ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರಾನ್ಸ್‌ಗೆ ತೆರಳಿದ ಡಿಸಿಎಂ ಪರಮೇಶ್ವರ್, ಕಾರಣವೇನು?

|
Google Oneindia Kannada News

ಬೆಂಗಳೂರು, ನವೆಂಬರ್ 28: ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಬುಧವಾರ(ನವೆಂಬರ್ 28) ರಂದು ಫ್ರಾನ್ಸ್ ಪ್ರವಾಸಕ್ಕೆ ತೆರಳಿದ್ದಾರೆ.

ಫ್ರಾನ್ಸ್ ದೇಶದಲ್ಲಿನ ಘನ ತ್ಯಾಜ್ಯ ಸಂಸ್ಕರಣಾ ವಿಧಾನದ ಕುರಿತು ಅಧ್ಯಯನ ನಡೆಸಲು ಆರು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಅಪ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರು ಕೂಡ ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ.

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

ಫ್ರಾನ್ಸ್ ದೇಶದ ಮಹಾನಗರಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಗಳನ್ನು ಸಂಸ್ಕರಣೆ ಮಾಡುವ ವಿಧಾನ ಉತ್ತಮವಾಗಿದ್ದು, ಅವರ ಮಾದರಿಗಳನ್ನು ಅಧ್ಯಯನ ಮಾಡಲಿದ್ದಾರೆ ನವೆಂಬರ್ 28ರಿಂದ ಡಿಸೆಂಬರ್ 3ರ ವರೆಗೆ ಪ್ರವಾಸ ಕೈಗೊಂಡಿದ್ದಾರೆ.

ಬೆಂಗಳೂರಲ್ಲಿ ವಿಪರೀತವಾಗಿರುವ ಕಸದ ಸಮಸ್ಯೆ

ಬೆಂಗಳೂರಲ್ಲಿ ವಿಪರೀತವಾಗಿರುವ ಕಸದ ಸಮಸ್ಯೆ

ಬೆಂಗಳೂರಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದಕ್ಕೆ ಬಿಬಿಎಂಪಿ ಹಾಗೂ ಹೈಕೋರ್ಟ್ ಸಾಕಷ್ಟು ಹರಸಾಹಸ ಮಾಡಿದರೂ ಕೂಡ ಏನು ಪ್ರಯೋಜನವೆಗುತ್ತಿಲ್ಲ. ತ್ಯಾಜ್ಯ ಸಂಸ್ಕರಣ ಘಟಕಗಳ ಕೊರತೆಯೂ ಕೂಡ ತ್ಯಾಜ್ಯ ವಿಲೇವಾರಿಗೆ ತೊಡಕಾಗಿ ಪರಿಣಮಿಸಿದೆ.

ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

ಕನ್ನಹಳ್ಳಿ ತ್ಯಾಜ್ಯ ಘಟಕ ಪರಿವರ್ತನೆ

ಕನ್ನಹಳ್ಳಿ ತ್ಯಾಜ್ಯ ಘಟಕ ಪರಿವರ್ತನೆ

ತ್ಯಾಜ್ಯದಿಂದ ಗೊಬ್ಬರ ತಯಾರಿಕಾ ಘಟಕ ತಯಾರಿಕೆ ಕ್ರಿಯೆ ವಿಳಂಬವಾಗುತ್ತಿದೆ. ಅದಕ್ಕೆ ಪರಿಹಾರವಾಗಿ ಈಗಿರುವ ಘಟಕವನ್ನು ವಿದ್ಯುತ್ ತಯಾರಿಕಾ ಘಕಟವನ್ನಾಗಿ ಪರಿವರ್ತಿಸಲು ಬಿಬಿಎಂಪಿ ಮುಂದಾಗಿದೆ.

ಇದೀಗ ಕನ್ನಹಳ್ಳಿ ತ್ಯಾಜ್ಯಘಟಕವನ್ನು ಪರಿವರ್ತಿಸಲು ಯೋಜನೆ ರೂಪಿಸಿದೆ. ಈಗಾಗಲೇ 2-3 ಬಾರಿ ಟೆಂಡರ್ ಆಹ್ವಾನಿಸಿದ್ದರೂ ಗುತ್ತಿಗೆದಾರರು ಆಸಕ್ತಿ ತೋರಿರಲಿಲ್ಲ. ಈಗ ಮರಳಿ ಯತ್ನವ ಮಾಡು ಎಂಬಂತೆ ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

500 ಅನ್ ಸಂಸ್ಕರಣೆ: ಕನ್ನಹಳ್ಳಿ ಘಟಕಕ್ಕೆ ಸದ್ಯ 500 ಟನ್ ತ್ಯಾಜ್ಯ ಸರಬರಾಜು ಮಾಡಲಾಗುತ್ತಿದೆ ಆ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಮಾರ್ಡಡಿಸಲು ಕನಿಷ್ಠ 45 ದಿನ ಬೇಕು. ಆ ವೇಳೆಯಲ್ಲಿ ತ್ಯಾಜ್ಯದಿಂದ ಹೊರಹೊಮ್ಮವು ದುರ್ವಾಸನೆ ತಡೆದು ಜನರಿಗಾಗುವ ತೊಂದರೆ ನಿವಾರಿಸಲು ಬಿಬಿಎಂಪಿ ಮುಂದಾಗಿದೆ.

ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್! ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್!

ನೆಲಮಂಗಲ ಬಳಿ ಶೀಘ್ರ ಕಸದಿಂದ ವಿದ್ಯುತ್ ತಯಾರಿಕಾ ಘಟಕ

ನೆಲಮಂಗಲ ಬಳಿ ಶೀಘ್ರ ಕಸದಿಂದ ವಿದ್ಯುತ್ ತಯಾರಿಕಾ ಘಟಕ

ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಸಂಬಂಧ ಸತಾರಾಂ ಕಂಪನಿಗೆ ಈಗಿರುವ ಕನ್ನಳ್ಳಿ- ಸೀಗೆಹಳ್ಳಿಯಲ್ಲಿ ಪ್ರಾಯೋಗಿಕವಾಗಿ ನಡೆಸಲು ಹಾಗೂ ನೆಲಮಂಗಲದಲ್ಲಿ ಹೊಸದಾಗಿ ವಿದ್ಯುತ್ ತಯಾರಕಾ ಘಟಕ ನಿರ್ಮಿಸಲು ಅವಕಾಶ ನೀಡುವ ಸಂಬಂಧ ನಗರಾಭಿವೃದ್ಧಿ ಚರ್ಚೆ ನಡೆದಿದೆ.

ಬಿಬಿಎಂಪಿ ಹಿರಿಯ ಅಧಿಕಾರಿಗಳು ಹಾಗೂ ಸತಾರಾಂ ಕಂಪನಿ ಮುಖ್ಯಸ್ಥರೊಂದಿಗೆ ಅವರು ಮಂಗಳವಾರ ಸಭೆ ನಡೆಸಿದರು. ಸತಾರಾಂ ಈಗಾಗಲೇ ಚೆನ್ನೈ,ಯೂರೋಪ್, ಬ್ರೆಸಿಲ್‌ ಸೇರಿದಂತೆ 14 ನಲ್ಲಿ ವೇಸ್ಟ್‌ ಟು ಎನರ್ಜಿ ಪ್ಲಾಂಟ್‌ ನಡೆಸುತ್ತಿದೆ. ಇದೇ ಮಾದರಿಯಲ್ಲಿ ನೆಲಮಂಗಲದಲ್ಲಿ ಪ್ಲಾಂಟ್ ತೆರೆಯುವ ಸಂಬಂಧ ಪ್ರಾತ್ಯಕ್ಷಿಕೆ ವೀಕ್ಷಿಸಿದ ಪರಮೇಶ್ವರ್ ಅವರು, ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ತ್ಯಾಜ್ಯ ಜಾಗದಲ್ಲಿ ರಂಗೋಲಿ

ತ್ಯಾಜ್ಯ ಜಾಗದಲ್ಲಿ ರಂಗೋಲಿ

ತ್ಯಾಜ್ಯ ತೆಗೆದ ಜಾಗದಲ್ಲಿ ಶುಚಿಗೊಳಿಸಿ ಪೌರಕಾರ್ಮಿಕರು ರಂಗೋಲಿ ಹಾಕುತ್ತಿದ್ದಾರೆ. ಆದರೂ ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆಯಾಗಿಲ್ಲ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಂಡುಬಂದರೆ ಅವರಿಗೆ 500 ರೂ ದಂಡ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ ಆದರೂ ಜನರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ.

English summary
Deputy chief minister flying to France to Study waste management isuue. he will stay Six days there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X