• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಭಯಾನಕ ಶಸ್ತ್ರಾಸ್ತ್ರಗಳ ದಾಸ್ತಾನು ಪತ್ತೆ

|

ಬೆಂಗಳೂರು, ಫೆಬ್ರವರಿ 15: ದೊಡ್ಡ ಮಟ್ಟದಲ್ಲಿ ಸಂಗ್ರಹಿಸಲಾಗಿದ್ದ ಅತ್ಯಾಧುನಿಕ, ಅತ್ಯಂತ ಮಾರಕ ಶಸ್ತ್ರಾಸ್ತ್ರಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಭಾರಿ ಸಂಖ್ಯೆಯಲ್ಲಿ ವಿನಾಶಕಾರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಗರದ ಸುದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ ಸಂಗ್ರಹಿಸಿಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಜುನೈದ್, ಮಹಮ್ಮದ್ ತಬ್ರೇಜ್ ಅಹಮ್ಮದ್ ಎಂಬುವರನ್ನು ಬಂಧಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

ವಿನಾಶಕಾರಿ ಸ್ಟನ್ ಗನ್ ಮಾದರಿಯ 7 ಪೈರ್ ಆರ್ಮ್ಸ್, 9 ಎಂಎಂ ಮಾದಿರಯ 11 ಪಿಸ್ತೂಲುಗಳು, 303 ಮಾದರಿಯ 10 ಬಂದೂಕುಗಳು ಸೇರಿ ಒಟ್ಟು 28 ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲವು ಜೀವಂತ ಗುಂಡುಗಳನ್ನು ಗುಂಡುಗಳನ್ನೂ ಸಂಗ್ರಹಿಸಿಡಲಾಗಿತ್ತು.

ಭಾರಿ ದೊಡ್ಡ ಸಂಖ್ಯೆಯ ಮತ್ತು ಆಧುನಿಕ ವಿನಾಶಕಾರಿ ಶಸ್ತ್ರಾಸ್ತ್ರಗಳು ಬಂದದ್ದು ಎಲ್ಲಿಂದ, ಯಾವ ಕಾರಣಕ್ಕೆ ಅವನ್ನು ಇಟ್ಟುಕೊಳ್ಳಲಾಗಿತ್ತು ಎಂಬಿತ್ಯಾದಿ ಮಾಹಿತಿ ಪೊಲೀಸರಿಂದ ನಿರೀಕ್ಷಿಸಲಾಗಿದೆ.

ಇಷ್ಟು ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳು ಸಂಗ್ರಹಿಸಿರುವ ಹಿಂದೆ ಭಯೋತ್ಪಾದನಾ ಕೃತ್ಯ ನಡೆಸುವ ಉದ್ದೇಶ ಇರುವ ಶಂಕೆ ವ್ಯಕ್ತವಾಗಿದೆ. ಉಗ್ರರು ಬೆಂಗಳೂರನ್ನು ತಮ್ಮ ಗುರಿ ಮಾಡಿಕೊಂಡಿದ್ದರಾ ಎಂಬ ಅನುಮಾನ ಮೂಡಿದೆ.

English summary
Dangerous Weapons seized by Bengaluru police in Suddagunte area. Total 29 weapons and many bullets were seized. Weapons were highly dangerous and new new kind of weapons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X