ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಂಡು-ಬೈಯಪ್ಪನಹಳ್ಳಿ ನಡುವೆ ಸ್ವಯಂ ಚಾಲಿತ ರೈಲ್ವೆ ಸಿಗ್ನಲ್

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ದಂಡು-ಬೈಯಪ್ಪನಹಳ್ಳಿ ರೈಲು ನಿಲ್ದಾಣದ ನಡುವೆ ಹಮ್ಮಿಕೊಂಡಿದ್ದ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಕೆ ಕಾಮಗಾರಿಯನ್ನು ಪೂರ್ಣಗೊಳಿಸಿದೆ.

ನೈಋತ್ಯ ರೈಲ್ವೆಯು ಬೆಂಗಳೂರು ವಿಭಾಗದ ದಂಡು ರೈಲ್ವೆ ನಿಲ್ದಾಣ-ಬೈಯಪ್ಪನಹಳ್ಳಿ ಒಟ್ಟು 6 ಕಿ.ಮೀ ವ್ಯಾಪ್ತಿಯಲ್ಲಿ ಸಿಗ್ನಲ್ ಅಳವಡಿಸಲಾಗಿದೆ. 2013-14ನೇ ಸಾಲಿನಲ್ಲಿ 19.75 ಕೋಟಿ ವೆಚ್ಚದಲ್ಲಿ ನಗರದ ದಂಡು ರೈಲ್ವೆ ನಿಲ್ದಾಣ-ವೈಟ್‌ಫೀಲ್ಡ್ ನಡುವೆ ಸ್ವಯಂ ಚಾಲೊತ ಸಿಗ್ನಲ್ ವ್ಯವಸ್ಥೆ ಅಳವಡಿಸುವ ಯೋಜನೆ ರೂಪಿಸಲಾಗಿತ್ತು.

ಕಾಚಿಗುಡ - ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮೈಸೂರಿನವರೆಗೂ ವಿಸ್ತರಣೆಕಾಚಿಗುಡ - ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮೈಸೂರಿನವರೆಗೂ ವಿಸ್ತರಣೆ

ಈ ಮಾರ್ಗದಲ್ಲಿ ದಂಡು, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಹೂಡಿ ಮತ್ತು ವೈಟ್‌ಫೀಲ್ಡ್ ರೈಲು ನಿಲ್ದಾಣಗಳಿವೆ. ಇದೀಗ ಮೊದಲ ಹಂತದಲ್ಲಿ ದಂಡು-ಬೈಯಪ್ಪನಹಳ್ಳಿ ನಡುವಿನ ಸ್ವಯಂ ಚಾಲತ ಸಿಗ್ನಲ್ ವ್ಯವಸ್ಥೆ ಕಾಮಗಾರಿ ಪೂರ್ಣಗೊಂಡಿದೆ.

Dandu-baiyappanahalli railway lane will become automatic signaling

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವಿನ ಕಾಮಗಾರಿ ಪ್ರಗತಿಯಲ್ಲಿದ್ದು, ಈ ತಿಂಗಳ ಅಂತ್ಯದೊಳಗೆ ಪೂರ್ಣ ಗೊಳ್ಳಲಿದೆ. ಬೆಂಗಳೂರು-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗವು ಪ್ರಮುಖ ಮಾರ್ಗವಾಗಿದ್ದು, ಪ್ರತಿ ದಿನ 86 ರೈಲುಗಳು ಸಂಚರಿಸುತ್ತವೆ.

Dandu-baiyappanahalli railway lane will become automatic signaling

ದಂಡು-ಬೈಯಪ್ಪನಹಳ್ಳಿ ನಡುವಿನ ಸ್ವಯಂ ಚಾಲಿತ ಸಿಗ್ನಲ್ ವ್ಯವಸ್ಥೆಯಿಂದ ರೈಲುಗಳು ಮತ್ತಷ್ಟು ವೇಗವಾಗಿ ಚಲಿಸಲು ಸಹಕಾರಿಯಾಗಲಿದೆ. ಕೆಎಸ್‌ಆರ್ ನಿಲ್ದಾಣಕ್ಕೆ ಬರುವ ರೈಲುಗಳು ಸಿಗ್ನಲ್‌ಗಾಗಿ ಮಾರ್ಗದ ರೈಲು ನಿಲ್ದಾಣಗಳಲ್ಲಿ ಕಾಯುವುದು ಕಡಿಮೆಯಾಗಿದೆ.

English summary
Dandu -baiyappanahalli railway lane will become automatic signaling system. In further there is no need of manual signaling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X