ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆಯಲ್ಲಿ ಬಾಟಲಿ ಹಿಡಿದು ನೃತ್ಯ ಮಾಡಿದ್ದು ಶಿಕ್ಷಕಿಯರಲ್ಲ, ಮತ್ಯಾರು?

|
Google Oneindia Kannada News

ಬೆಂಗಳೂರು, ಜನವರಿ 17: ನಗರದ ಶಾಲೆಯೊಂದರ ಕಾರ್ಯಕ್ರಮದಲ್ಲಿ 'ಅಲ್ಲಾಡ್ಸು' ಹಾಡಿಗೆ ಬಾಟಲಿ ಹಿಡಿದು ಮಹಿಳೆಯರು ನೃತ್ಯ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ನೃತ್ಯವು ಸಚಿವರ ಕೆಂಗಣ್ಣಿಗೂ ಗುರಿಯಾಗಿತ್ತು. ಮುಖ್ಯ ಶಿಕ್ಷಕರಿಗೆ ನೋಟಿಸ್ ಕೂಡ ನೀಡಿದ್ದರು. ಮಕ್ಕಳ ಮುಂದೆ ಹೀಗೆ ಅಸಭ್ಯವಾಗಿ ನೃತ್ಯ ಮಾಡಬಾರದು, ಅದು ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.

ವಿಡಿಯೋ: ಎಣ್ಣೆ ಹಾಡಿಗೆ ಹೆಜ್ಜೆ ಹಾಕಿದ ಬೆಂಗಳೂರಿನ ಶಾಲಾ ಶಿಕ್ಷಕಿಯರುವಿಡಿಯೋ: ಎಣ್ಣೆ ಹಾಡಿಗೆ ಹೆಜ್ಜೆ ಹಾಕಿದ ಬೆಂಗಳೂರಿನ ಶಾಲಾ ಶಿಕ್ಷಕಿಯರು

ಆದರೆ ಆ ಶಾಲೆಯಲ್ಲಿ ನೃತ್ಯ ಮಾಡಿದವರು ಶಿಕ್ಷಕಿಯರಲ್ಲ ಒಂದು ಸಂಘಟನೆಯ ಮಹಿಳೆಯರು ಎನ್ನುವುದು ಬಹಿರಂಗವಾಗಿದೆ.ನಗರದ ಸುಂಕೇನಹಳ್ಳಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವೇದಿಕೆಯಲ್ಲಿ ಮಹಿಳಾ ಸಂಘಟನೆಯೊಂದು ಖಾಸಗಿ ಕಾರ್ಯಕ್ರಮಕ್ಕೆ ವೇದಿಕೆಯನ್ನು ಬಾಡಿಗೆ ಪಡೆದಿತ್ತು.

Dance Viral Video In School Is Not A Teachers

ಈ ವೇಳೆ ಸಂಘಟನೆಯ ಸದಸ್ಯೆಯರು ಬಾಟಲಿ ಹಿಡಿದು ನೃತ್ಯ ಮಾಡಿದ್ದಾರೆ. ಇದರಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕಿಯರ ಪಾತ್ರ ಇಲ್ಲ ಎಂದು ಶಾಲೆಯವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರಿಗೆ ವರದಿ ನೀಡಿದ್ದಾರೆ.

ಘಟನೆಯಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಪಾತ್ರವೇನಿಲ್ಲ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಲಾ ವೇದಿಕೆಯನ್ನು ಖಾಸಗಿಯವರಿಗೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ.

ಖಾಸಗಿ ಕಾರ್ಯಕ್ರಮಕ್ಕೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು ವೇದಿಕೆ ನೀಡಬಾರದಿತ್ತು. ನೀಡಿದ ಬಳಿಕವೂ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಈ ಕೆಲಸ ಮಾಡದಿದ್ದರಿಂದ ಮಹಿಳಾ ಸಂಘಟನೆ ಪ್ರದರ್ಶಿಸಿದ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಈ ಕುರಿತು ತಪ್ಪೊಪ್ಪಿಗೆ ಪತ್ರವನ್ನು ಕೂಡ ನೀಡಿದ್ದಾರೆ.

English summary
Women dancing to a song called 'aladsu' went viral on social networking sites. But They are not teachers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X