ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರದಿಂದ ಬೆಳಗಾವಿಗೆ ಪ್ರತಿದಿನ ವಿಶೇಷ ರೈಲು

|
Google Oneindia Kannada News

ಬೆಂಗಳೂರು,ಆಗಸ್ಟ್‌ 10: ಪ್ರತಿದಿನ ಒಂದು ಬಾರಿ ಬೆಂಗಳೂರಿನಿಂದ ಬೆಳಗಾವಿ ಮಧ್ಯೆ ಸೂಪರ್‌ ಫಾಸ್ಟ್‌ ವಿಶೇಷ ರೈಲನ್ನು ಓಡಿಸಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.

ಕೃಷ್ಣಾ ಜನ್ಮಾಷ್ಟಾಮಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಚತುರ್ಥಿ ಅಂಗವಾಗಿ ಈ ಸೂಪರ್‌ ಫಾಸ್ಟ್‌ ವಿಶೇಷ ರೈಲುಗಳ ಸೇವೆ ಓದಗಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಆಗಸ್ಟ್‌ 12ರಂದು ರಾತ್ರಿ 9.30ಕ್ಕೆ ಯಶವಂತಪುರದಿಂದ ಹೊರಡಲಿರುವ ಈ ರೈಲು ಮಾರನೇ ದಿನ ಬೆಳಗಾವಿಗೆ 8.25ಕ್ಕೆ ತಲುಪಲಿದೆ. ಯಶವಂತಪುರ- ಬೆಳಗಾವಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌(07371/07372) ಮತ್ತೆ ಬೆಳಗಾವಿಯಿಂದ ಆಗಸ್ಟ್‌ 15 ರಂದು ರಾತ್ರಿ 9.20ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ 8.20ಕ್ಕೆ ಯಶವಂತಪುರಕ್ಕೆ ತಲುಪಲಿದೆ.

ಆಗಸ್ಟ್‌ 18ರಂದು ಯಶವಂತಪುರದಿಂದ ರಾತ್ರಿ 9.30ಕ್ಕೆ ಈ ವಿಶೇಷ ರೈಲು (07373/07374) ಹೊರಟು ಮಾರನೇ ದಿನ ಬೆಳಗ್ಗೆ 8.25ಕ್ಕೆ ಬೆಳಗಾವಿಗೆ ತಲುಪಲಿದೆ. ಮತ್ತೆ ಬೆಳಗಾವಿಯಿಂದ ಆಗಸ್ಟ್‌ 21ರ 9.20ಕ್ಕೆ ಹೊರಟು ಮಾರನೇ ದಿನ ಬೆಳಗ್ಗೆ 8.20ಕ್ಕೆ ಯಶವಂತಪುರ ತಲುಪಲಿದೆ.

 ವಾಸ್ಕೋಡಾ ಗಾಮಾದಿಂದ ಎಕ್ಸ್‌ಪ್ರೆಸ್‌ ರೈಲು ಚಾಲನೆ

ವಾಸ್ಕೋಡಾ ಗಾಮಾದಿಂದ ಎಕ್ಸ್‌ಪ್ರೆಸ್‌ ರೈಲು ಚಾಲನೆ

ತಮಿಳುನಾಡಿನಲ್ಲಿ ನಡೆಯಲಿರುವ ವೆಲಂಕಣಿ ಜಾತ್ರೆ ಅಂಗವಾಗಿ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಗೋವಾದ ವಾಸ್ಕೋಡಾ ಗಾಮಾದಿಂದ ಎಕ್ಸ್‌ಪ್ರೆಸ್‌ ವಿಶೇಷ ರೈಲು ನಿತ್ಯ ಒಂದು ಬಾರಿ ಸಂಚಾರ ಮಾಡಲಿದೆ. ಈ ರೈಲು ವಾಸ್ಕೋಡಾ ಗಾಮಾದಿಂದ ವಿಶೇಷ ರೈಲು ಆಗಸ್ಟ್‌ 27ರಂದು ಬೆಳಗ್ಗೆ 9ಕ್ಕೆ ಹೊರಡಲಿರುವ ಎಕ್ಸ್‌ಪ್ರೆಸ್‌ ರೈಲು ಗಾಡಿ ಸಂಖ್ಯೆ 07357/07358 ಮುಂದಿನ ದಿನ 12.25ಕ್ಕೆ ವೆಲಂಕಣಿ ತಲುಪಲಿದೆ. ಆ.28ರಂದು ರಾತ್ರಿ 11.45ಕ್ಕೆ ಅಲ್ಲಿಂದ ಹೊರಡಲಿರುವ ರೈಲು ಆ.30ರಂದು ಬೆಳಗ್ಗೆ 4ಕ್ಕೆ ವಾಸ್ಕೋಡಾ ಗಾಮಕ್ಕೆ ಬರಲಿದೆ.

 ಮಾರನೇ ದಿನ ರಾತ್ರಿ 7.10ಕ್ಕೆ ವೆಲಂಕಣಿಗೆ

ಮಾರನೇ ದಿನ ರಾತ್ರಿ 7.10ಕ್ಕೆ ವೆಲಂಕಣಿಗೆ

ಇನ್ನೂ ಸೆಪ್ಟೆಂಬರ್‌ 2ರಂದು ವಾಸ್ಕೋಡಾ ಗಾಮಾದಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿರುವ ಈ ಎಕ್ಸ್‌ಪ್ರೆಸ್‌ ರೈಲು (07359/03760) ಮಾರನೇ ದಿನ ರಾತ್ರಿ 7.10ಕ್ಕೆ ವೆಲಂಕಣಿಗೆ ತಲುಪಲಿದೆ. ಸೆ. 4ರಂದು ಬೆಳಗ್ಗೆ 9.15ಕ್ಕೆ ವೆಲಂಕಣಿಯಿಂದ ಹೊರಟು ಮಾರನೇ ದಿನ ಬೆಳಗ್ಗೆ 10ಕ್ಕೆ ವಾಸ್ಕೋಡಾ ಗಾಮಾಕ್ಕೆ ತಲುಪಲಿದೆ. ಹಾಗೆಯೇ ಸೆಪ್ಟೆಂಬರ್‌ 6ರಂದು ವಾಸ್ಕೋಡಾ ಗಾಮಾದಿಂದ ಸಂಜೆ 7.05ಕ್ಕೆ ಹೊರಡಲಿರುವ ವಿಶೇಷ ರೈಲು (07361/07362) ಮಾರನೇ ದಿನ ರಾತ್ರಿ 11.30ಕ್ಕೆ ವೆಲಂಕಣಿಗೆ ಬರಲಿದೆ. 8ರಂದು ಬೆಳಗ್ಗೆ 9.15ಕ್ಕೆ ವೆಲಂಕಣಿಯಿಂದ ಹೊರಟು ಮಾರನೇ ದಿನ ಬೆಳಗ್ಗೆ 10ಕ್ಕೆ ವಾಸ್ಕೋಡಾ ಗಾಮಾ ಸೇರಲಿದೆ.

 ಆಗಸ್ಟ್‌ 14,21 ಹಾಗೂ 28ರಂದು ರೈಲು ಸೇವೆ

ಆಗಸ್ಟ್‌ 14,21 ಹಾಗೂ 28ರಂದು ರೈಲು ಸೇವೆ

ಅಲ್ಲದೆ ರೈಲ್ವೆ ಇಲಾಖೆ ಬೀದರ್‌- ಹುಬ್ಬಳ್ಳಿ ಮಧ್ಯೆ ರೈಲು ಸೇವೆ ಪ್ರಾರಂಭಿಸುವ ಚಿಂತನೆ ನಡೆಸಿದೆ. ಆಗಸ್ಟ್ 13ರಿಂದ ಮೂರು ದಿನ ಎರಡೂ ನಗರಗಳ ನಡುವೆ ಪ್ರಯೋಗಿಕವಾಗಿ ರೈಲು ಸಂಚರಿಸಲಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ಆಗಸ್ಟ್‌ 13, 20 ಮತ್ತು 28ರಂದು ನಾಂದೇಡ್‌ನಿಂದ ಹುಬ್ಬಳ್ಳಿ ಮಾರ್ಗವಾಗಿ ಬೀದರ್‌ ಹಾಗೂ ಆಗಸ್ಟ್‌ 14,21 ಹಾಗೂ 28ರಂದು ಹುಬ್ಬಳ್ಳಿಯಿಂದ ನಾಂದೇಡ್‌ ಮಾರ್ಗವಾಗಿ ಬೀದರ್‌ ಪ್ರಾಯೋಗಿಕವಾಗಿ ರೈಲು ಸಂಚರಿಸಲಿದೆ.

 ಮುರುದಿನ ಬೆಳಗ್ಗೆ 10ಕ್ಕೆ ಹುಬ್ಬಳ್ಳಿಗೆ

ಮುರುದಿನ ಬೆಳಗ್ಗೆ 10ಕ್ಕೆ ಹುಬ್ಬಳ್ಳಿಗೆ

ಇನ್ನೂ ಆಗಸ್ಟ್‌ 13, 20 ಮತ್ತು 27ರಂದು ಮಧ್ಯಾಹ್ನ 2.10ಕ್ಕೆ ರೈಲು ಗಾಡಿ 07635 ನಾಂದೇಡ್‌ನಿಂದ ಹೊರಡು ಪೂರ್ಣ, ಪರಳಿ, ಉದಗಿರ್‌ ಮೂಲಕ ಸಂಜೆ 725ಕ್ಕೆ ಬಾಲ್ಕಿ ಮತ್ತು ರಾತ್ರಿ 8ಕ್ಕೆ ಬೀದರ್‌ಗೆ ತಲುಪಲಿದೆ. ಜಹೀರಾಬಾದ್‌, ಸೇಡಂ, ಚಿತ್ತಾಪುರ, ತಾಂಡೂರ, ಗುಂತಕಲ್‌, ಬಳ್ಳಾರಿ ಹೊಸಪೇಟೆ, ಕೊಪ್ಪಳ, ಗದಗ ಮಾರ್ಗವಾಗಿ ಮುರುದಿನ ಬೆಳಗ್ಗೆ 10ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಆಗಸ್ಟ್‌ 14,21 ಮತ್ತು 28ರಂದು ಬೆಳಗ್ಗೆ 11ಕ್ಕೆ ರೈಲು ಸಂಖ್ಯೆ 07636 ಹುಬ್ಬಳ್ಳಿಯಿಂದ ಹೊರಟು ಬಂದ ಮಾರ್ಗವಾಗಿ ರಾತ್ರಿ 10.55ಕ್ಕೆ ಬೀದರ್‌ ಮತ್ತು 11.30ಕ್ಕೆ ಭಾಲ್ಕಿಗೆ ತಲುಪಲಿದೆ. ಮರುದಿನ ಬೆಳಗ್ಗೆ 6.50ಕ್ಕೆ ನಾಂದೇಡ್‌ ತಲುಪಲಿದೆ ಎಂದು ಅವರು ಹೇಳಿದರು.

English summary
The South Western Railway Department has decided to run a super fast special train between Bangalore and Belgaum once a day. South West Railway has decided to run these super fast special trains on the occasion of Krishna Janmashtami, Independence Day and Ganesh Chaturthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X