• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಲಿತ ಪದ ಬಳಸುವಂತಿಲ್ಲ: ಕರ್ನಾಟಕ ಸರ್ಕಾರ ಆದೇಶ

|

ಬೆಂಗಳೂರು, ಜೂನ್ 4: ಸರ್ಕಾರದ ವ್ಯವಹಾರ ಮತ್ತು ಯಾವುದೇ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿಯವರಿಗೆ ದಲಿತ ಎಂಬ ಪದವನ್ನು ಬಳಸಬಾರದು ಎಂದು ಈ ಹಿಂದೆಯೇ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

ಇದೀಗ, ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಆಡಳಿತ ಭಾಷೆ, ಪತ್ರ ವ್ಯವಹಾರ, ಪ್ರಮಾಣ ಪತ್ರಗಳಲ್ಲಿ 'ದಲಿತ' ಎನ್ನುವ ಪದವನ್ನು ಬಳಸದಂತೆ ಸಮಾಜ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದೆ.

ಪರಿವಾರ, ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಸಿದ್ಧರಾಮಯ್ಯ

ಈ ಕುರಿತು ಕರ್ನಾಟಕ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸೂಚನೆಯಂತೆ ಇನ್ಮುಂದೆ ದಲಿತ ಪದ ಬಳಸುವಂತಿಲ್ಲ ಎಂದಿದ್ದಾರೆ.

ಇನ್ನು ಹರಿಜನ ಮತ್ತು ಗಿರಿಜನ ಎನ್ನುವ ಪದವನ್ನು ಬಳಕೆ ಮಾಡಬಾರದು ಎಂದು ಸೂಚಿಸಲಾಗಿದೆ. ಆಂಗ್ಲ ಭಾಷೆಯಲ್ಲಿ ಎಸ್‌ಸಿ/ಎಸ್‌ಟಿ ಎಂದು ನಮೂದಿಸಬಹುದು ಹಾಗೂ ಇತರೇ ಭಾಷೆಗಳಲ್ಲಿ ಸೂಕ್ತ ಭಾಷಾಂತರಗೊಳಿಸಿದ ಪದವನ್ನು ಬಳಸಬೇಕು ಎಂದು ಆದೇಶ ಹೊರಡಿಸಲಾಗಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಎಂದು ನಮೂದಿಸಬಹುದಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

English summary
Karnataka government has directed that the word 'Dalit' should not be used in government and in any affidavit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X