ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.2ರಂದು ನಾಡಗೀತೆಯ ರಾಗ, ಅವಧಿ ಕುರಿತು ನಿರ್ಧಾರ ಪ್ರಕಟ: ಸಚಿವ ಸುನೀಲ್ ಕುಮಾರ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: "ತಜ್ಞರ ಸಮಿತಿಯ ವರದಿಯ ಆಧಾರದ ಮೇಲೆ ಅಕ್ಟೋಬರ್ 2ರ ಮೊದಲು ಕರ್ನಾಟಕ ನಾಡಗೀತೆಯ (ರಾಜ್ಯ ಗೀತೆ) ರಾಗ ಮತ್ತು ಅವಧಿಯ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಲಿದೆ,'' ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

"ಈ ಹಿಂದೆ ನಾಡಗೀತೆ ವಿಶೇಷವಾಗಿ ಅದರ ರಾಗ ಮತ್ತು ಅದನ್ನು ಪೂರ್ಣಗೊಳಿಸಬೇಕಾದ ಅವಧಿಯ ಬಗ್ಗೆ ಚರ್ಚೆಗಳು ನಡೆದಿವೆ, ಆದರೆ ಸರ್ಕಾರವು ಯಾವುದೇ ಅಂತಿಮ ತೀರ್ಮಾನ ಅಥವಾ ನಿರ್ಧಾರಕ್ಕೆ ಬಂದಿರಲಿಲ್ಲ. ಹಾಗಾಗಿ ಸೆಪ್ಟೆಂಬರ್ 9ರಂದು ನಾವು ಸಾಹಿತ್ಯ ವ್ಯಕ್ತಿಗಳು ಮತ್ತು ಸಂಗೀತ ತಜ್ಞರ ಒಂದು ಸಮಿತಿಯನ್ನು ರಚಿಸಿದ್ದೇವೆ,'' ಎಂದು ವಿಧಾನಸಭೆಯಲ್ಲಿ ತಿಳಿಸಿದರು.

ವಿಧಾನಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ಮೂಡಿಗೆರೆ ಬಿಜೆಪಿ ಶಾಸಕ ಎಂ. ಪಿ. ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ಮೈಸೂರಿನ ಲೀಲಾವತಿ ಮತ್ತು ಸಾಹಿತಿ ಡಾ. ದೊಡ್ಡರಂಗೇಗೌಡ ಅವರನ್ನೊಳಗೊಂಡ ಸಮಿತಿಗೆ ರಾಗ ಮತ್ತು ಅವಧಿಯ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಲು ಕೇಳಲಾಗಿದೆ," ಎಂದು ಹೇಳಿದರು.

Decision On Tune And Duration Of Karnataka State Anthem On October 2: Minister Sunil Kumar

"ಈ ಸಮಿತಿಯು ತನ್ನ ಮೊದಲ ಸಭೆಯನ್ನು ಸೆಪ್ಟೆಂಬರ್ 16ರಂದು ನಡೆಸಿದ್ದು, ಅವರ ವರದಿಯ ಆಧಾರದ ಮೇಲೆ ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ. ಶೀಘ್ರದಲ್ಲೇ ನಾವು ಈ ಕುರಿತು ಘೋಷಣೆ ಮಾಡುತ್ತೇವೆ, ಗಾಂಧಿ ಜಯಂತಿಯ ಮೊದಲು ನಾವು ಘೋಷಣೆ ಮಾಡಲಿದ್ದೇವೆ," ಎಂದು ಸ್ಪಷ್ಟಪಡಿಸಿದರು.

"ನಾಡಗೀತೆಯ ಅವಧಿ ಮತ್ತು ರಾಗದ ಬಗ್ಗೆ ರಾಜ್ಯದಲ್ಲಿ ಪದೇ ಪದೇ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಚೆನ್ನವೀರ ಕಣವಿ ಮತ್ತು ಜಿ.ಎಸ್. ಶಿವರುದ್ರಪ್ಪ ಅವರಂತಹ ಪ್ರಮುಖ ಕವಿಗಳ ಅಡಿಯಲ್ಲಿ ಸಮಿತಿಗಳನ್ನು ರಚಿಸಲಾಗಿತ್ತು. ಆದರೆ ಇನ್ನೂ ಯಾವುದೇ ನಿರ್ಧಾರಕ್ಕೆ ಬರಲಾಗದೆ, ಯಾವಾಗಲೂ ಅಪೂರ್ಣವಾಗಿದ್ದವು ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು. ಇತರ ರಾಜ್ಯಗಳು ನಾಡಗೀತೆಗಳನ್ನು ಹೊಂದಿದೆಯೋ ಇಲ್ಲವೋ, ನಮಗೆ ಖಚಿತವಿಲ್ಲ. ಆದರೆ ನಮ್ಮ ನಾಡಗೀತೆ ನಮ್ಮ ಹೆಮ್ಮೆ ಇದೆ," ಎಂದರು.

ಪ್ರಸ್ತುತ ನಾಡಗೀತೆಯಾದ 'ಜಯ ಭಾರತ ಜನನಿಯ ತನುಜಾತೆ..' ಈ ಹಾಡನ್ನು ಖ್ಯಾತ ಕವಿ ಕುವೆಂಪು ಬರೆದಿದ್ದು, ಇದನ್ನು 2004ರಲ್ಲಿ ಅಧಿಕೃತವಾಗಿ ರಾಜ್ಯ ಗೀತೆಯಾಗಿ ಘೋಷಿಸಲಾಯಿತು. ಇದನ್ನು ಎಲ್ಲಾ ಸರ್ಕಾರಿ ಸಮಾರಂಭಗಳಲ್ಲಿ ಮತ್ತು ಶಾಲೆಗಳಲ್ಲಿ ಪ್ರತಿದಿನ ಹಾಡಲಾಗುತ್ತದೆ.

ಇದೇ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಮಾತನಾಡಿ, "ಹಲವು ವರ್ಷಗಳಿಂದ ರಾಜ್ಯಗೀತೆಗೆ ರಾಗ ಮತ್ತು ಅವಧಿಯನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಗಮನ ಸೆಳೆದರು. ಇದನ್ನು ತಮ್ಮ ಅಧಿಕಾರಾವಧಿಯಲ್ಲಿ ಸಮಸ್ಯೆಯನ್ನು ಕೊನೆಗೊಳಿಸಲು," ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್‌ರನ್ನು ಕೇಳಿಕೊಂಡರು.

ಪ್ರಸ್ತುತ ನಾಡಗೀತೆಯನ್ನು ವಿವಿಧ ಶೈಲಿಗಳಲ್ಲಿ ಮತ್ತು ರಾಗಗಳಲ್ಲಿ ಹಾಡಲಾಗುತ್ತಿದ್ದು, ಇದು ದೀರ್ಘವಾಗಿದೆ ಎಂದು ಪರಿಗಣಿಸಲಾಗಿದೆ. ಇದರ ಅವಧಿಯನ್ನು ಕಡಿಮೆ ಮಾಡಲು ಮತ್ತು ಹಾಡುವ ಶೈಲಿಯಲ್ಲಿ ಏಕರೂಪತೆಯನ್ನು ತರಲು ನಿರಂತರ ಬೇಡಿಕೆ ಇಡಲಾಗಿತ್ತು.

2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕೆಎಸ್‌ಪಿ) ಎರಡು ನಿಮಿಷ ಮೂವತ್ತು ಸೆಕೆಂಡುಗಳ ಅವಧಿಯನ್ನು ಮಿತಿಗೊಳಿಸುವ ಪ್ರಸ್ತಾಪವನ್ನು ಮಾಡಿತು. ಅದೇ ರೀತಿ 2014 ರಲ್ಲಿ ಚನ್ನವೀರ ಕಣವಿ ಸಮಿತಿಯಿಂದ ಅವಧಿಯನ್ನು ಒಂದು ನಿಮಿಷ 30 ಸೆಕೆಂಡುಗಳಿಗೆ ಇಳಿಸುವ ಪ್ರಸ್ತಾಪವನ್ನು ಇಟ್ಟಿದ್ದನ್ನು ನೆನಪಿಸಿಕೊಳ್ಳಬಹುದು.

Recommended Video

ಎರಡು ತಿಂಗಳ ನಂತರ ರಾಜ್ ಕುಂದ್ರಗೆ ಜಾಮೀನು | Oneindia Kannada

English summary
The state government will take a decision on tune and duration of the Karnataka state anthem before October 2, Kannada and Culture Minister V Sunil Kumar Said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X