ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾದಚಾರಿಗಳನ್ನು ದೋಚುತ್ತಿದ್ದವರು ಸೆರೆ, ಥ್ಯಾಂಕ್ಸ್ ಎಂದ ಡಿ ರೂಪಾ

|
Google Oneindia Kannada News

ಬೆಂಗಳೂರು, ಅ. 24: ಪಾದಚಾರಿಗಳನ್ನು ದೋಚುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಕ್ಕೆ ಬೆಂಗಳೂರು ಪೊಲೀಸ್, ಚಿಕ್ಕಪೇಟೆ ಪೊಲೀಸ್, ಪಶ್ಚಿಮ ವಲಯ ಡಿಸಿಪಿ, ನಗರ ಪೊಲೀಸ್ ಆಯುಕ್ತರಿಗೆ ಕರ್ನಾಟಕದ ಗೃಹ ಕಾರ್ಯದರ್ಶಿ ಐಜಿಪಿ ಡಿ ರೂಪಾ ಅವರು ಧನ್ಯವಾದ ಅರ್ಪಿಸಿದ್ದಾರೆ.

Recommended Video

Chikkapete ಗೆ Shopping ಹೋಗಿದಿರ ಹಾಗಾದ್ರೆ ಈ Video ನೋಡಿ | Oneindia Kannada

ಇತ್ತೀಚೆಗೆ ಚಿಕ್ಕಪೇಟೆ ಬಳಿ ಹಾಡಹಗಲೇ ಪಾದಚಾರಿಗಳಿಗೆ ಚಾಕು ತೋರಿಸಿ ಬೆದರಿಸಿ ದೋಚುತ್ತಿದ್ದ ದೃಶ್ಯದ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಇದಾದ ಮುರ್ನಾಲ್ಕು ದಿನಗಳಲ್ಲೇ ಸಿಸಿಟಿವಿ ದೃಶ್ಯದ ಆಧಾರ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ತ್ವರಿತವಾಗಿ ಬಂಧಿಸಲಾಗಿದೆ.

D Roopa Thanks Chikpet Police for nabbing two youths who robbed pedestrians

ವಿಡಿಯೋ: ಮಚ್ಚು ತೋರಿಸಿ ಜನರನ್ನು ಲೂಟಿ ಮಾಡಿದ ಪುಡಿ ರೌಡಿವಿಡಿಯೋ: ಮಚ್ಚು ತೋರಿಸಿ ಜನರನ್ನು ಲೂಟಿ ಮಾಡಿದ ಪುಡಿ ರೌಡಿ

ಚಿಕ್ಕಪೇಟೆ ಮೆಟ್ರೋ ರೈಲು ನಿಲ್ದಾಣದ ಬಳಿ ವ್ಯಕ್ತಿಯೊಬ್ಬರನ್ನು ಅಟ್ಟಗಟ್ಟುವ ಇಬ್ಬರು ಚಾಕು ತೋರಿಸಿ ಹಣ ದೋಚುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಕ್ರಮ ಜರುಗಿಸುವಂತೆ ರೂಪಾ ಅವರು ಸಂಬಂಧಪಟ್ಟ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಡಿಸಿಪಿ ಪಶ್ಚಿಮ ವಲಯ ಡಾ ಸಂಜೀವ್ ಪಾಟೀಲ್ ಅವರ ಸೂಚನೆಯಂತೆ ಚಿಕ್ಕಪೇಟೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಇಬ್ಬರು ಒಂದೇ ರೀತಿ ಹುಡ್ ಮಾದರಿ ಡ್ರೆಸ್ ಧರಿಸಿ ಚಾಕು ಹಿಡಿದು ಬೆದರಿಸುವ ದೃಶ್ಯವನ್ನು ಅಲ್ಲಿ ಪಾರ್ಕ್ ಮಾಡಿದ್ದ ವಾಹನದಲ್ಲಿದವರು ವಿಡಿಯೋ ಮಾಡಿದ್ದರು.

ಬಂಧಿತನನ್ನು ಆಜಾದ್ ನಗರದ ನಿವಾಸಿ ಜಾನಿ ಎಂದು ಗುರುತಿಸಲಾಗಿದೆ. 22 ವರ್ಷ ವಯಸ್ಸಿನ ಜಾನಿ ಇತ್ತೀಚೆಗೆ ಮಾರ್ಚ್ ತಿಂಗಳಿನಲ್ಲಿ ಇದೇ ರೀತಿ ಕೃತ್ಯ ಎಸಗಿ ಬಂಧಿತನಾಗಿದ್ದ, ಜೈಲಿನಿಂದ ಬಿಡುಗಡೆಯಾದ ಬಳಿಕ ಕೂಡಾ ತನ್ನ ಹಳೆ ಚಾಳಿ ಮುಂದುವರೆಸಿದ್ದ ಎಂದು ತಿಳಿದು ಬಂದಿದೆ.

English summary
Home secretary IGP D Roopa thanked Bengaluru police for nabbing two youths who robbed pedestrians. D Roopa recently posted a tweet which had CCTV visuals of robbery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X