ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಲಾಕ್‌ಡೌನ್‌?, ಸ್ಪಷ್ಟನೆ ನೀಡಿದ ಅಶ್ವಥ್ ನಾರಾಯಣ್

|
Google Oneindia Kannada News

ಬೆಂಗಳೂರು, ಜೂನ್ 22: ''ಕೊರೊನಾ ವೈರಸ್ ನಮ್ಮ ಜತೆಯೇ ಇರುತ್ತದೆ. ಆದರೆ, ಆರ್ಥಿಕ ಲಾಕ್ ಡೌನ್ ಇರಲ್ಲ'' ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಲಾಕ್‌ಡೌನ್ ಬಗ್ಗೆ ಹೇಳಿಕೆ ನೀಡಿದ್ದಾರೆ.

Recommended Video

ಜನ ನಿಮ್ಮನ್ನು ನೋಡುತ್ತಿರುತ್ತಾರೆ ಹುಷಾರ್ | Manmohan Singh | Narendra Modi | Oneindia Kannada

ಮತ್ತೆ ಸರ್ಕಾರ ಲಾಕ್‌ಡೌನ್ ಮಾಡುತ್ತದೆಯೇ? ಎನ್ನುವ ಗೊಂದಲ ಇದ್ದೂ, ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ''ಬೇರೆ ರಾಜ್ಯದಿಂದ ಬಂದವರಿಂದಲೇ ಹೆಚ್ಚು ಸೋಂಕು ಆಗಿದೆ. ಯಾರೂ ಭಯ ಭೀತರಾಗೋದು ಬೇಡ. ಲಾಕ್ ಡೌನ್ ನಮಗೆ ಮತ್ತೆ ಅವಶ್ಯಕತೆ ಇಲ್ಲ. ಕೊರೊನಾ ಎದುರಿಸಲು ನಾವು ಸಿದ್ಧರಾಗಿದ್ದೇವೆ.'' ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಡಿಸಿಎಂ ಅಶ್ವಥ್ ನಾರಾಯಣ ಸುಮ್ಮನಿದ್ದರೆ ಸರಕಾರಕ್ಕೆ ಒಳ್ಳೆಯದುಡಿಸಿಎಂ ಅಶ್ವಥ್ ನಾರಾಯಣ ಸುಮ್ಮನಿದ್ದರೆ ಸರಕಾರಕ್ಕೆ ಒಳ್ಳೆಯದು

ಸೋಂಕಿತರಲ್ಲಿ 5 ರಿಂದ 7% ಮಾತ್ರ ಕೋವಿಡ್ 19 ಆಸ್ಪತ್ರೆ ಬೆಡ್ ಬೇಕಾಗುತ್ತೆ. ಉಳಿದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಲಾಗುತ್ತದೆ ಎಂದು ಡಿಸಿಎಂ ಅಶ್ವಥನಾರಾಯಣ್ ಹೇಳಿಕೆ ನೀಡಿದ್ದಾರೆ.

DCM Ashwath Narayan Clarification On Lockdown

''ಕನಕಪುರದಲ್ಲಿ ಆದೇಶದ ಲಾಕ್ ಡೌನ್ ಇರಲ್ಲ. ಡಿಕೆಶಿ ಅವರು ಲಾಕ್ ಡೌನ್ ಹೇರಲು ಬರುವುದಿಲ್ಲ. ಡಿಕೆಶಿ ಸಲಹೆ ಕೊಡಬಹುದು ಅಷ್ಟೇ. ಅಲ್ಲಿ ಸ್ವಯಂ ಪ್ರೇರಿತರಾಗಿ ಜನರು ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಇದೆ. ಡಿಕೆಶಿ ಅವರ ಬಗ್ಗೆ ಹೇಳುವುದಕ್ಕೆ ಹೋದ್ರೆ ಎಪಿಸೋಡ್ ಆಗುತ್ತೆ. ಅವರ ಬಗ್ಗೆ ಈಗ ಜಾಸ್ತಿ ಮಾತಾಡಲ್ಲ'' ಎಂದು ಡಿಕೆ ಶಿವಕುಮಾರ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

English summary
Deputy chief minister Ashwath Narayan gave clarification about lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X