ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಶಾಕ್: ಮೇ.31ರವರೆಗೂ ಬಿಎಂಟಿಸಿ ಸಂಚಾರಕ್ಕೆ ಬ್ರೇಕ್?

|
Google Oneindia Kannada News

ಬೆಂಗಳೂರು, ಮೇ.18: ರಾಜ್ಯ ರಾಜಧಾನಿ ಮಂದಿಗೆ ಸರ್ಕಾರವು ಶಾಕಿಂಗ್ ನ್ಯೂಸ್ ಕೊಟ್ಟಿದೆ. ನಗರ ಸಂಚಾರಕ್ಕೆ ಅಣಿಯಾಗಿದ್ದ ಬಸ್ ಗಳು ರಸ್ತೆಗೆ ಇಳಿಯುವುದೇ ಅನುಮಾನವಾಗಿದೆ. ಮೇ.31ರವರೆಗೂ ಬಿಎಂಟಿಸಿ ಬಸ್ ಸಂಚಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ.

Recommended Video

ತಾಯಿ ಅಂದ್ರೆ ಹೀಗೆ ಅಲ್ವಾ? ತನ್ನ ಮಗುವಿನ ರಕ್ಷಣೆಗೆ ಏನ್ ಮಾಡೋಕೂ ರೆಡಿ | Oneindia Kannada

ಕರ್ನಾಟಕದಲ್ಲಿ ಲಾಕ್ ಡೌನ್ 4.Oಮಾರ್ಗಸೂಚಿಗೆ ಸಂಬಂಧಿಸಿದಂತೆ ಚರ್ಚಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ವಿಧಾನಸೌಧದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಬಿಎಂಟಿಸಿ ಸಂಚಾರ ಆರಂಭಿಸುವುದು ಬೇಡ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಸಲಹೆ ನೀಡಿದ್ದಾರೆ.

ಬ್ರೇಕಿಂಗ್ ನ್ಯೂಸ್: ರಾಜ್ಯ ಮಾರ್ಗಸೂಚಿಗಳ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ ಬ್ರೇಕಿಂಗ್ ನ್ಯೂಸ್: ರಾಜ್ಯ ಮಾರ್ಗಸೂಚಿಗಳ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ

ನಗರದಲ್ಲಿ ಸಂಚಾರ ಹೆಚ್ಚಾದಲ್ಲಿ ಕೊರೊನಾ ವೈರಸ್ ಸೋಂಕು ಹರಡುವ ಆತಂಕ ಹೆಚ್ಚಾಗಿದೆ. ಪ್ರಯಾಣಿಕರಿಲ್ಲದೇ ಬಿಎಂಟಿಸಿ ಸಂಚಾರ ನಡೆಸಿದರೆ ಸಾರಿಗೆ ಇಲಾಖೆಗೆ ಮತ್ತಷ್ಟು ನಷ್ಟ ಸಂಭವಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮಾರ್ಚ್.31ರವರೆಗೂ ಬಿಎಂಟಿಸಿ ಸಂಚಾರ ಆರಂಭಿಸುವುದು ಬೇಡ ಎಂದು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ್ ಸವದಿ ಸಲಹೆ ನೀಡಿದ್ದಾರೆ.

DCM Laxmana Savadi Advises Not To Start BMTC Bus Until May.31

ಸಿಎಂ ಸಭೆಯಲ್ಲಿ ಸಂಚಾರ ವ್ಯವಸ್ಥೆಯದ್ದೇ ಸದ್ದು:

ಕರ್ನಾಟಕ ಲಾಕ್ ಡೌನ್ ಮಾರ್ಗಸೂಚಿ ಸಿದ್ಧಪಡಿಸುವ ಬಗ್ಗೆ ನಡೆಸಿದ ಸಭೆಯಲ್ಲಿ ಸಂಚಾರ ವ್ಯವಸ್ಥೆ ಆರಂಭಿಸಬೇಕೇ ಬೇಡವೇ ಎಂಬ ವಿಚಾರವೇ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಸಚಿವರಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಯಿತು. ಕೆಲವು ಸಚಿವರು ಬಸ್ ಸಂಚಾರ ಆರಂಭಿಸದಿದ್ದಲ್ಲಿ ಸಿಬ್ಬಂದಿಗೆ ವೇತನ ನೀಡುವ ಸಮಸ್ಯೆ ಎದುರಾಗುತ್ತದೆ ಎಂದು ಸಲಹೆ ನೀಡುತ್ತಿದ್ದಾರೆ.

ಅಂತರಾಜ್ಯ ಬಸ್ ಸಂಚಾರಕ್ಕೆ ಅವಕಾಶ ಬೇಡ:

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನೇ ನಾವು ಪಾಲನೆ ಮಾಡೋಣ. ಅಂತಾರಾಜ್ಯ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡುವುದು ಬೇಡವೇ ಬೇಡ ಎಂಬ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದ್ದಾರೆ.

English summary
DCM Laxmana Savadi Advises Not To Start BMTC Bus Until May.31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X