ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರೋಬ್ಬರಿ 16 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿತ್ತು ಕೋವಿಡ್‌ನಿಂದ ಮೃತಪಟ್ಟ ಇಬ್ಬರ ದೇಹ

|
Google Oneindia Kannada News

ಬೆಂಗಳೂರು, ನವೆಂಬರ್ 29: ಬರೋಬ್ಬರಿ 16 ತಿಂಗಳುಗಳ ಕಾಲ ಕೋವಿಡ್‌ನಿಂದ ಮೃತಪಟ್ಟಿದ್ದ ಇಬ್ಬರ ಮೃತದೇಹಗಳು ಆಸ್ಪತ್ರೆಯ ಶವಾಗಾರದಲ್ಲೇ ಇದ್ದ ಘಟನೆ ವರದಿಯಾಗಿದೆ.

ಬರೋಬ್ಬರಿ 16 ತಿಂಗಳುಗಳಾದರೂ ಕೋವಿಡ್ ಮೃತದೇಹಗಳು ಆಸ್ಪತ್ರೆಯ ಶವಾಗಾರದಲ್ಲಿಯೇ ಇದ್ದ ಘಟನೆಯೊಂದು ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ನಡೆದಿದೆ.ಕಳೆದ ಶನಿವಾರ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಶವಾಗಾರದ ಆವರಣ ಸ್ವಚ್ಛ ಮಾಡಲೆಂದು ಹೋದಾಗ ಸ್ಥಲದಲ್ಲಿ ದುರ್ವಾಸನೆ ಬರುವುದನ್ನು ಗಮನಿಸಿ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವೈದ್ಯಕೀಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಫ್ರೀಜರ್ ನಲ್ಲಿ ಎರಡು ಮೃತದೇಹಗಳಿರುವುದು ಕಂಡು ಬಂದಿದೆ.

ಒಮಿಕ್ರೋನ್ ರೂಪಾಂತರಿ, ಲಸಿಕೆಗೆ ಸೋಲದೇ ಇರಬಹುದು: ರಣದೀಪ್ ಗುಲೇರಿಯಾಒಮಿಕ್ರೋನ್ ರೂಪಾಂತರಿ, ಲಸಿಕೆಗೆ ಸೋಲದೇ ಇರಬಹುದು: ರಣದೀಪ್ ಗುಲೇರಿಯಾ

ನಂತರ ವೈದ್ಯಕೀಯ ಅಧೀಕ್ಷಕರು ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಎರಡೂ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Bengaluru: Dead Bodies Of 2 Covid Patients Found In Mortuary 16 Months Later

ಈ ಸಂಬಂಧ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯ ಅಧಿಕಾರಿಗಳು ಇಲಾಖಾ ವಿಚಾರಣೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜಾಜಿನಗರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಇಮ್ತಿಹಾನ್ ಹುಸೇನ್ ಅವರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಚಾಮರಾಜಪೇಟೆಯ ದುರ್ಗಾ (40) ಹಾಗೂ ಕೆಪಿ ಅಗ್ರಹಾರ ಮೂಲಕ ಮನಿರಾಜು (62) 2020ರ ಜುಲೈ ತಿಂಗಳಿನಲ್ಲಿ ಮೃತಪಟ್ಟಿದ್ದರು. ಮೃತದೇಹಗಳನ್ನು ಆಸ್ಪತ್ರೆಯ ಹಳೆಯ ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಕೊರೋನಾ 2ನೇ ಅಲೆ ವೇಳೆ ಸಾವಿನ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೊಸ ಶವಾಗಾರವನ್ನು ನಿರ್ಮಿಸಿ ಅಲ್ಲಿ ಶವಗಳನ್ನು ಸಾಗಿಸಲಾಗಿತ್ತು.

ಆದರೆ, ಸಿಬ್ಬಂದಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಹಳೆಯ ಶವಾಗಾರದಲ್ಲಿ ಈ ಎರಡೂ ಮೃತದೇಹಗಳು ಉಳಿದು ಹೋಗಿವೆ. ಶವಗಳನ್ನು ಇರಿಸಿ 16 ತಿಂಗಳುಗಳಾದರೂ ಯಾರೊಬ್ಬರ ಗಮನಕ್ಕೂ ಈ ವಿಚಾರ ಬಂದಿಲ್ಲ.

ಜಗತ್ತಿನ ನಿದ್ದೆಗೆಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ 'ಒಮಿಕ್ರೋನ್‌' ತಣ್ಣಗೆ ಇನ್ನಷ್ಟುದೇಶಗಳಿವೆ ವ್ಯಾಪಿಸಿರುವುದು ಖಚಿತಪಟ್ಟಿದೆ. ಹೀಗಾಗಿ ಡೆಲ್ಟಾಗಿಂತಾ ವೇಗಿ, ಲಸಿಕೆಯ ಕುಣಿಕೆಯನ್ನೂ ತಪ್ಪಿಸಬಲ್ಲದು ಎಂಬ ಕುಖ್ಯಾತಿ ಹೊಂದಿರುವ ಈ ವೈರಸ್‌ ಜಗತ್ತಿನ ಕಣ್ಣಿಗೆ ಮತ್ತಷ್ಟುಭಯಂಕರವಾಗಿ ಕಾಣಿಸಿಕೊಂಡಿದೆ. ಭಾನುವಾರ ಆಸ್ಪ್ರೇಲಿಯಾ ಮತ್ತು ನೆದರ್‌ಲೆಂಡ್‌ ದೇಶಗಳು, ತಮ್ಮ ದೇಶದಲ್ಲೂ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದೆ ಎಂದು ಘೋಷಿಸಿಕೊಂಡಿವೆ. ಆಸ್ಪ್ರೇಲಿಯಾದಲ್ಲಿ 2 ಮತ್ತು ನೆದರ್‌ಲೆಂಡ್‌ನಲ್ಲಿ 13 ಪ್ರಕರಣಗ ಖಚಿತಪಟ್ಟಿವೆ. ಹೀಗಾಗಿ ವೈರಸ್‌ ಪ್ರವೇಶ ಖಚಿಪಟ್ಟದೇಶಗಳ ಸಂಖ್ಯೆ 11ಕ್ಕೆ ಏರಿದೆ.

ಈ ನಡುವೆ ಅಮೆರಿಕ ಖ್ಯಾತ ಸಾಂಕ್ರಾಮಿ ರೋಗ ತಜ್ಞ ಡಾ. ಆ್ಯಂಥೋನಿ ಫೌಸಿ, ಅಮೆರಿಕದಲ್ಲಿ ಇದುವರೆಗೆ ಹೊಸ ವೈರಸ್‌ ಪತ್ತೆಯಾಗದೇ ಇರಬಹುದು. ಆದರೆ ಅದು ಈಗಾಗಲೇ ದೇಶವನ್ನು ಪ್ರವೇಶಿರುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ.

ಮತ್ತೊಂದೆಡೆ ರಷ್ಯಾದ ಸಚಿವರೊಬ್ಬರು ಕೂಡಾ, ಈಗಾಗಲೇ ಹೊಸ ವೈರಸ್‌ ತಮ್ಮ ದೇಶ ಪ್ರವೇಶ ಮಾಡಿರುವುದು ಖಚಿತ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಹೊಸ ಹೊಸ ವೈರಸ್‌ ದಿನೇ ದಿನೇ ಮತ್ತಷ್ಟುದೇಶಗಳಿಗೆ ಹಬ್ಬಿರುವುದು ಖಚಿತಪಡುತ್ತಲೇ, ವಿಶ್ವದ ಹಲವು ದೇಶಗಳು ಆಫ್ರಿಕಾ ದೇಶಗಳ ಮೇಲೆ ವಿಮಾನ ಮತ್ತು ಜನರ ಸಂಚಾರದ ಮೇಲೆ ನಿಷೇಧ ಹೇರಿವೆ. ಜೊತೆಗೆ ಇತರೆ ದೇಶಗಳ ಪ್ರಯಾಣಿಕರ ಮೇಲೂ ನಿರ್ಬಂಧಗಳನ್ನು ಕಠಿಣಗೊಳಿಸಿವೆ.

ಕಠಿಣ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುವ ಚೀನಾದಲ್ಲಿ ಅಮೆರಿಕದಂತೆ ನಿರ್ಬಂಧಗಳನ್ನು ತೆರವುಗೊಳಿಸಿದರೆ ನಿತ್ಯ 6.3 ಲಕ್ಷ ಕೋವಿಡ್‌ ಕೇಸ್‌ಗಳು ವರದಿಯಾಗಲಿವೆ ಎಂದು ಪೀಕಿಂಗ್‌ ವಿಶ್ವವಿದ್ಯಾಲಯದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಚೀನಾದಲ್ಲಿ ಭಾನುವಾರ 23 ಕೋವಿಡ್‌ ಕೇಸುಗಳು ಪತ್ತೆಯಾಗಿವೆ. ಅವುಗಳಲ್ಲಿ 20 ಕೇಸುಗಳು ಹೊರದೇಶದಿಂದ ಬಂದವರದು. ಇದರ ನಡುವೆ, ಪೀಕಿಂಗ್‌ ವಿಶ್ವವಿದ್ಯಾಲಯದ ತಜ್ಞರು ಆಫ್ರಿಕಾ ಮುಂತಾದ ದೇಶಗಳಲ್ಲಿ ಹರಡುತ್ತಿರುವ ಒಮಿಕ್ರೋನ್‌ ತಳಿಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನವೊಂದನ್ನು ನಡೆಸಿ, ಅದರ ವರದಿ ಬಿಡುಗಡೆ ಮಾಡಿದ್ದಾರೆ.

ಆ ವರದಿಯ ಪ್ರಕಾರ ಚೀನಾದಲ್ಲಿ ಅಮೆರಿಕದಂತೆ ನಿರ್ಬಂಧಗಳನ್ನು ತೆರವುಗೊಳಿಸಿದರೆ ನಿತ್ಯ 6.3 ಲಕ್ಷ ಕೇಸ್‌ಗಳು, ಬ್ರಿಟನ್‌ನಂತೆ ನಿರ್ಬಂಧ ತೆರವುಗೊಳಿಸಿದರೆ ನಿತ್ಯ 2.7 ಲಕ್ಷ ಕೇಸ್‌ಗಳು ಹಾಗೂ ಫ್ರಾನ್ಸ್‌ನಂತೆ ನಿರ್ಬಂಧ ತೆರವುಗೊಳಿಸಿದರೆ 4.5 ಲಕ್ಷ ಕೇಸ್‌ಗಳು ವರದಿಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

Recommended Video

Omicron Virus ಹರಡದಂತೆ ಮುನ್ನಚ್ಚರಿಕೆ ವಹಿಸಿದ ರಾಜ್ಯ ಸರ್ಕಾರ | Oneindia Kannada

English summary
In a case of utter negligence, bodies of two COVID-19 patients were found in the mortuary of ESI Rajajinagar Hospital Bengaluru, more than a year after the deaths took place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X