ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

FIBA ಏಷಿಯಾ ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಬೆಂಗಳೂರು ಸಜ್ಜು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಫೀಬಾ ಏಷಿಯಾ ಯು18 ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯಾವಳಿ ಅಕ್ಟೋಬರ್ 28ರಿಂದ ನವೆಂಬರ್ 3ರವರೆಗೆ ಬೆಂಗಳೂರಲ್ಲಿ ನಡೆಯಲಿದ್ದು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಬಾಸ್ಕೆಟ್ ಬಾಲ್‌ ಪಂದ್ಯಾವಳಿ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.ಫೀಬಾ ಏಷಿಯಾ ಯು-18 ಮಹಿಳಾ ಬಾಸ್ಕೆಟ್ ಪಂದ್ಯಾವಳಿ ಕಂಠೀರವ ಸ್ಟೇಡಿಯಂ ಹಾಗೂ ಕೋರಮಂಗಲದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಹಂದಿಜ್ವರಕ್ಕೆ ರಾಜ್ಯದಲ್ಲಿ 6 ಮಂದಿ ಬಲಿ: ಪರಮೇಶ್ವರ್ ಆತಂಕ ಹಂದಿಜ್ವರಕ್ಕೆ ರಾಜ್ಯದಲ್ಲಿ 6 ಮಂದಿ ಬಲಿ: ಪರಮೇಶ್ವರ್ ಆತಂಕ

ಸತತ ಮೂರನೇ ಬಾರಿಗೆ ಬೆಂಗಳೂರಿನಲ್ಲಿ ಫೀಬಾ ಏಷಿಯಾ ಅಂಡರ್ 18 ಮಹಿಳಾ ಬಾಸ್ಕೆಟ್ ಬಾಲ್‌ ಪಂದ್ಯಾವಳಿ ಏರ್ಪಡಿಸಲಾಗಿದೆ.

DCM assures FIBA event will be successful

ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಚೀನಾ, ಜಪಾನ್, ಮಲೇಶಿಯಾ, ಇಂಡೋನೇಶಿಯಾ ಸೇರಿದಂತೆ ಒಟ್ಟು 16 ರಾಷ್ಟ್ರದಿಂದ 16 ತಂಡಗಳ 320 ಆಟಗಾರ್ತಿಯರು ಆಗಮಿಸುತ್ತಿದ್ದಾರೆ.

ಎರಡು ಕೋಟಿ ರೂ. ವೆಚ್ಚದಲ್ಲಿ ಸ್ಟೇಡಿಯಂನನ್ನು ಮೇಲ್ದರ್ಜೆಗೇರಿಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಇದಾಗಿದೆ. ಈ ಬಾರಿ ಪಂದ್ಯಾವಳಿ ವೀಕ್ಷಿಸಲು ಪ್ರವೇಶ ಶುಲ್ಕವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಐಕಿಯಾ ಕೇಂದ್ರ ಸ್ಥಾಪನೆಗೆ ಸಹಕಾರ: ಡಿಸಿಎಂ ಭರವಸೆ ಬೆಂಗಳೂರಿನಲ್ಲಿ ಐಕಿಯಾ ಕೇಂದ್ರ ಸ್ಥಾಪನೆಗೆ ಸಹಕಾರ: ಡಿಸಿಎಂ ಭರವಸೆ

ಅಕ್ಟೋಬರ್ 27 ಕ್ಕೆ ಇದರ ಉದ್ಘಾಟನೆ ನೆರವೇರಲಿದೆ.‌ ರಾಜ್ಯಪಾಲ ವಿ.ಆರ್. ವಾಲಾ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

English summary
Deputy chief minister G Parameshwara has said that FIBA womens championship will be successful as the state has prepared for the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X