ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯುಸಿ ಮರು ಮೌಲ್ಯಮಾಪನ ಅರ್ಜಿ ಶುಲ್ಕ ಕಡಿತಕ್ಕೆ ಮನವಿ

|
Google Oneindia Kannada News

ಬೆಂಗಳೂರು, ಜುಲೈ 18: ಪಿಯುಸಿ ಪರೀಕ್ಷೆಯ ಮರು ಮೌಲ್ಯಮಾಪನ ಅರ್ಜಿ ಹಾಗೂ ಉತ್ತರ ಪತ್ರಿಕೆಗಳ ನಕಲು ಪಡೆಯಲು ನಿಗದಿಯಾಗಿರುವ ಶುಲ್ಕವನ್ನು ಕಡಿತಗೊಳಿಸಿ ಎಂದು ದಾಸರಹಳ್ಳಿ ಶಾಸಕ ಮಂಜುನಾಥ್ ಮನವಿ ಮಾಡಿದ್ದಾರೆ.

Recommended Video

ಹೆಂಡತಿಗೆ ಮಕ್ಕಳೊಂದಿಗೆ 4 Km ನಡೆದುಕೊಂಡು ಸಿಎಂ ಮನೆಮುಂದೆ ಬಂದ ಕೊರೊನ ಸೊಂಕಿತ | Oneindia Kannada

ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಶಾಸಕ ಮಂಜುನಾಥ್ 'ಕೊವಿಡ್ ಕಾರಣದಿಂದ ಜನ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಹೆಚ್ಚು ಶುಲ್ಕ ಸಂಗ್ರಹಿಸುವುದು ಸೂಕ್ತವಲ್ಲ, ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತಾದೃಷ್ಠಿಯಿಂದ ಶುಲ್ಕ ಕಡಿಮೆಗೊಳಿಸಬೇಕು' ಎಂದು ಒತ್ತಾಯಿಸಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಉಳಿದ ಜಿಲ್ಲೆಗಳ ಕಥೆಯೇನು?ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್, ಉಳಿದ ಜಿಲ್ಲೆಗಳ ಕಥೆಯೇನು?

ಇನ್ನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸದೆ, ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗುವಂತೆ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Dasarahalli Mla Manjunath Has Requested To Cut Puc Revaluation Application Fee

ಪಿಯುಸಿ ಫಲಿತಾಂಶ ಜುಲೈ 14ರಂದು ಪ್ರಕಟವಾಗಿತ್ತು. ಇದೀಗ, ಫಲಿತಾಂಶದ ಮೇಲೆ ಅನುಮಾನ ಇರುವ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನದ ಅವಕಾಶ ಇರುತ್ತದೆ. ಅಂತಹ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ನಕಲು ಸಹ ಪಡೆಯುವ ಅವಕಾಶ ಇದೆ.

ಪ್ರಸ್ತುತ, ಪಿಯುಸಿ ಮರು ಮೌಲ್ಯಮಾಪನಕ್ಕೆ 1670 ರೂ ಶುಲ್ಕ ಹಾಗೂ ಒಂದು ಉತ್ತರ ಪತ್ರಿಕೆ ನಕಲು ಪಡೆಯಲು 520 ಶುಲ್ಕ ನಿಗದಿ ಮಾಡಲಾಗಿದೆ.

English summary
Dasarahalli MLA Manjunath has requested to chief minister BS Yediyurappa to cut the PUC re-evaluation application fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X