ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಲೆಯೆರಿಕೆ ಬಿಸಿ, ಪಟಾಕಿ ನಿರ್ಬಂಧದ ನಡುವೆ ಕೂಲ್ ದೀಪಾವಳಿ!

|
Google Oneindia Kannada News

ಬೆಂಗಳೂರು, ನವೆಂಬರ್, 09: ಈ ಬಾರಿ ದೀಪಾವಳಿ ಪಟಾಕಿ ಸದ್ದು ಒಂದಷ್ಟು ನಿರ್ಬಂಧಗಳ ನಡುವೆಯೇ ಹೊರಬರಬೇಕು. ರಾತ್ರಿ 10 ಗಂಟೆ ನಂತರ ಪಟಾಕಿ ಸಿಡಿಸುವಂತಿಲ್ಲ ಎಂದು ಬೆಂಗಳೂರು ಮೇಯರ್ ಮಂಜುನಾಥ ರೆಡ್ಡಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಪೊಲೀಸ್ ಇಲಾಖೆ ಸಹ ಪಟಾಕಿ ಮೇಲೆ ಬೇಡ ಎಂದು ಹೇಳಿದೆ.

ನಗರದಲ್ಲಿ ನವರಾತ್ರಿ ಹಬ್ಬದ ಕಸವೇ ಬಹಳಷ್ಟು ಕಡೆ ತೆರವಾಗಿಲ್ಲ. ಈ ಮಧ್ಯೆ ದೀಪಾವಳಿ ಸಹ ಬಂದಿದ್ದು ಅದಕ್ಕೆ ಪಟಾಕಿ ಸೇರಿಕೊಂಡರೆ ಬೆಂಗಳೂರು ಕಸದ ನಗರಿಯಾಗಿ ಮಾರ್ಪಾಡಾಗುವುದರಲ್ಲಿ ಅನುಮಾನವಿಲ್ಲ. ತಿಲಕ್ ನಗರ, ಜಯನಗರ, ವಿದ್ಯಾಪೀಠ ಸೇರಿದಂತೆ ಹಲವಡೆ ಲೋಡ್ ಆದ ಕಸದ ಲಾರಿಗಳು ರಸ್ತೆಯಲ್ಲೇ ನಿಂತಿವೆ.[ತಮಿಳುನಾಡಿನಲ್ಲಿ 'ರೋನು' ಅಬ್ಬರ, ಜನತೆ ತತ್ತರ, 2 ಬಲಿ]

ಹಬ್ಬ ಅಂದ ಮೇಲೆ ಸಂಭ್ರಮ ಇರಲೇ ಬೇಕು, ಬೆಲೆ ಏರಿಕೆಯಿರಲಿ, ಪಟಾಕಿ ನಿರ್ಬಂಧವಿರಲಿ, ಥಂಡಿ ವಾತಾವರಣವಿರಲಿ, ಚಂಡಮಾರುತ ಭಯ ಬೀಳಿಸುತ್ತಿರಲಿ ಹಬ್ಬ ಮಾಡಲೇಬೇಕು. ಹಾಗಾದರೆ ಸದ್ಯ ಬೆಂಗಳೂರಿಗರ ಪಟಾಕಿ ಖರೀದಿ ಭರಾಟೆ ಮೇಲೆ ಒಂದು ರೌಂಡ್ ಹಾಕಿಕೊಂಡು ಬರೋಣ...

ಇದೋ ಇಲ್ಲಿದೆ ಸಹಾಯವಾಣಿ
* ಮಿಂಟೊ ಕಣ್ಣಿನ ಆಸ್ಪತ್ರೆ: 26707176
* ನಾರಾಯಣ ನೇತ್ರಾಲಯ: 66121300
* ಸಂಕರ ನೇತ್ರಾಲಯ: 99169777250

ಎಲ್ಲೆಲ್ಲಿ ಪಟಾಕಿ ಮಳಿಗೆಗಳಿವೆ?

ಎಲ್ಲೆಲ್ಲಿ ಪಟಾಕಿ ಮಳಿಗೆಗಳಿವೆ?

ನಗರದ ವಿದ್ಯಾಪೀಠ ಸಮೀಪದ ಶಂಕರ್ ನಾಗ್ ವೃತ್ತದ ಕೆಳಗಿನ ಮೈದಾನ, ಯಡಿಯೂರು ಕೆರೆ ಸಮೀಪದ ಮೈದಾನ, ಚಂದ್ರಾಲೇಔಟ್, ಮಲ್ಲೇಶ್ವರಂ, ಪದ್ಮನಾಭ ನಗರ, ನಾಗರಬಾವಿ, ವಿಜಯನಗರದ ಮಾರುತಿ ಮಂದಿರ ಸಮೀಪ, ಉಮಾ ಥೀಯೇಟರ್ ಸಮೀಪದ ಮೈದಾನಗಳಲ್ಲಿ ಪಟಾಕಿಗಳು ಲಭ್ಯವಿವೆ.

ದರ ಇಳಿದಿದೆ

ದರ ಇಳಿದಿದೆ

ಕಳೆದ ಸಾರಿಗೆ ಹೋಲಿಸರಿದರೆ ಈ ಬಾರಿ ಪಟಾಕಿ ದರ ತುಂಬಾ ಇಳಿದಿದೆ. ಆದರೆ ವ್ಯಾಪಾರವೂ ಇಳಿಕೆಯಾಗಿದೆ. ಜನ ಪಟಾಕಿ ಅಂಗಡಿಗಳತ್ತ ತಲೆ ಹಾಕುತ್ತಿಲ್ಲ. ಅಲ್ಲದೇ ಡಿಸ್ಕೌಂಟ್ ಸೇಲ್ ಸಹ ಇದೆ ಎಂಬ ಜಾಹೀರಾತುಗಳಿಗೂ ಬೆಲೆ ನೀಡುತ್ತಿಲ್ಲ.

ರಕ್ಷಣಾ ಕ್ರಮಗಳಿವೆಯೇ?

ರಕ್ಷಣಾ ಕ್ರಮಗಳಿವೆಯೇ?

ಪಟಾಕಿ ಅಂಗಡಿಗಳ ಬಳಿ ಧೂಮಪಾನ ಮಾಡುವಂತಿಲ್ಲ. ಬೆಂಕಿ ಉತ್ಪನ್ನ ಮಾಡುವ ಯಾವುದೇ ವಸ್ತುಗಳನ್ನು ಹತ್ತಿರ ತರುವಂತಿಲ್ಲ ಎಂದು ಬಿಬಿಎಂಪಿ ಸೂಚನೆ ನೀಡಿದೆ. ವಿದ್ಯಾಪೀಠದ ಮತ್ತು ವಿಜಯನಗರದ ಬಳಿಯ ಮೈದಾನದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು ಕಂಡುಬಂತು. ಅಲ್ಲದೇ ಸೀಸ್ ಫೈರ್ ಗಳನ್ನು ಸಹ ಅಂಗಡಿಯವರು ಇಟ್ಟುಕೊಂಡಿದ್ದರು.

ಪಟಾಕಿ ಬೇಡ

ಪಟಾಕಿ ಬೇಡ

ಗಣೇಶ ಹಬ್ಬದ ಸಮಯದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪನ್ನು ಪ್ರತಿಷ್ಠಾಪಿಸಿದ್ದ ಜನ ಈ ಬಾರಿ ಪಟಾಕಿ ಬೇಡ ಎನ್ನುತ್ತಿದ್ದಾರೆ. ಪ್ರತಿವರ್ಷದಷ್ಟೂ ಈ ಬಾರಿ ಖರೀದಿ ಮಾಡುತ್ತಿಲ್ಲ. ಮಕ್ಕಳ ಒತ್ತಾಯಕ್ಕೆ ಅಪಾಯಕಾರಿಯಲ್ಲದ ಪಟಾಕಿ ಖರೀದಿಸುತ್ತಿದ್ದೇವೆ. ಪಕ್ಕದ ಮನೆಯವರು ಪಟಾಕಿ ತಂದರು ಅಂಥ ನಾವು ತರುತ್ತಿದ್ದ ದಿನಗಳಿದ್ದವು ಆದರೆ ಈಗ ವಾತಾವರಣ ಬದಲಾಗುತ್ತಿದೆ ಎನ್ನುತ್ತಾರೆ ವಿಜಯನಗರದ ಸ್ನೇಹಾ.

ವಾತಾವರಣದ ಎಫೆಕ್ಟ್

ವಾತಾವರಣದ ಎಫೆಕ್ಟ್

ಹವಾಮಾನ ಇಲಾಖೆ ಹೇಳಿರುವಂತೆ ನಗರದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದೆ. ಇದು ಪಟಾಕಿ ಹುಚ್ಚಾಟದ ಮೇಲೆ ನೈಸರ್ಗಿಕ ನಿಯಂತ್ರಣವನ್ನೇ ಹೇರಬಹುದು. ಆದರೆ ಪಟಾಕಿ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದವರಿಗೆ ಅಷ್ಟೇ ದೊಡ್ಡ ಪ್ರಮಾಣದ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.

English summary
Deepavali is the festival of joy and happiness. Where we get crackers in Bangalore, here the information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X