ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 25 ರಂದು ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ಬೃಹತ್ ಸಮಾವೇಶ

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಬಡ್ತಿ ಮೀಸಲಾತಿ ಮತ್ತು ಇತರೆ 14 ಅಂಶಗಳ ಕುರಿತು ಹಕ್ಕೋತ್ತಾಯಗಳ ಬಗ್ಗೆ ರಾಜ್ಯ ಸರಕಾರದ ಗಮನವನ್ನು ಸೆಳೆಯುವ ಉದ್ದೇಶದಿಂದ ಫೆಬ್ರವರಿ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಬೃಹತ್ ಸಮಾವೇಶವನ್ನು ಆಯೋಜಿಸಿರುವುದಾಗಿ ಒಕ್ಕೂಟದ ಅಧ್ಯಕ್ಷ ಡಾ ವೆಂಕಟಸ್ವಾಮಿ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿಂದ ಪತ್ರಿಕಾಗೋಷ್ಠಿಯನ್ನು ಮಾತನಾಡಿದ ಅವರು, ಈ ಬೃಹತ್ ಸಮಾವೇಶಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. 14 ಅಂಶಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.

Dalits to hold mega rally on Feb 25 demand govt on reservation in promotion

ಪರಿಶಿಷ್ಟ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷರನ್ನು ಕಳೆದ 10 ತಿಂಗಳಿನಿಂದ ನೇಮಕ ಮಾಡಿಲ್ಲ. ಇದರಿಂದ ದಲಿತ ಜನಾಂಗಕ್ಕೆ ರಾಜ್ಯ ಸರಕಾರವು ದ್ರೋಹ ಬಗೆದಿದೆ ಎಂದರು. ಆಯೋಗಕ್ಕೆ ಅಧ್ಯಕ್ಷರ ನೇಮಕವಾಗದೆ ಸಾವಿರಾರು ದೂರುಗಳು ವಿಲೇವಾರಿ ಆಗದೇ ಉಳಿದಿದೆ.

ಎಸ್‌ಸಿ/ಎಸ್‌ಟಿ ಮುಂಬಡ್ತಿ ಮೀಸಲಾತಿ ವಿಧೇಯಕಕ್ಕೆ ಒಪ್ಪಿಗೆಎಸ್‌ಸಿ/ಎಸ್‌ಟಿ ಮುಂಬಡ್ತಿ ಮೀಸಲಾತಿ ವಿಧೇಯಕಕ್ಕೆ ಒಪ್ಪಿಗೆ

ಹಾಗಾಗಿ ಕೂಡಲೇ ಅಧ್ಯಕ್ಷರನ್ನು ನೇಮಕ ಮಾಡುವುದು ದಲಿತ ಅಭ್ಯುದಯದ ಯೋಜನೆಗಳ ಫಲಾನುಭವಿಗಳ ಪಟ್ಟಿ ಸಿದ್ದತೆಯಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿಯನ್ನು ರದ್ದುಪಡಿಸಿ ಆಯಾ ಇಲಾಖೆಯ ಅಧಿಕಾರಿಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರ ನೀಡಬೇಕು.

ದಲಿತರ ಮತ ಗೆಲ್ಲಲು ಬಿಜೆಪಿಯಿಂದ ಮತ್ತೊಂದು ಪ್ರತಿಮೆ ಸ್ಥಾಪನೆ!ದಲಿತರ ಮತ ಗೆಲ್ಲಲು ಬಿಜೆಪಿಯಿಂದ ಮತ್ತೊಂದು ಪ್ರತಿಮೆ ಸ್ಥಾಪನೆ!

ಫೆ. 25 ರಂದು ಬೆಳಿಗ್ಗೆ 10 ಗಂಟೆಗೆ ಟೌನ್‍ಹಾಲ್‍ನಿಂದ ಬೃಹತ್ ರ್ಯಾಲಿ ಹೊರಟ ಸ್ವಾತಂತ್ರ ಉದ್ಯಾನವನ ತಲುಪಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಕೇಶವಮೂರ್ತಿ, ವೈ.ಎಸ್. ದೇವೂರ್, ಆರ್.ಎನ್.ಎಂ ರಮೇಶ್, ಮುನಿ ಆಂಜನೇಯಪ್ಪ. ಎಂ.ಎಂ ರಾಜು, ಕೋದಂಡರಾಮು ಹಾಜರಿದ್ದರು.

English summary
Dalit organisations demand Karnataka government to fulfill various demands including reservation in promotion. Many organisations are scheduled to hold huge rally from Town Hall to Freedom Park, Bengaluru on on Feb 25,2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X