ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಹೊಸ ಕೋವಿಡ್ ಪ್ರಕರಣ 1000ಕ್ಕೆ ಇಳಿಕೆ

|
Google Oneindia Kannada News

ಬೆಂಗಳೂರು, ಜೂನ್ 15; ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಶುಭ ಸುದ್ದಿ. ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 1000ಕ್ಕೆ ಇಳಿಕೆಯಾಗಿದೆ. ಸೋಮವಾರದಿಂದಲೇ ಬೆಂಗಳೂರಿನಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

ಮಂಗಳವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಎರಡು ತಿಂಗಳಿನಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಮುಖವಾಗಿದೆ.

ಕರ್ನಾಟಕ; ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಇಳಿಕೆ ಕರ್ನಾಟಕ; ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಇಳಿಕೆ

ರಾಜ್ಯದಲ್ಲಿಯೂ ಸಹ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಪಾಸಿಟಿವಿಟಿ ದರ ಶೇ 3.8 ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. 5041 ಹೊಸ ಪ್ರಕರಣ ರಾಜ್ಯದಲ್ಲಿ ದಾಖಲಾಗಿದೆ.

ಡಿಸ್ಕೌಂಟ್ ಸೇಲ್, ಉತ್ಸವ ಬೇಡ; ಅಂಗಡಿಗಳಿಗೆ ಬಿಬಿಎಂಪಿ ಸೂಚನೆ ಡಿಸ್ಕೌಂಟ್ ಸೇಲ್, ಉತ್ಸವ ಬೇಡ; ಅಂಗಡಿಗಳಿಗೆ ಬಿಬಿಎಂಪಿ ಸೂಚನೆ

Bengaluru Daily Covid 19 New Cases fall To 1000

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 1.32 ಲಕ್ಷ ಮಾದರಿಗಳ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯೂ ಇಳಿಮುಖವಾಗಿದ್ದು, 24 ಗಂಟೆಯಲ್ಲಿ 115 ಜನರು ಮೃತಪಟ್ಟಿದ್ದಾರೆ.

ಸೋಮವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 1470 ಹೊಸ ಪ್ರಕರಣ ದಾಖಲಾಗಿತ್ತು. ನಗರದಲ್ಲಿ 12 ಜನರು ಮೃತಪಟ್ಟಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ 85044 ಆಗಿತ್ತು.

Stories of strength; ಕೋವಿಡ್ ಗೆದ್ದ ಯುವಕನಿಂದ ಸೋಂಕಿತರ ಸೇವೆStories of strength; ಕೋವಿಡ್ ಗೆದ್ದ ಯುವಕನಿಂದ ಸೋಂಕಿತರ ಸೇವೆ

ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಜೊತೆಗೆ ಸಾವಿನ ಸಂಖ್ಯೆಯೂ ಇಳಿಕೆಯಾಗುತ್ತಿದೆ. ಸೋಮವಾರದ ಬುಲೆಟಿನ್ ಪ್ರಕಾರ ರಾಜ್ಯದಲ್ಲಿನ ಮರಣ ಪ್ರಮಾಣ ಶೇ 1.75 ರಷ್ಟಿತ್ತು.

ಕರ್ನಾಟಕದಲ್ಲಿ ಕೋವಿಡ್ ಸೋಂಕು ಹರಡುವಿಕೆ ತಡೆಯಲು ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಜೂನ್ 14ರಂದು 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿತ್ತು.

ಸೋಮವಾರದ ವರದಿಯಂತೆ ರಾಜ್ಯದಲ್ಲಿ ಮೈಸೂರು 11103. ಬೆಂಗಳೂರಿನಲ್ಲಿ 85044. ದಕ್ಷಿಣ ಕನ್ನಡ 6954. ದಾವಣಗೆರೆ 4268. ಹಾಸನ 7199. ತುಮಕೂರು 6104. ಮಂಡ್ಯ 3652. ಉತ್ತರ ಕನ್ನಡ 2442. ಉಡುಪಿ 2977 ಸಕ್ರಿಯ ಪ್ರಕರಣಗಳಿದ್ದವು.

ಸೋಮವಾರ ರಾಜ್ಯದಲ್ಲಿ 6835 ಹೊಸ ಪ್ರಕರಣ ದಾಖಲಾಗಿತ್ತು. 15409 ಜನರು ಗುಣಮುಖಗೊಂಡಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ 172141 ಆಗಿತ್ತು.

ಬೆಂಗಳೂರು ನಗರದಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದ್ದು ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 2 ಗಂಟೆ ತನಕ ಅವಕಾಶ ನೀಡಲಾಗಿದೆ. ಮುಂಜಾನೆ ವಾಕಿಂಗ್ ಮಾಡಲು ಪಾರ್ಕ್‌ಗಳನ್ನು ತೆರೆಯಲಾಗಿದೆ.

ಲಾಕ್‌ಡೌನ್ ನಿಯಮ ಸಡಿಲಿಕೆಗೊಂಡರೂ ಬೆಂಗಳೂರಿನಲ್ಲಿ ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರ ಮತ್ತು ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿಲ್ಲ. ಜೂನ್ 21ರ ಬಳಿಕ ಬೆಂಗಳೂರು ಸಂಪೂರ್ಣ ಅನ್‌ಲಾಕ್ ಆಗುವ ನಿರೀಕ್ಷೆ ಇದೆ.

Recommended Video

ನಮ್ ಹೊಟ್ಟೆ ತುಂಬಿಲ್ಲ ಅಂದ್ರು ಗಾಡಿ ಹೊಟ್ಟೆ ತುಂಬಿಸಬೇಕು | Oneindia Kannada

English summary
Health minister of Karnataka Dr. K. Sudhakar tweeted that new Covid-19 cases in Bengaluru fell to 1000 after two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X