ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಹದಿ ಬಿಡುಗಡೆ ಮಾಡಿ, ಐಎಸ್ಐಎಸ್ ಎಚ್ಚರಿಕೆ ಸಂದೇಶ

By Mahesh
|
Google Oneindia Kannada News

ಬೆಂಗಳೂರು, ಡಿ.14: ಇರಾಕಿ ಉಗ್ರ ಸಂಘಟನೆ ಇಸಿಸ್ ಪರ ಕಾರ್ಯ ನಿರ್ವಹಿಸುತ್ತಿದ್ದ ಮೆಹದಿ ಬಂಧನದಿಂದ ಐಎಸ್ಐಎಸ್ ಕಂಗಾಲಾಗಿದ್ದು, ಮೆಹದಿ ಬಿಡುಗಡೆ ಮಾಡಿ ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂದು ಎಚ್ಚರಿಕೆ ಸಂದೇಶವನ್ನು ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಕಳಿಸಲಾಗಿದೆ.

ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್ ಅವರು ಎಚ್ಚರಿಕೆ ಸಂದೇಶ ಬಂದಿರುವುದನ್ನು ದೃಢಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ಇಸಿಸ್ ಉಗ್ರ ಅಬೌನ್‌ಫಾಲ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ FreeShamiWitness ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಆರಂಭಿಸಲಾಗಿದೆ. ಮೆಹದಿ ಪರವಾಗಿ ಕವನ, ಹೇಳಿಕೆ, ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

DCP Abhishek Goel receives death threat from ISIS

ಮೆಹದಿ ಒಬ್ಬ ಸಾಮಾನ್ಯ ಮುಸ್ಲಿಂ ಆಗಿದ್ದು, ಆತನ ಎಲ್ಲರಂತೆ ಸಾಮಾಜಿಕ ಜಾಲ ತಾಣ ಬಳಸಿ ತನ್ನ ಅಭಿಪ್ರಾಯ ಮಂಡನೆ ಮಾಡುತ್ತಿದ್ದ. ಅತನಿಗೆ ನೀವು ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ನೀಡಿದ್ದಾನೆ ಎಂದರೆ ನಾವು ನಂಬುವುದಿಲ್ಲ ಎಂಬ ಟ್ವೀಟ್ ಗಳು ಹರಿದಾಡುತ್ತಿವೆ. [ಶಂಕಿತ ಉಗ್ರ ಮೆಹದಿ ಬಂಧನ : ಟಾಪ್ 10 ಬೆಳವಣಿಗೆ]

ನಿಮ್ಮ ಬಂಧನದಲ್ಲಿರುವ ನಮ್ಮ ಸಹೋದರರನ್ನು ನಿಮ್ಮ ಬಳಿಯೇ ಇರಲು ಬಿಡುವುದಿಲ್ಲ. ಇದಕ್ಕೆ ಬದಲಾಗಿ ನಾವು ಸೇಡು ತೀರಿಸಿಕೊಳ್ಳುತ್ತೇವೆ. ನಮ್ಮ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ಕಾದು ನೋಡಿ ಎಂದಿದ್ದಾನೆ.

Mehdi

ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ(ISIS) ಉಗ್ರ ಸಂಘಟನೆಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ(@shamiwitness) ಉಗ್ರರ ಪರ ಸಂದೇಶಗಳನ್ನು ಹಾಕುತ್ತಿದ್ದ ಖಾಸಗಿ ಸಂಸ್ಥ್ಎ ಉದ್ಯೋಗಿ ಮೆಹದಿಯನ್ನು ಶನಿವಾರ ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಇಸಿಸ್ ಹೆಸರಲ್ಲಿ ಪ್ರಕಟವಾಗುತ್ತಿದ್ದ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರು ಮೂಲದ ವ್ಯಕ್ತಿಯ ಕೈವಾಡವಿದೆ ಎಂದು ಬ್ರಿಟನ್ ಮೂಲದ ಚಾನೆಲ್ 4' ನ್ಯೂಸ್ ಸುದ್ದಿವಾಹಿನಿ ವರದಿ ಪ್ರಸಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
ISIS, the militant group of Iraq has sent threat messages to DCP Abhishek Goel following the arrest of its online supporter Mehdi Masroor Biswas (24) by CCB police on Friday December 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X