ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ಡಾ. ಅಶ್ವಥನಾರಾಯಣ ಮಾಧ್ಯಮದವರಿಗೆ ಕೈಮುಗಿದಿದ್ದು ಯಾಕೇ?

|
Google Oneindia Kannada News

ಬೆಂಗಳೂರು, ಜ. 29: ಈಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ್ದೆ ಎಲ್ಲಡೆ ಚರ್ಚೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಶ್ರಮಿಸಿದ್ದ ಡಿಸಿಎಂ ಡಾ. ಅಶ್ವಥನಾರಾಯಣ್ ಸಂಪುಟ ವಿಸ್ತರಣೆ ವಿಚಾರದ ಪ್ರಶ್ನೆ ಮಾಡುತ್ತಿದ್ದಂತೆಯೆ ಮಾಧ್ಯಮ ಪ್ರತಿನಿಧಿಗಳಿಗೆ ಕೈಮುಗಿದು, ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡುತ್ತಾರೆ ಎಂದು ವಿನಮ್ರ ವಿನಂತಿ ಮಾಡಿಕೊಂಡಿದ್ದಾರೆ.

ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಡಾ. ಅಶ್ವಥನಾರಾಯಣ, ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದ ಪ್ರಶ್ನೆಗೆ, 'ಇದರಲ್ಲಿ ನನ್ನದೇನು ಪಾತ್ರವಿಲ್ಲ. ಮೂಲ‌ ಬಿಜೆಪಿಗರು, ವಲಸಿಗರು ಅಂತೆನೂ ಇಲ್ಲ. ಎಲ್ಲರೂ ಬಿಜೆಪಿಯವರೇ. ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಲಿದೆ' ಎಂದರು. ಬಿಜೆಪಿಗೆ ಬಹಳಷ್ಟು ಶಾಸಕರನ್ನು ನೀವೆ ಕರೆದುಕೊಂಡು ಬಂದಿದ್ದಲ್ಲವಾ? ಸಂಪುಟ ವಿಸ್ತರಣೆ ಯಾವಾಗ ಎಂಬುದು ನಿಮಗೆ ನಿಜವಾಗಿಯೂ ಗೊತ್ತಿಲ್ಲವಾ ಎಂಬ ಪ್ರಶ್ನೆಗೆ, ಈ ಬಗ್ಗೆ ಸಿಎಂ ಮಾತನಾಡುತ್ತಾರೆ ಎಂದು ಸಚಿವ ಡಾ. ಅಶ್ವಥನಾರಾಯಣ ಕೈಮುಗಿದಿದ್ದಾರೆ.

DCM Dr. Ashwathnarayana Humble Request To Chief Minister Yediyurappa

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರುವುದಕ್ಕೆ ಡಿಸಿಎಂ ಡಾ. ಅಶ್ವಥನಾರಾಯಣ್ ಮಹತ್ವದ ಪಾತ್ರ ವಹಿಸಿದ್ದರು. ಅದನ್ನು ಗುರುತಿಸಿಯೆ ಅವರಿಗೆ ಬಿಜೆಪಿ ಹೈಕಮಾಂಡ್ ಉಪ ಮುಖ್ಯಮಂತ್ರಿ ಹುದ್ದೆಯನ್ನು ಕೊಟ್ಟಿದೆ ಎನ್ನಲಾಗಿತ್ತು. ಇದೀಗ ಹೈಕಮಾಂಡ್ ನಡೆ ಡಾ. ಅಶ್ವಥನಾರಾಯಣ ಅವರಿಗೂ ಕುತೂಹಲ ಮೂಡಿಸಿದೆ ಎನ್ನಲಾಗಿದೆ.

English summary
DCM Dr. Ashwathnarayana made a humble request to Chief Minister Yediyurappa to speak on the issue of cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X