ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಸಕ್ರಮ ಕಾಲಾವಕಾಶ ವಿಸ್ತರಣೆ : ಕಾಗೋಡು ತಿಮ್ಮಪ್ಪ

ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ನೀಡಿದ್ದ ಕಾಲಾವಕಾಶವನ್ನು ರಾಜ್ಯ ಸರ್ಕಾರವು ವಿಸ್ತರಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ನೀಡಿದ್ದ ಕಾಲಾವಕಾಶವನ್ನು ರಾಜ್ಯ ಸರ್ಕಾರವು ವಿಸ್ತರಿಸಿದೆ.

ಅಲ್ಲದೆ, ಗ್ರಾಮೀಣ ಭಾಗದಲ್ಲಿ ಶೇಕಡಾ 50 ರಷ್ಟು ದಂಡದ ಪ್ರಮಾಣ ಕಡಿಮೆ ಮಾಡಲು ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. [ಅಕ್ರಮ ಸಕ್ರಮ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್]

ನಗರ ಮತ್ತು ಗ್ರಾಮೀಣ ಭಾಗದಲ್ಲಿ 40 ಲಕ್ಷದಷ್ಟು ಅರ್ಜಿಗಳು ಈ ವ್ಯಾಪ್ತಿಯಡಿ ಬರುವ ನಿರೀಕ್ಷೆಯಿದೆ. ಇದುವರೆಗೂ 20 ಲಕ್ಷದಷ್ಟು ಅರ್ಜಿಗಳು ಬಂದಿವೆ. ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕೊಡುವ ಉದ್ದೇಶದಿಂದ ಜನವರಿ 21 ರವರೆಗೆ ಸಮಯ ವಿಸ್ತರಿಸಲಾಗಿದೆ ಆ ನಂತರ ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಲಾಗುವುದು ಎಂದರು.

Deadline for Akrama, Sakrama extended : Kagodu Thimmappa

ಅಂತೆಯೇ, ಈಗಾಗಲೇ ತೀರ್ಮಾನಿಸಿರುವಂತೆ ಗ್ರಾಮೀಣ ಭಾಗದಲ್ಲಿ 4000 ಚದರಡಿ ವಿಸ್ತೀರ್ಣದಲ್ಲಿ ನಿರ್ಮಿಸಿಕೊಂಡಿರುವ ಮನೆ ಸಕ್ರಮಗೊಳಿಸಲಾಗುವುದು.

ಇದಕ್ಕೆ ಆರು ಸಾವಿರ ರೂಪಾಯಿ ದಂಡ ಶುಲ್ಕವನ್ನು ನಿಗಡಿಪಡಿಸಲಾಗಿದೆ. ಇದನ್ನು ಕಟ್ಟಲು ಬಡವರಿಗೆ ಶೇಕಡಾ 50 ರಷ್ಟು ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯ ಸಚಿವ ಸಂಪುಟದ ಸನ್ನಿಹಿತ ಸಭೆಯಲ್ಲಿ ದಂಡ ಪ್ರಮಾಣ ಕಡಿಮೆ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ಪಡೆಯಲಾಗುವುದು ಎಂದು ಅವರು ತಿಳಿಸಿದರು.

ಅದೇ ರೀತಿ ನಗರದ ಪ್ರದೇಶದಲ್ಲಿ ಪ್ರಸ್ತುತ 600 ಚದುರ ಅಡಿ (20‍X30) ವಿಸ್ತೀರ್ಣದಲ್ಲಿ ನಿರ್ಮಿಸಿಕೊಂಡಿರುವ ಮನೆ ಸಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಇದೀಗ ಆ ವಿಸ್ತೀರ್ಣದ ಪ್ರಮಾಣವನ್ನು 1200 ಚದುರ ಅಡಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ನಗರಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಿಂದ 15 ಕಿ. ಮೀ. ಹೊರಗೆ ಇರುವ ಪ್ರದೇಶಗಳಲ್ಲಿರುವ ಮನೆಗಳು ಮಾತ್ರ ಸಕ್ರಮಗೊಳ್ಳಲಿವೆ ಎಂದು ಸಚಿವರು ವಿವರಿಸಿದರು.

ಅಕ್ರಮ ಸಕ್ರಮ ಅರ್ಜಿಗಳ ಸ್ವೀಕಾರ ಮತ್ತು ವಿಲೇವಾರಿ ಸಂಬಂಧ ಪ್ರತಿ ಪಂಚಾಯತ್ ನಲ್ಲಿ ಗ್ರಾಮ ಲೆಕ್ಕಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಾಲಮಿತಿ ವಿಧಿಸಲಾಗಿದೆ.

ಕಾಲಮಿತಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳಿಗೆ ಕೂಡಾ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ ಎಂದರು.

English summary
The state government extends deadline till January 21, 2017 for Akrama, Sakrama to submit applications seeking regularisiation of unauthorised constructions and land developments in all urban areas including Bengaluru said Minister Kagodu Thimmappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X