• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀರು, ವಿದ್ಯುತ್, ರಸ್ತೆಯೇ ಈಗಲೂ ಜನರಿಗೆ ಚುನಾವಣಾ ವಿಷಯ

|

ಬೆಂಗಳೂರು, ಮಾರ್ಚ್ 5: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೀರು, ವಿದ್ಯುತ್, ರಸ್ತೆ ಮತ್ತು ಶಿಕ್ಷಣ ಈ ನಾಲ್ಕು ಸಂಗತಿಗಳೇ ಮತದಾರರಿಗೆ ಪ್ರಮುಖವಾಗಿ ಪರಿಣಮಿಸಲಿದೆ. ಸಾಮಾಜಿಕ ಅಧ್ಯಯನ ಸಂಸ್ಥೆ'ದಕ್ಷ' ಈ ಕುರಿತು ಸಮೀಕ್ಷೆ ನಡೆಸಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ ಬಡ ಮತದಾರರಿಗೆ ನೀರು ಮತ್ತು ಶಿಕ್ಷಣ ಅತಿ ಮಹತ್ವದ ಸಂಗತಿಗಳಾದರೆ ಸತತ ಬರಗಾಲ ಎರಡೂ ಪ್ರದೇಶದ ಜನರ ಚಿಂತೆಗೆ ಕಾರಣವಾಗಿದೆ.

ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ, ಮಹಿಳಾ ಸುರಕ್ಷತೆ, ಸಾರ್ವಜನಿಕ ಸಾರಿಗೆ, ಕುಡಿಯುವ ನೀರು, ಕೆರೆ ಪುನಶ್ಚೇತನ, ಮೂಲಸೌಕರ್ಯ ಮುಖ್ಯಬೇಡಿಕೆಗಳಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉತ್ಪನ್ನಗಳ ದರ, ಕೃಷಿಗಾಗಿ ನೆರವು, ನೀರಾವರಿ ಸೌಲಭ್ಯತ, ಗ್ರಾಮೀಣ ರಸ್ತೆಯಂತಹ ಕಾರ್ಯಕರಮಗಳಿಗೆ ಬೇಡಿಕೆ ಇದೆ.

ರಾಜ್ಯದ 224 ಕ್ಷೇತ್ರಗಳಲ್ಲಿ ತಲಾ 50 ಜನರಂತೆ ಒಟ್ಟು 13,300 ಜನರಿಂದ ಸ್ಯಾಂಪಲ್ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯು ಕೇವಲ ಭ್ರಷ್ಟಾಚಾರದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಒಂದೊಂದು ವಿಷಯವನ್ನಿಟ್ಟುಕೊಂಡು ಆರೋಪ ಪ್ರತ್ಯಾರೋಪ ಮಾಡುತ್ತಾ ಕಾಲಕಳೆಯುತ್ತಿದ್ದಾರೆ.

ಆದರೆ ನಿಜವಾಗಿಯೂ ಮತದಾರರಿಗೆ ಬೇಕಾಗಿರುವು ಏನು ಎನ್ನುವುದರ ಕುರಿತು ಯಾರೂ ಯೋಚನೆ ಮಾಡಿಲ್ಲ. ಸಮೀಕ್ಷೆಯು ಒಂದೊಂದು ಕ್ಷೇತ್ರದ ಮತದಾರರ ಬೇಡಿಕೆಗಳು, ಸಮಸ್ಯೆಗಳನ್ನು ಎತ್ತಿ ಹಿಡಿದು ಆಯಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವತ್ತ ಆಲೋಚಿಸುತ್ತಿದೆ ಎಂದು ದಕ್ಷದ ಅಧಿಕಾರಿ ತಿಳಿಸಿದ್ದಾರೆ.

ಹತ್ತರಲ್ಲಿ ಎಂಟು ಮಂದಿ ನೀರಿನ ಸರಬರಾಜು ತೊಂದರೆ ಇದೆ ಎಂದು ಹೇಳಿದ್ದಾರೆ. ವಿದ್ಯುತ್ ಮತ್ತು ಶಾಲೆಯ ಸಮಸ್ಯೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಒಟ್ಟು ರಾಜ್ಯಾದ್ಯಂತ ಒಳಚರಂಡಿ, ಆಹಾರ ಸರಬರಾಜು ಸಬ್ಸಿಡಿ, ಕೆಲಸ ಈ ಮೂರು ವಿಷಯಗಳ ಕುರಿತು ಗಂಭೀರ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Access to very foundational amenities potable water, power, better schools and roads is what matters to voters in the upcoming Karnataka elections, according to a survey by civil society research organization Daksh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X