ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆಗೆ ನ. 12ಕ್ಕೆ ಚುನಾವಣೆ ಘೋಷಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20: ರಾಜ್ಯ ಚುನಾವಣೆ ಆಯೋಗವು ದಾವಣಗೆರೆ ಮಹಾನಗರ ಪಾಲಿಕೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ಭಾನುವಾರ ಚುನಾವಣೆ ಘೋಷಣೆ ಮಾಡಿದೆ. ನವೆಂಬರ್ 12ನೇ ತಾರೀಕು ಮತದಾನ ನಡೆಯಲಿದೆ. ದಾವಣಗೆರೆಯಲ್ಲಿ 45 ಹಾಗೂ ಮಂಗಳೂರಿನಲ್ಲಿ 60 ವಾರ್ಡ್ ಗಳು ಇವೆ.

ಜತೆಗೆ 6 ನಗರಸಭೆ, 3 ಪುರಸಭೆ ಹಾಗೂ 3 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯಲಿರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವಿವರ ಇಲ್ಲಿದೆ:

ರಾಮನಗರ ಜಿಲ್ಲೆ
ಕನಕಪುರ ನಗರಸಭೆ

ಮಾಗಡಿ ಪುರಸಭೆ

ಕೋಲಾರ ಜಿಲ್ಲೆ
ಕೋಲಾರ ನಗರಸಭೆ

ಮುಳಬಾಗಲು ನಗರಸಭೆ

ರಾಬರ್ಟ್ ಸನ್ ಪೇಟೆ (ಕೆಜಿಎಫ್) ನಗರಸಭೆ

ಚಿಕ್ಕಬಳ್ಳಾಪುರ ಜಿಲ್ಲೆ
ಗೌರಿಬಿದನೂರು ನಗರಸಭೆ

ಚಿಂತಾಮಣಿ ನಗರಸಭೆ

ಶಿವಮೊಗ್ಗ ಜಿಲ್ಲೆ
ಜೋಗ್- ಕಾರ್ಗಲ್ ಪಟ್ಟಣ ಪಂಚಾಯಿತಿ

ಚಿಕ್ಕಮಗಳೂರು ಜಿಲ್ಲೆ
ಬೀರೂರು ಪುರಸಭೆ

ಧಾರವಾಡ ಜಿಲ್ಲೆ
ಕುಂದಗೋಳ ಪಟ್ಟಣ ಪಂಚಾಯಿತಿ

ಬಳ್ಳಾರಿ ಜಿಲ್ಲೆ
ಕಂಪ್ಲಿ ಪುರಸಭೆ

ಕೂಡ್ಲಿಗಿ ಪಟ್ಟಣ ಪಂಚಾಯಿತಿ

Voting

ಅಕ್ಟೋಬರ್ 20ನೇ ತಾರೀಕು ಭಾನುವಾರದಿಂದ ಚುನಾವಣೆ ಮಾದರಿ ನೀತಿ ಸಂಹಿತೆಯು ಜಾರಿ ಆಗುತ್ತದೆ ಎಂದು ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಅವಧಿಯಲ್ಲಿ ಕಡ್ಡಾಯವಾಗಿ ಕೆಲ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಚುನಾವಣೆ ವೇಳಾಪಟ್ಟಿ ಹೀಗಿದೆ:
ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸುವ ದಿನಾಂಕ 24.10.2019

ನಾಮಪತ್ರ ಸಲ್ಲಿಸಲು ಕೊನೆ ದಿನ 31.10.2019

ನಾಮಪತ್ರ ಪರಿಶೀಲಿಸಲು ಕೊನೆ ದಿನ 2.11.2019

ನಾಮಪತ್ರ ವಾಪಸ್ ಪಡೆಯುವುದಕ್ಕೆ ಕೊನೆ ದಿನ 4.11.2019

ಮತದಾನ ನಡೆಯುವ ದಿನ 12.11.2019

ಅಗತ್ಯ ಇದ್ದಲ್ಲಿ ಮರು ಮತದಾನ ನಡೆಯುವ ದಿನ 13.11.2019

ಮತ ಎಣಿಕೆ ದಿನ 14.11.2019

English summary
Karnataka election commission announced election for Davanagere and Mangaluru corporation on November 12th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X