ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ದಲಿತ ಮಹಿಳೆಯ ಮೇಲೆ ಅಮಾನವೀಯ ಕೃತ್ಯ

|
Google Oneindia Kannada News

ಬೆಂಗಳೂರು, ಜೂನ್ 13: ಚಾಮರಾಜನಗರ ಜಿಲ್ಲೆಯಲ್ಲಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಬೆನ್ನಲ್ಲೇ ಈಗ ನಗರದ ಹೊ ಭಾಗದಲ್ಲಿ ದಲಿತ ಮಹಿಳೆಯನ್ನು ಕೀಳಾಗಿ ನಡೆಸಿಕೊಂಡ ಅಮಾನವೀಯ ಘಟನೆ ವರದಿ ಆಗಿದೆ.

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ದಲಿತ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ. ಸಾಲವನ್ನು ವಾಪಸ್ ಮಾಡಲಿಲ್ಲವೆಂದು ಹೀಗೆ ಸಾರ್ವಜನಿಕವಾಗಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.

ದಲಿತ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ: ಎರಡೂ ಕಡೆ ದೂರುದಲಿತ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ: ಎರಡೂ ಕಡೆ ದೂರು

ಹಲ್ಲೆಗೆ ಒಳಗಾಗಿರುವ ಮಹಿಳೆಯದ್ದು ಮೂಲತಃ ಕೊಳ್ಳೆಗಾಲ ಎನ್ನಲಾಗಿದ್ದು, ತನ್ನ ಮಗಳೊಂದಿಗೆ ಕೊಡಿಗೇಹಳ್ಳಿಯಲ್ಲಿ ವಾಸವಿದ್ದು ಜೀವನೋಪಾಯಕ್ಕಾಗಿ ಸಣ್ಣ ಹೋಟೆಲ್ ಒಂದನ್ನು ನಡೆಸುತ್ತಿದ್ದರು.

Dalit woman beaten publicly in Bengalurus Kodigehalli

ತಡರಾತ್ರಿ ಸಿದ್ದರಾಮಯ್ಯ-ಪರಮೇಶ್ವರ್ ಭೇಟಿ: ಅಸಮಾಧಾನ ಹೊರಕ್ಕೆ? ತಡರಾತ್ರಿ ಸಿದ್ದರಾಮಯ್ಯ-ಪರಮೇಶ್ವರ್ ಭೇಟಿ: ಅಸಮಾಧಾನ ಹೊರಕ್ಕೆ?

ಹೊಟೆಲ್‌ ನಡೆಸಲು ರಾಜಮ್ಮ ಕೈಸಾಲ ಪಡೆದಿದ್ದರು, ಆದರೆ ವ್ಯಾಪಾರ ಕೈಕೊಟ್ಟ ಕಾರಣ ಸಾಲ ತೀರಿಸಲಾಗಿರಲಿಲ್ಲ, ಸಾಲಗಾರರ ಕಾಟ ಹೆಚ್ಚಾಗಿದ್ದ ಕಾರಣ ಅವರು ಒಂದು ತಿಂಗಳು ಊರು ಬಿಟ್ಟಿದ್ದರು. ಇಂದು ಬೆಳಿಗ್ಗೆ ವಾಪಸ್ ಬಂದಾಗ ಸಾಲಗಾರರು ಹೀಗೆ ಕಂಬಕ್ಕೆ ಕಟ್ಟಿದ್ದಾರೆ.

ದಲಿತ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ, ಇಬ್ಬರ ಬಂಧನದಲಿತ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ, ಇಬ್ಬರ ಬಂಧನ

ಬೆಳಿಗ್ಗೆಯೇ ರಾಜಮ್ಮನನ್ನು ಕಂಬಕ್ಕೆ ಕಟ್ಟಲಾಗಿದೆ, ಅವಾಚ್ಯವಾಗಿ ಬೈದು, ಹಿಂಸೆ ನೀಡಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಘಟನೆ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

English summary
Some people tie a dalit woman to light poll and beaten her. Incident happen in Benglauru's Kodigehalli. Dalit woman took loan so the lenders beaten the woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X