ ಹೆಚ್ಚಿನ ಬೆಲೆಯನ್ನು ನಿಗದಿಯಾಗಿರುವುದು ಮುಂದುವರೆದಿದೆ. ಸರಬರಾಜಿನ ಕೊರತೆಯು ಕ್ಯಾಪ್ಸಿಕಂನ ಮೇಲೆಯೂ ಸಹ ಪರಿಣಾಮ ಬೀರಿದೆ. ಇದರ ಬೆಲೆ ಕಿಲೋಗ್ರಾಂಗೆ 100 ರೂ. ಇದೆ. ಯಾಕೆಂದರೆ ಇದರ ಪೂರೈಕೆ ಮತ್ತು ಬೇಡಿಕೆ ಕುಸಿಯುತ್ತಿದೆ.

ಇಂದಿನ ದಿನಗಳಲ್ಲಿ ಎರಡ್ಮೂರು ತರಕಾರಿ ಖರೀದಿಗೆ ವ್ಯಯಿಸುವ ಮೊತ್ತಕ್ಕೆ ಕಿಲೋ ಮಾಂಸ ಖರೀದಿಸಲು ಜನ ಒಲವು ತೋರುತ್ತಿದ್ದಾರೆ' ಎನ್ನುತ್ತಾರೆ ಕಲಾಸಿಪಾಳ್ಯ (ಕೆಆರ್ ಮಾರುಕಟ್ಟೆ) ಸಗಟು ತರಕಾರಿ ಮಾರುಕಟ್ಟೆಯ ವ್ಯಾಪಾರಿ ಶ್ರೀಧರ್.

ಚಿಲ್ಲರೆ ಅಂಗಡಿಗಳಲ್ಲಿ ಕೆಲವು ತರಕಾರಿಗಳ ಬೆಲೆ ಸಗಟು ದರಕ್ಕಿಂತ ದುಪ್ಪಟ್ಟಾಗಿದೆ. ಬದನೆಕಾಯಿ ಕಿಲೋಗೆ 40 ರೂ., ಬೆಂಡೆಕಾಯಿ ಬೆಲೆ 60 ರೂ., ಉತ್ತರ ಬೆಂಗಳೂರಿನ ಚಿಲ್ಲರೆ ಅಂಗಡಿಯಲ್ಲಿ ಎಲೆಕೋಸು ಕಿಲೋಗೆ 25 ರೂ. ಮತ್ತು ಕ್ಯಾರೆಟ್ ಕಿಲೋಗೆ 70 ರೂ.ಗೆ ಮಾರಾಟವಾಗುತ್ತಿದೆ. ಆಯುಧಪೂಜೆ (ದಸರಾ) ಸಮಯಕ್ಕಿಂತ ದೀಪಾವಳಿ ಸಂದರ್ಭದಲ್ಲಿ ಹೂವುಗಳಿಗೆ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೆಆರ್ ಮಾರುಕಟ್ಟೆಯ ಹೂವಿನ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

Deepavali demand: Demand for Veggies and Flowers Soar

ಕಳೆದ ತಿಂಗಳು 400 ರೂ.ಗೆ ಏರಿದ್ದ ಬಟನ್ ರೋಸ್ ಮತ್ತು ಸೇವಂತಿ (ಸೇವಂತಿಗೆ) ಇದೀಗ ಕ್ರಮವಾಗಿ 200 ಮತ್ತು 150 ರೂ.ಗೆ ಮಾರಾಟವಾಗುತ್ತಿದೆ.

"ಜನರು ಈ ಹಬ್ಬದಲ್ಲಿ ಪಟಾಕಿ ಸಿಡಿಸುವುದನ್ನು ಮತ್ತು ಒಳ್ಳೆಯ ಆಹಾರವನ್ನು ಸವಿಯುವುದನ್ನು ಇಷ್ಟಪಡುತ್ತಾರೆ. ಹೂವುಗಳನ್ನು ಹೆಚ್ಚಾಗಿ ಅಲಂಕಾರಕ್ಕಾಗಿ ಬಳಸಲಾಗುತ್ತದೆ" ಎಂದು ವ್ಯಾಪಾರಿ ಹೇಳಿದರು. ಹೀಗೆ ಪೂರೈಕೆಯಲ್ಲಿ ಅಡಚಣೆ ಉಂಟಾಗಿ ಬೆಂಗಳೂರಿನಲ್ಲಿ ತರಕಾರಿಗಳು ಮತ್ತು ಹೂವುಗಳ ಹೆಚ್ಚಿನ ಬೆಲೆಗಳು ಬೇಡಿಕೆಯನ್ನು ಕಡಿಮೆ ಮಾಡುತ್ತಿವೆ.

ಬೆಲೆ ಏರಿಕೆ ಬಿಸಿ:

ಕೊರೊನಾ ಎರಡನೇ ಅಲೆಯ ಹೊಡೆತದಿಂದ ಬೇಡಿಕೆಯಿಲ್ಲದೆ ಸಂಕಷ್ಟದಲ್ಲಿದ್ದ ತರಕಾರಿ ಬೆಳೆಗಾರರು ಅನ್‌ಲಾಕ್‌ ಬಳಿಕ ಕೊಂಚ ಬೇಡಿಕೆ ದೊರೆತಿತ್ತು. ಹಬ್ಬಗಳ ಸಮಯದಲ್ಲಿ ತರಕಾರಿಗಳ ದರವು ಕೊಂಚ ಏರಿಕೆ ಕಂಡು ರೈತರಿಗೆ ಆದಾಯದ ಭರವಸೆ ಮೂಡಿತ್ತು. ಆದರೆ ಕಳೆದ ದಸರಾಕ್ಕೆ ಇದ್ದ ತರಕಾರಿ ಬೆಲೆ ಇದೀಗ ಮತ್ತೆ ಕೊಂಚ ಕುಸಿತ ಕಂಡಿದೆ. ಈ ಬಾರಿ ಉತ್ತಮ ತರಕಾರಿ ಬೆಳೆಯಾಗಿದ್ದು, ಇತರೆಡೆಯಿಂದ ಬಂದ ತರಕಾರಿಗಳಿಂದ ಸ್ಥಳೀಯವಾಗಿ ತರಕಾರಿ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದೆ. ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ತರಕಾರಿ ಬೇಡಿಕೆ ಹೆಚ್ಚುವ ನಿರೀಕ್ಷೆಯಿದ್ದರೂ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೆಲವೆಡೆ ಬೆಳೆ ಹಾನಿಯಾಗಿದೆ. ಇಂದು ಮತ್ತು ನಾಳೆ ಹಬ್ಬದ ಅವಧಿಯಲ್ಲಿ ಮಳೆ ಪರಿಣಾಮ ತರಕಾರಿ ಬೆಳೆ ನಷ್ಟದಿಂದ ದರ ಏರಿಕೆ ಸಂಭವವಿದೆ.

Recommended Video

ಈ ಪವಾಡ ನಡೆದು ಟೀಮ್ ಇಂಡಿಯಾಗೆ ಸೆಮಿಫೈನಲ್ ಚಾನ್ಸ್ ಸಿಗುತ್ತಾ? | Oneindia Kannada

ಹಬ್ಬ ಶುಭ ಸಮಾರಂಭಗಳು ನಡೆಯುವುದರಿಂದ ತರಕಾರಿಗೆ ಬೇಡಿಕೆ ಬಂದು, ಪ್ರತಿ ವರ್ಷ ತರಕಾರಿ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ದೇವಾಲಯಗಳಲ್ಲಿ ಭಕ್ತರ ಪ್ರವೇಶವಿರಲಿಲ್ಲ, ವಿಶೇಷ ಕಾರ್ಯಕ್ರಮಗಳಿಲ್ಲದೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಹಬ್ಬಕ್ಕೆ ಬೆಲೆ ಅಧಿಕವಾಗುವ ನಿರೀಕ್ಷೆ ಇದೆ. ಮದುವೆ, ಗೃಹಪ್ರವೇಶ, ಜಾತ್ರೆಯಂತಹ ಕಾರ್ಯಕ್ರಮಗಳು ಹೆಚ್ಚಾಗಿ ತರಕಾರಿಗಳಿಗೆ ಬೇಡಿಕೆ ತಂದುಕೊಡುತ್ತದೆ. ಆದರೆ ಕೊರೊನಾ 3ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಸರಕಾರ ಆದೇಶಿಸಿದ ಪರಿಣಾಮ ತರಕಾರಿಗೆ ಬೇಡಿಕೆ ಕುಸಿದಿದೆ.

English summary
Deepavali demand, price hike effect, Demand for Veggies and Flowers Soar as vegetable and flower markets in Bengaluru missing usual festival crowd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X