ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯವನಿಕಾದಲ್ಲಿ ಅಂಜಲಿ ನಿರ್ದೇಶಿತ 'ಮೌನದಿಂದ ನೃತ್ಯಕ್ಕೆ'

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 02 : ಕಳೆದ ಒಂದು ದಶಕದಿಂದ ಅಬ್ಬರದ ಪ್ರಚಾರದಿಂದ ದೂರವಿದ್ದೇ, ವೀಣಾ ಭಟ್ ಅವರು ನಡೆಸುತ್ತಿರುವ 'ನೃತ್ಯದರ್ಪಣ' ಕಲಾ ಶಾಲೆಯು ನೃತ್ಯ, ನಾಟಕ ಮತ್ತು ಸಂಗೀತ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡುವುದು ಮಾತ್ರವಲ್ಲ ಕಥಕ್ ನೃತ್ಯ ವಿಭಾಗದಲ್ಲಿ ಹಲವು ಪ್ರಯೋಗಗಳಿಂದ ರಾಜ್ಯದಾದ್ಯಂತ ಜನರ ಮೆಚ್ಚುಗೆ ಗಳಿಸಿದೆ.

'ನೃತ್ಯದರ್ಪಣಕ್ಕಾಗಿ ಅಂಜಲಿ ರಾಮಣ್ಣ ಅವರು ಹಲವು ನೃತ್ಯ ರೂಪಕಗಳನ್ನು ಪರಿಕಲ್ಪಿಸಿ, ರಚಿಸಿ, ನಿರೂಪಿಸಿ, ನಿರ್ದೇಶಿಸಿರುತ್ತಾರೆ. ಅವುಗಳಲ್ಲಿ ಜಯಂತ್ ಕಾಯ್ಕಿಣಿ, ವಿದೂಷಿ ವೈಜಯಂತಿ ಕಾಶಿ, ಹಿರಿಯ ಪತ್ರಕರ್ತ ಭಾಸ್ಕರ್ ರಾವ್, ವಿದ್ವಾನ್ ಹಾಸಣಿಗಿ ಗಣಪತಿ ಭಟ್, ವಿದೂಷಿ ರೊಮೆಲಾ ಮುಖೋಪಾದ್ಯಾಯ್, ವಿದುಷಿ ಶಾಶ್ವತಿ ಸೇನ್, ವಿದೂಷಿ ಶೀಲಾ ಮೆಹ್ತಾ ಇವರುಗಳಿಂದ ಮೆಚ್ಚುಗೆ ಗಳಿಸಿದೆ.

Dance drama by Anjali Ramanna at Yavanika, Bengaluru

ಬಿರ್ಜು ಮಹರಾಜ್ ಜಿ ಅವರ ಆಶಿರ್ವಾದ ಗಳಿಸಿಕೊಂದ ಕೆಲವು ನೃತ್ಯ ರೂಪಕಗಳೆಂದರೆ;

* 'ನೃತ್ಯ ನುಡಿ ' - ಮೌನಕ್ಕೆ ಮತ್ತು ಕನ್ನಡ ಪಠ್ಯಕ್ಕೆ, ಗೆಜ್ಜೆಯಿಲ್ಲದೆ ಮೊದಲ ಬಾರಿಗೆ ಕಥಕ್ ನೃತ್ಯ ಪ್ರಸ್ತುತ ಪಡಿಸಿದ್ದು.

* 'ಸಾಸಿವೆ ತೆರೆದಿಟ್ಟ ಸತ್ಯ' - ಕನ್ನಡದ ಜಾನಪದ ತ್ರಿಪದಿಗಳನ್ನು ಬಳಸಿಕೊಂಡು ಜಾನಪದ ಶೈಲಿ ಮತ್ತು ಕಥಕ್ ಶೈಲಿಯ ಸಂಯೋಜನೆಯಿದ್ದ ನೃತ್ಯ ರೂಪಕ.

* ಶೇಕ್ಸ್ ಪಿಯರ್ ಸಾನೆಟ್-20 - ಯಕ್ಷಗಾನ, ಕಥಕ್ ಮತ್ತು ಪ್ಲೆಮಿಂಕೋ ಸಂಯೋಜನೆಯ ನೃತ್ಯ ರೂಪಕ.

* ಅನಿಕೇತನ - ಕನ್ನಡ ಜಾನಪದ ಗೀತೆಗಳಿಗೆ ಕಥಕ್ ಶೈಲಿಯ ನೃತ್ಯ ಪ್ರಸ್ತುತಿ. [ಪಂಚಕ್ಷೇತ್ರದ ಸಾಧಕಿ 'ಪಂಚಮಿ'ಗೆ ಪ್ರಪಂಚವೇ ಬೆರಗು]

Dance drama by Anjali Ramanna at Yavanika, Bengaluru

'ನೃತ್ಯದರ್ಪಣ'ದ ಮುಂದಿನ ಯೋಜನೆಗಳು;

* ನಮ್ಮೊಳಗಿರುವ ಅಪರಿಚಿತ ಗಾಂಧಿ ಮತ್ತು ನಾಚೇ ನಾಚಿಯಾರ್

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಬರಹಗಾರರು ಮತ್ತು ಕಲಾವಿದರ ಬಳಗ ಅವರ ಸಂಯೋಗದಲ್ಲಿ 'ನೃತ್ಯದರ್ಪಣ' ಈಗ ಪ್ರಸ್ತುತ ಪಡಿಸುತ್ತಿದೆ 'ಮೌನದಿಂದ ನೃತ್ಯಕ್ಕೆ' ಕಥಕ್ ಶೈಲಿಯ ನೃತ್ಯ ರೂಪಕ.

ಬ್ರಹ್ಮಾಂಡದ ಪಂಚಭೂತಗಳಲ್ಲೂ ಮೌನವಿದೆ ಆ ಮೌನದಲ್ಲಿ ನೃತ್ಯವಿದೆ ಎನ್ನುವ ಪರಿಕಲ್ಪನೆಗೆ ಅಂಜಲಿ ರಾಮಣ್ಣ ಅವರು ಅಕ್ಷರಗಳನ್ನು ಕೊಟ್ಟು, ಧ್ವನಿಯಾಗಿ, ನಿರೂಪಿಸಿ, ನಿರ್ದೇಶಿಸಿದ್ದಾರೆ ಮತ್ತು ವೀಣಾ ಭಟ್ ಅವರೊಂದಿಗೆ ನೃತ್ಯ ಸಂಯೋಜನೆ ಮತ್ತು ಉಡುಪು ವಿನ್ಯಾಸವನ್ನು ಮಾಡಿರುತ್ತಾರೆ.

ದಿನಾಂಕ : ಡಿಸೆಂಬರ್ 4, 2015, ಶುಕ್ರವಾರ
ಸಮಯ : ಸಂಜೆ 6.30 ಗಂಟೆಗೆ
ಸ್ಥಳ : ಯವನಿಕಾ ಸಭಾಂಗಣ, ನೃಪತುಂಗ ರಸ್ತೆ, ಬೆಂಗಳೂರು.

English summary
Nritya Darpan Kala Academy is presenting dance drama directed by advocate, columnist Anjali Ramanna at Yavanika auditorium in Bengaluru on 4th December, 2015. Nritya Darpan, founded by Veena Bhat in 2011, is training young dancers in all forms of dance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X