ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿ ಬೆತ್ತಲೆ ಮಾಡಿ ಲಕ್ಷಾಂತರ ಸುಲಿಗೆ ಮಾಡಿದ ನಗ್ನ ಸುಂದರಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ಡೇಟಿಂಗ್ ಆಪ್ ನಲ್ಲಿ ಯುವತಿಯೊಂದಿಗೆ ಮೋಜು ಮಾಡಲು ಹೋಗಿ ಸಾಫ್ಟ್‌ವೇರ್ ಎಂಜಿನಿಯರ್ ಇಂಗು ತಿಂದ ಮಂಗನಂತಾಗಿದ್ದಾನೆ. ಯುವತಿಯರ ಬೆತ್ತಲೆ ವಿಡಿಯೋ ನೋಡುವ ಹೊಸ ಡೇಟಿಂಗ್ ಆಪ್‌ ಗಳು ಬಂದಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಅದರ ಆಸೆಗೆ ಬಿದ್ದು ಆಪ್ ಡೌನ್ ಲೋಡ್ ಮಾಡಿಕೊಂಡಿದ್ದ. ಯಾರೂ ಇಲ್ಲದ ವೇಳೆ ಯವತಿಗೆ ಕರೆ ಮಾಡಿ ಎರಡು ಸಾವಿರ ಹಣ ಹಾಕಿದ್ದ. ಆ ಕಡೆಯಿಂದ ವಿಡಿಯೋ ಕಾಲ್ ಮಾಡಿದ ಯುವತಿ ಬೆತ್ತಲೆಯಾದಳು. ಅಮೇಲೆ ಈತನನ್ನೇ ಬೆತ್ತಲೆ ಮಾಡಿದಳು. ಇದರ ಪೂರ್ಣ ಸ್ಟೋರಿ ಇಲ್ಲಿದೆ ನೋಡಿ.

ಹೆಸರು ರಾಮಚರಣ್ ರೆಡ್ಡಿ. ಸಾಪ್ಟ್ ವೇರ್‌ ಉದ್ಯೋಗಿಯಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವೈಟ್ ಫೀಲ್ಡ್ ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಆನ್‌ಲೈನ್ ಡೇಟಿಂಗ್ ವೆಬ್ ತಾಣಕ್ಕೆ ಹೋಗಿ ಶ್ವೇತಾ ಎಂಬುವರನ್ನು ಪರಿಚಯಿಸಿಕೊಂಡಿದ್ದ. ಆನ್‌ಲೈನ್‌ ನಲ್ಲಿಯೇ ಮಾನನಿಯರ ಬೆತ್ತಲೆ ದೃಶ್ಯ ನೋಡಬೇಕಾದರೆ ಎರಡು ಸಾವಿರ ಗೂಗಲ್ ಪೇ ಮಾಡುವಂತೆ ಶ್ವೇತಾ ತಿಳಿಸಿದ್ದಾಳೆ. ಎರಡೇ ಸಾವಿರ ಅಲ್ಲವೇ ಅಂತ ರಾಮಚರಣ್ ಗೂಗಲ್ ಪೇ ಮಾಡಿದ್ದಾರೆ. ಶ್ವೇತಾ ನಿಖಿತಾ ಎಂಬಾಕೆಯ ನಂಬರ್ ನೀಡಿದ್ದಾಳೆ.

Unforgettable 2020: ಭಾರತದಲ್ಲಿ ನಿಷೇಧಗೊಂಡ ಟಾಪ್ 5 AppsUnforgettable 2020: ಭಾರತದಲ್ಲಿ ನಿಷೇಧಗೊಂಡ ಟಾಪ್ 5 Apps

ಇದೇ ಸಮಯಕ್ಕೆ ನಿಖಿತಾ ಕಡೆಯಿಂದ ರಾಮಚರಣ್ ಗೆ ವಿಡಿಯೋ ಕಾಲ್ ಬಂದಿದೆ. ಆನ್‌ ಲೈನ್ ನಲ್ಲಿ ಬೆತ್ತಲೆಯಾದ ನಿಖಿತಾ ಪ್ರಚೋದಿಸಿ ರಾಮ್ ಚರಣ್ ಗೂ ಬೆತ್ತಲೆಯಾಗುವಂತೆ ಹೇಳಿದ್ದಾಳೆ. ಈತ ಬೆತ್ತೆಲೆಯಾಗಿದ್ದನ್ನು ನಿಖಿತಾ ರೆಕಾರ್ಡ್ ಮಾಡಿಕೊಂಡು ವಿಡಿಯೋ ಕರೆ ಕಡಿತಗೊಳಿಸಿದ್ದಾಳೆ. ಇದಾದ ಎರಡೇ ನಿಮಿಷಕ್ಕೆ , ನೀನು ಕೇಳಿದಷ್ಟು ಹಣ ಕೊಡು ಇಲ್ಲದಿದ್ದರೆ ನಿನ್ನ ಬೆತ್ತಲೆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದಾಳೆ. ಅದೇ ಡೇಟಿಂಗ್ ವೆಬ್ ತಾಣದ ಮೂಲಕ ಶಿರಿನ್ ಮತ್ತು ಪ್ರೀತಿ ಅಗಲರ್ ವಾಲ್ ಇಬ್ಬರು ಸೇರಿ ಕರೆ ಮಾಡಿ ಪಶ್ಚಿಮ ಬಂಗಾಳದ ನಮಖಾನ್ ಪಂಚಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಹಣ ಹಾಕುವಂತೆ ಹೆದರಿಸಿದ್ದಾರೆ.

Dating App: Engineer lost 16 lakhs

ಆನ್‌ಲೈನ್ ನಲ್ಲಿ ಬೆತ್ತಲೆಯಾಗುವ ಭಯಕ್ಕೆ ರಾಮಚರಣ್ ತನ್ನ ಖಾತೆಯಲ್ಲಿದ್ದ ಹದಿನಾರು ಲಕ್ಷ ರೂಪಾಯಿ ಯನ್ನು ವರ್ಗಾವಣೆ ಮಾಡಿದ್ದಾನೆ. ಬಳಿಕ ತನ್ನ ಆಪ್ತರ ಜತೆ ಆಗಿರುವ ಘಟನೆ ಬಗ್ಗೆ ಹೇಳಿಕೊಂಡಿದ್ದು, ಅವರ ಸಲಹೆ ಮೇರೆಗೆ ವೈಟ್‌ ಫೀಲ್ಡ್‌ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ನಾಲ್ವರು ಡೇಟಿಂಗ್ ವೆಬ್ ತಾಣದ ಯುವತಿಯರ ವಿರುದ್ದ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುವುದೇ ಸವಾಲಿನ ಕೆಲಸ. ಆ ಯುವತಿಯರು ವಿದೇಶದಲ್ಲಿದ್ದುಕೊಂಡು ಏನಾದರೂ ಮಾಡಿದಲ್ಲಿ ಬಂಧನ ಮಾಡುವುದು ಕಷ್ಟವಾಗಲಿದೆ.

Recommended Video

Australia ಬ್ಯಾಟ್ಸ್ಮನ್‌ಗಳನ್ನು ಕಟ್ಟಿ ಹಾಕಿದ Team India ಬೌಲರ್ಸ್ | Oneindia Kannada

ಕರೋನಾ ಲಾಕ್ ಡೌನ್ ಬಳಿಕ ವಿಡಿಯೋ ಕಾಲ್ ಮಾಡಿ ಯುವತಿಯರು ಬೆತ್ತೆಲೆಯಾಗುವ ಹೊಸ ಆಪ್‌ ಗಳು ಹುಟ್ಟಿಕೊಂಡಿದ್ದವು. ಕೇವಲ ಐದನೂರು, ಒಂದು ಸಾವಿರ ಅಂತ ನಂಬಿ ಅವುಗಳ ಸಹವಾಸಕ್ಕೆ ಹೋದರೆ ಬಟ್ಟೆ ಹದಿರುಕೊಂಡು ಬೀದಿಗೆ ಬೀಳಬೇಕಾಗುತ್ತದೆ ಸೈಬರ್ ತಜ್ಞರು ತಿಳಿಸಿದ್ದಾರೆ. ಅಶ್ಲೀಲ ವಿಡಿಯೋ ನೋಡಿ ಕಣ್ಣು ತುಂಬಿಕೊಳ್ಳುವ ನೆಪದಲ್ಲಿ ನೋಡುವರನ್ನು ಬೆತ್ತಲೆಗೊಳಿಸಿ ಬಳಿಕ ಲಕ್ಷಾಂತರ ಸುಲಿಗೆ ಮಾಡುತ್ತಾರೆ. ರಾಮ್ ಚರಣ್ ರೆಡ್ಡಿಯಂತೆ ಇರುವ ಹಣ ಕಳೆದುಕೊಂಡು ಬೀದಿಗೆ ಬೀಳುವುದು ಖಚಿತ.

English summary
Software engineer looses Rs 16 lakhs after video calling a girl on dating app know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X