ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯಂತರ ಚುನಾವಣೆ: ದೇವೇಗೌಡರ ಮಾತನ್ನು ಪರಿಗಣಿಸುತ್ತೇವೆ ಎಂದ ಪರಮೇಶ್ವರ್

|
Google Oneindia Kannada News

Recommended Video

ಮಧ್ಯಂತರ ಚುನಾವಣೆ ನಡೆದೇ ನಡೆಯುತ್ತದೆ ಎಂದ ದೇವೇಗೌಡರು | Oneindia Kannada

ಬೆಂಗಳೂರು, ಜೂನ್ 21: ಮಧ್ಯಂತರ ಚುನಾವಣೆ ನಡೆದೇ ನಡೆಯುತ್ತದೆ ಎಂದು ಯಾವ ಕಾರಣಕ್ಕಾಗಿ ದೇವೇಗೌಡರು ಹೀಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ ಆದರೆ ಅವರ ಮಾತನ್ನು ಪರಿಗಣಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ಮಧ್ಯಂತರ ಚುನಾವಣೆ ಕುರಿತು ದೇವೇಗೌಡರ ಹೇಳಿಕೆ ಬಗ್ಗೆ ಮಾತನಾಡಿದ ಅವರು ದೇವೇಗೌಡರು ಹಿರಿಯರಿದ್ದಾರೆ, ಮಾಜಿ ಪ್ರಧಾನಿಗಳು ಅವರು ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ.

ನಮಗೇನು ಆಸೆ ಇರಲಿಲ್ಲ, ದೆಹಲಿ ನಾಯಕರು ನಿಮ್ಮ ಮಗನನ್ನು ಸಿಎಂ ಮಾಡ್ಬೇಕು ಅಂದಿದ್ರು: ದೇವೇಗೌಡ ನಮಗೇನು ಆಸೆ ಇರಲಿಲ್ಲ, ದೆಹಲಿ ನಾಯಕರು ನಿಮ್ಮ ಮಗನನ್ನು ಸಿಎಂ ಮಾಡ್ಬೇಕು ಅಂದಿದ್ರು: ದೇವೇಗೌಡ

ಹೌದು ಕಾಂಗ್ರೆಸ್ ವರಿಷ್ಠರು ನಾವೆಲ್ಲರೂ ಸೇರಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿ ಎಂದು ಅವರ ಮನೆಗೆ ಹೋಗಿದ್ದು ನಿಜ. ರಾಹುಲ್ ಗಾಂಧಿಯವರು ನಾವೆಲ್ಲರೂ ಒಟ್ಟಿಗೆ ಸಾಗೋಣ, ಬಿಜೆಪಿ ಆಡಳಿತ ಸರಿಯಾಗಿಲ್ಲ ಎಂದು ಹೇಳಿದ್ದೂ ಸತ್ಯ.

ಕೊನೆಗೆ ಕುಮಾರಸ್ವಾಮಿಯವರನ್ನು ನಾವು ಮುಖ್ಯಮಂತ್ರಿಯಾಗಿ ಒಪ್ಪಿಕೊಂಡಿದ್ದೂ ನಿಜ. ಹಾಗಿರುವಾಗ ಸಮ್ಮಿಶ್ರ ಸರ್ಕಾರವೆಂದ ಮೇಲೆ ಸಣ್ಣ ಪುಟ್ಟ ವಿಚಾರಗಳು ಬರುವುದು ಸ್ವಾಭಾವಿಕ, ಅನಿಸಿಕೆಗಳು, ಅಭಿಪ್ರಾಯಗಳು ಬರುತ್ತಲೇ ಇರುತ್ತದೆ ಅದನ್ನು ಪಾಲಿಸಿಕೊಂಡು ಮುನ್ನಡೆಸಿಕೊಂಡು ಹೋಗುವುದೇ ಮೈತ್ರಿ ಧರ್ಮ ಎಂದರು.

Dcm Parameshwar endorses Deve gowda statement

ಎಲ್ಲರೂ ಯೋಚನೆ ಮಾಡಿಯೇ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದೇವೆ, ದೇವೇಗೌಡರ ಹೇಳಿಕೆ ಕುರಿತು ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ದಿನೇಶ್ ಗುಂಡೂರಾವ್ ಅವರ ಬಳಿ ಮಾತನಾಡುತ್ತೇವೆ.

ನಾವು ಯಾವುದನ್ನೂ ಕಿತ್ತುಕೊಂಡಿಲ್ಲ, ಇಬ್ಬರು ಪಕ್ಷೇತರ ಅಭ್ಯರ್ಥಿಗಳ ಕುರಿತು ಮಾತನಾಡುವಾಗ ನಿಮ್ಮಿಂದ ಒಬ್ಬ ಅಭ್ಯರ್ಥಿ, ನಮ್ಮ ಕಡೆಯಿಂದ ಒಬ್ಬ ಅಭ್ಯರ್ಥಿಯೆಂದು ಎಲ್ಲರ ಸಮ್ಮುಖದಲ್ಲೇ ತೀರ್ಮಾನ ಮಾಡಲಾಗಿತ್ತು, ಯಾರನ್ನೂ ನಾವು ಕಸಿದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರ ಮಾಡಲು ನಾನು ಹೇಳಿರಲಿಲ್ಲ: ದೇವೇಗೌಡ ಅಸಮಾಧಾನ ಮೈತ್ರಿ ಸರ್ಕಾರ ಮಾಡಲು ನಾನು ಹೇಳಿರಲಿಲ್ಲ: ದೇವೇಗೌಡ ಅಸಮಾಧಾನ

ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ದೇವೇಗೌಡರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಯಾವುದೇ ಅಸಮಾಧಾನವಿಲ್ಲ, ಅವರು ಅಭಿಪ್ರಾಯವನ್ನು ಹೇಳಿದ್ದಾರಷ್ಟೇ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದ್ದಾರೆ.

English summary
Deputy Chief minister Dr G Parameshwar endorses Deve Gowda statement in mid term election and chief minister selection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X