ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ; ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಕಡಿಮೆ

|
Google Oneindia Kannada News

ಬೆಂಗಳೂರು, ನವೆಂಬರ್ 18 : ದೀಪಾವಳಿಯ ಮೂರು ದಿನಗಳಲ್ಲಿ ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. 2019ಕ್ಕೆ ಹೋಲಿಕೆ ಮಾಡಿದರೆ ಶೇ 30.34ರಷ್ಟು ಮಾಲಿನ್ಯ ಪ್ರಮಾಣ ತಗ್ಗಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತ ಅಂಕಿ ಅಂಶಗಳನ್ನು ನೀಡಿದೆ. ನವೆಂಬರ್ 14 ರಿಂದ 16ರ ತನಕ ನಗರದಲ್ಲಿ ಎಕ್ಯುಐ (ವಾಯು ಗುಣಮಟ್ಟ ಸೂಚ್ಯಾಂಕ)ವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ನಡೆಸಿದೆ.

ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಮಾಲಿನ್ಯ ಶೇ.46.7ರಷ್ಟು ಕಡಿಮೆ ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಮಾಲಿನ್ಯ ಶೇ.46.7ರಷ್ಟು ಕಡಿಮೆ

Deepavali Air Pollution Fell By 30.34 Per Cent

ನಗರದಲ್ಲಿನ 7 ಅಧ್ಯಯನ ಕೇಂದ್ರದಲ್ಲಿ ವಾಯು ಮಾಲಿನ್ಯದ ಪ್ರಮಾಣವನ್ನು ಅಂದಾಜಿಸಲಾಗಿದೆ. ನಗರ ರೈಲು ನಿಲ್ದಾಣದಲ್ಲಿ ನವೆಂಬರ್ 9ರಂದು 82ರಷ್ಟು, ನ.14ರಿಂದ 16ರ ತನಕ ಶೇ 77ರಷ್ಟು ಮಾಲಿನ್ಯ ಪ್ರಮಾಣ ದಾಖಲಾಗಿದೆ. 2019ರ ದೀಪಾವಳಿ ಸಂದರ್ಭದಲ್ಲಿ 111 ರಷ್ಟು ಮಾಲಿನ್ಯ ದಾಖಲಾಗಿತ್ತು.

ಮಾಲಿನ್ಯ ತಗ್ಗಿಸಲು ಕ್ರಮ: ನಗರದಲ್ಲಿ ಹೊಸ ಕೈಗಾರಿಕೆಗಳಿಗೆ ಅನುಮತಿಯಿಲ್ಲಮಾಲಿನ್ಯ ತಗ್ಗಿಸಲು ಕ್ರಮ: ನಗರದಲ್ಲಿ ಹೊಸ ಕೈಗಾರಿಕೆಗಳಿಗೆ ಅನುಮತಿಯಿಲ್ಲ

ಎಸ್‌. ಜಿ. ಹಳ್ಳಿಯಲ್ಲಿ 2019ರಲ್ಲಿ ಶೇ 85ರಷ್ಟು, ಈ ವರ್ಷ ಶೇ 39ರಷ್ಟು ಮಾಲಿನ್ಯ ಪ್ರಮಾಣ ದಾಖಲಾಗಿದೆ. ಜಯನಗರ 5ನೇ ಬ್ಲಾಕ್‌ನಲ್ಲಿ 2019ರಲ್ಲಿ 90, 2020ರಲ್ಲಿ 64ರಷ್ಟು ಮಾಲಿನ್ಯ ದಾಖಲಾಗಿದೆ.

ಬೆಂಗಳೂರು: ದಾಖಲೆ ಮಟ್ಟಕ್ಕೆ ಕುಸಿತಕಂಡ ವಾಯು ಮಾಲಿನ್ಯ ಬೆಂಗಳೂರು: ದಾಖಲೆ ಮಟ್ಟಕ್ಕೆ ಕುಸಿತಕಂಡ ವಾಯು ಮಾಲಿನ್ಯ

ನಿಮ್ಹಾನ್ಸ್‌ನಲ್ಲಿ ಕಳೆದ ವರ್ಷ 69ರಷ್ಟು, ಈ ವರ್ಷ 61ರಷ್ಟು ಪ್ರಮಾಣ, ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ 2019ರಲ್ಲಿ 67ರಷ್ಟು, ಈ ವರ್ಷ ಶೇ 43ರಷ್ಟು ಮಾಲಿನ್ಯ ಪ್ರಮಾಣ ದಾಖಲಾಗಿದೆ ಎಂದು ಮಂಡಳಿ ಹೇಳಿದೆ.

English summary
Air pollution in Bengaluru city during the three days of Deepavali fell by 30.34 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X