• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !

|

ಬೆಂಗಳೂರು,ಜನವರಿ 27: ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಅತಿ ಜಾಗರೂಕತೆ ವಹಿಸಬೇಕು ! ಇಲ್ಲದಿದ್ದರೆ ಜೀವ ಉಳಿಯುವುದೇ ಕಷ್ಟ. ಹೌದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ಆಟೋ ಹಾಗೂ ಎರಡು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿವೆ.

ಅತಿ ವೇಗದಲ್ಲಿ ಬರುವ ಆಟೋಗೆ ಎರಡೂ ಕಡೆಯಿಂದ ಬರುವ ದ್ವಿಚಕ್ರ ವಾಹನಗಳು ಡಿಕ್ಕಿ ಹೊಡೆದಿವೆ. ಇದರಿಂದ ಮೂರು ವಾಹನ ನುಜ್ಜುಗುಜ್ಜಾಗಿವೆ. ಸ್ಕೂಟರ್ ಚಾಲಕನಿಗೆ ಗಂಭೀರ ಗಾಯವಾಗಿದೆ. ಉಳಿದಂತೆ ಆಟೋ ಚಾಲಕ ಮತ್ತು ಬೈಕ್ ಚಾಲಕ ಪ್ರಾಣಾಪಾಯದಿಂದ ಪರಾಗಿದ್ದಾರೆ.

ಚಾಮರಾಜಪೇಟೆಯಲ್ಲಿ ಜ. 25 ರಂದು ಈ ಘಟನೆ ನಡೆದಿದ್ದು, ಅಪಘಾತದ ಭೀಕರ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಾಳುಗಳನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಮುಖ್ಯ ರಸ್ತೆಗೆ ಸಂಪರ್ಕಿಸುವ ಅಡ್ಡ ರಸ್ತೆಯಲ್ಲಿ ಆಟೋ ಚಾಲಕ ಅತಿ ವೇಗವಾಗಿ ಬರುತ್ತಾನೆ. ವೇಗವಾಗಿ ಬರುತ್ತಿದ್ದ ಬೈಕ್ ಆಟೋಗೆ ಡಿಕ್ಕಿ ಹೊಡೆದು ಎರಡೂ ವಾಹನ ಪಲ್ಟಿ ಹೊಡೆಯುತ್ತವೆ. ಇದೇ ವೇಳೆ ಮತ್ತೊಂದು ಕಡೆಯಿಂದ ಬಂದ ಸ್ಕೂಟರ್ ಆಟೋಗೆ ಅಪ್ಪಳಿಸುತ್ತದೆ. ಮೂವರು ಸಹ ಗಾಯಗೊಂಡಿದ್ದಾರೆ.

   ಮಾದಕ ದ್ರವ್ಯ ಸೇವನೆಯ ಬಗ್ಗೆ ಜಾಗೃತಿ | Oneindia Kannada

   ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಅತಿ ವೇಗದಿಂದ ವಾಹನ ಚಾಲನೆ ಮಾಡಿದರೆ ಬೆಂಗಳೂರಿನಲ್ಲಿ ಏನಾಗುತ್ತದೆ ಎಂಬುದನ್ನು ಎಚ್ಚರಿಸುವಂತಿದೆ. ಅತಿ ವೇಗ ಅಪಾಯಕಾರಿ ಎಂದು ಪೊಲೀಸರು ಪದೇ ಪದೇ ಜಾಗೃತಿ ಮೂಡಿಸಿದರೂ ವಾಹನ ಸವಾರರು ಪಾಲಿಸುವುದಿಲ್ಲ. ಇಂತಹ ಅವಘಡ ಸಂಭವಿಸಿದಾಗ ಎಚ್ಚೆತ್ತುಕೊಳ್ಳುವ ವಾಹನ ಸವಾರರು ಪುನಃ ಅದೇ ಚಾಳಿಯನ್ನು ಮುಂದುವರೆಸುತ್ತಾರೆ.

   English summary
   Dangerous accident between a Auto and two wheeler was reported in Bengaluru and the incident caught in cctv camera know more ,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X