ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಬಗ್ಗೆ ಕೋಡಿ ಶ್ರೀಗಳ ಭವಿಷ್ಯ: ಅಶ್ವತ್ಥ ನಾರಾಯಣ ಪ್ರತಿಕ್ರಿಯೆ

|
Google Oneindia Kannada News

Recommended Video

ಸಿದ್ದರಾಮಯ್ಯ ಬಗ್ಗೆ ಕೋಡಿ ಶ್ರೀಗಳ ಭವಿಷ್ಯ: ಅಶ್ವತ್ಥ ನಾರಾಯಣ ಪ್ರತಿಕ್ರಿಯೆ | Ashwath Narayan

ಬೆಂಗಳೂರು,ಸೆಪ್ಟೆಂಬರ್ 21: ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಕುರಿತು ಕೋಡಿಮಠದ ಶ್ರೀಗಳು ನುಡಿದ ಭವಿಷ್ಯಕ್ಕೆ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹೀಗೆ ಪ್ರತಿಕ್ರಿಯಿಸಿದ್ದಾರೆ.

'ಸಿದ್ದರಾಮಯ್ಯ ಅವರ ಕುರಿತು ಕೋಡಿ ಶ್ರೀಗಳು ನುಡಿದಿರುವುದು ಅವರ ವೈಯಕ್ತಿಕ ಅಭಿಪ್ರಾಯ, ಆದರೆ ಬಿಜೆಪಿ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದೆ ಎನ್ನುವ ವಿಶ್ವಾಸ ನನಗಿದೆ' ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ರಾಜಕೀಯ ಬದುಕಿನ ಕುರಿತು ಕೋಡಿಶ್ರೀ ಹೊಸ ಭವಿಷ್ಯಸಿದ್ದರಾಮಯ್ಯ ರಾಜಕೀಯ ಬದುಕಿನ ಕುರಿತು ಕೋಡಿಶ್ರೀ ಹೊಸ ಭವಿಷ್ಯ

ನಾವು ವಿಧಾನಸಭೆ ಚುನಾವಣೆಯಾಗಲೀ, ಲೋಕಸಭೆ ಚುನಾವಣೆಯಾಗಲೀ ಎದುರಿಸಲು ಸಿದ್ಧರಿದ್ದೇವೆ. ಕಾಂಗ್ರೆಸ್​​, ಜೆಡಿಎಸ್​​ಗೆ ಚುನಾವಣಾ ಭೀತಿ ಶುರುವಾಗಿದೆ.

ಮಧ್ಯಂತರ ಚುನಾವಣೆಗೆ ಹೋಗಲು ಯಾರು ತಯಾರಿಲ್ಲ. ಆದರೆ, ಸಿದ್ದರಾಮಯ್ಯ ಮತ್ತು ಎಚ್​​.ಡಿ ಕುಮಾರಸ್ವಾಮಿ ಚುನಾವಣೆ ಎನ್ನುವ ಮೂಲಕ ಅನರ್ಹ ಶಾಸಕರನ್ನು ಹೆದರಿಸುತ್ತಿದ್ದಾರೆ ಎಂದು ಹೇಳಿದರು.

DCM Ashwath Narayan Reaction Over Kodi Mutt Swamiji Prediction

ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ, ಈಗಷ್ಟೇ ಅಲ್ಲ ಮುಂದೆಯೂ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನಾವು ಇನ್ನಷ್ಟು ಸಧೃಡವಾಗಲಿದ್ದೇವೆ ಎಂದು ಅಭಿಪ್ರಾಯ ಪಟ್ಟರು.

ಸಿದ್ದರಾಮಯ್ಯ ಮತ್ತು ಎಚ್​​.ಡಿ ಕುಮಾರಸ್ವಾಮಿಗೆ ಚುನಾವಣೆ ಕಂಡರೆ ಭಾರೀ ಹೆದರಿಕೆ. ಚುನಾವಣೆಯೆಂದರೆ ಅವರಿಗೆ ನಿದ್ದೆಯೇ ಬರಲ್ಲ. ನಾವು ಎಲ್ಲಾ ಚುನಾವಣೆಗಳು ಸಿದ್ಧರಿದ್ದೇವೆ. ನಾವು ಅಧಿಕಾರಕ್ಕೆ ಬರುವ ಮುನ್ನ ಯಾವುದೇ ಚುನಾವಣೆ ಬರುವುದಿಲ್ಲ ಎಂದರು.

'ನಾನು ಹಿಂದೆಯೇ ಹೇಳಿದ್ದೆ ಕಂಬಳಿ ಹಾಸೀತು ಹಂಬಳಿ ಹಳಸೀತು, ಸಿದ್ದು ಗದ್ದುಗೆ ಹಾಸೀತು ಎಂದು ಈ ಹಿಂದೆಯೇ ಹೇಳಿದ್ದೆ. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು ನನ್ನ ಮಾತು ಸುಳ್ಳಾಗಲಿಲ್ಲ. ಈಗ ಮತ್ತೆ ಶುಭ ಸೂಚನೆ ಇದೆ' ಎಂದು ಶ್ರೀಗಳು ಹೇಳಿದ್ದಾರೆ.

ಸಿದ್ದರಾಮಯ್ಯರಿಗೆ ನೀವು ರಾಜ್ಯದ ಗದ್ದುಗೆ ಹಿಡಿದಿದ್ದೀರಿ, ನೀವು ದೆಹಲಿಯ ಗದ್ದುಗೆ ಹಿಡಿಯಿರಿ ಎಂದು ಸಲಹೆ ನೀಡುತ್ತಿದ್ದೇನೆ. ಹಾಲುಮತ ಸಮಾಜದವರು ಇಡೀ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ನೆಲೆಸಿದ್ದಾರೆ.

English summary
Deputy Prime Minister Dr Ashwath Narayan commented on the Political future of Siddaramaiah Over Kodi Shree Prediction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X