ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಟ್‍ಕೇರ್‌ನಿಂದ ಸ್ಟೆಪ್-ಡೌನ್ ಕೋವಿಡ್ ಆಸ್ಪತ್ರೆಗೆ ಚಾಲನೆ

|
Google Oneindia Kannada News

ಬೆಂಗಳೂರು ಮೇ 16: ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಬೆಡ್‍ಗಳಿಗೆ ದಿನೇದಿನೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವಾ ಟೆಕ್ ಕಂಪನಿ ಕ್ಲೌಡ್ ಫಿಸಿಷಿಯನ್ ಸಹಭಾಗಿತ್ವದಲ್ಲಿ ಸೈಟ್‍ಕೇರ್ ಆಸ್ಪತ್ರೆಯು ಬೆಂಗಳೂರಿನ ಮೊಟ್ಟ ಮೊದಲ ಸ್ಟೆಪ್-ಡೌನ್ ಆಸ್ಪತ್ರೆಯನ್ನು ಆರಂಭಿಸಿದೆ. ಕೆನಡಿಯನ್ ಇಂಟರ್‍ನ್ಯಾಷನ್ ಸ್ಕೂಲ್‍ನ ಹಾಸ್ಟೆಲ್‍ನಲ್ಲಿ 120 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಸಿದ್ಧಪಡಿಸಲಾಗಿದೆ. ಈ ಸ್ಟೆಪ್-ಡೌನ್ ಆಸ್ಪತ್ರೆಯನ್ನು ರೂಪಿಸಲು ಬೆಂಗಳೂರು ಮೂಲದ ಲಾಭೇತರ ಸಂಸ್ಥೆ (ಎನ್‍ಜಿಒ) ಹ್ಯುಮಾನಿಸ್ಟ್ ಸೆಂಟರ್ ಫಾರ್ ಮೆಡಿಸಿನ್ ಹಾಗೂ ಎಂಟ್ರರ್ ಪ್ರೈಸರ್ಸ್ ಆರ್ಗನೈಸೇಷನ್‍ನ ಬೆಂಗಳೂರು ಚಾಪ್ಟರ್ ದೇಣಿಗೆ ಸಂಗ್ರಹಿಸಿ ನೆರವು ನೀಡಿದೆ.

ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹಾಗೂ ಬೆಂಗಳೂರು ಪೊಲೀಸ್ ಇಲಾಖೆಯ ಈಶಾನ್ಯ ವಿಭಾಗದ ಜಂಟಿ ಆಯುಕ್ತ ಸಿಕೆ ಬಾಬಾ ಅವರ ಉಪಸ್ಥಿತಿಯಲ್ಲಿ ಆಸ್ಪತ್ರೆಯನ್ನು ಉದ್ಘಾಟಿಸಲಾಯಿತು.

ಭಾರತದಲ್ಲಿ ಕೋವಿಡ್-19 ಎರಡನೆ ಅಲೆಯು ಅಬ್ಬರಿಸುತ್ತಿದ್ದು, ಲಭ್ಯ ಇರುವ ವೈದ್ಯಕೀಯ ಸಂಪನ್ಮೂಲಗಳು ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುವ ಅಗತ್ಯ ಎದುರಾಗಿದೆ. ಅಂತೆಯೇ ಸೈಟ್‍ಕೇರ್ ಆರಂಭ ಮಾಡಿರುವ ಸ್ಟೆಪ್-ಡೌನ್ ಆಸ್ಪತ್ರೆಯಲ್ಲಿ ಮಧ್ಯಮ ಪ್ರಮಾಣದಲ್ಲಿ ಕೊರೊನಾ ಸೋಂಕು ತಗುಲಿದ ರೋಗಿಗಳಿಗೆ ಆಕ್ಸಿಜನ್ ನೆರವಿನೊಂದಿಗೆ ಪರ್ಯಾಯ ಆಸ್ಪತ್ರೆಯ ಮಾದರಿಯಲ್ಲಿ ಚಿಕಿತ್ಸೆ ದೊರೆಯಲಿದೆ.

Cytecare launches Step-down hospital moderately ill Covid patients

ಪ್ರತಿಯೊಂದು ಬೆಡ್‍ನಲ್ಲಿ ಆಕ್ಸಿಜನ್ ಕಾನ್ಸೆನ್‍ಟ್ರೇಟರ್, ನರ್ಸಿಂಗ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಅಳವಡಿಸಲಾಗಿದೆ. ವೈದ್ಯರು ಮತ್ತು ನರ್ಸ್‍ಗಳು ದಿನಕ್ಕೆ ನಾಲ್ಕರಿಂದ ಆರು ಬಾರಿ ರೋಗಿಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಇಲ್ಲಿ ಉಚಿತ ಚಿಕಿತ್ಸೆ ದೊರೆಯಲಿದ್ದು, ಉಳಿದವರಿಗೆ ಸರಕಾರ ನಿಗದಿಪಡಿಸಿರುವ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗಲಿದೆ. ಈ ಸೆಂಟರ್‍ನಲ್ಲಿ ಕೇಂದ್ರೀಕೃತ ವೈದ್ಯಕೀಯ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಏಕಗವಾಕ್ಷಿ ಮಾದರಿಯಲ್ಲಿ ಬೆಡ್‍ಗಳ ವಿತರಣೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದು.

ಸೈಟ್‍ಕೇರ್ ಆಸ್ಪತ್ರೆಯ ಸಿಇಒ ಹಾಗೂ ಸಹ ಸಂಸ್ಥಾಪಕ ಸುರೇಶ್ ರಾಮು ಅವರು ಹೊಸ ಯೋಜನೆ ಕುರಿತು ಮಾತನಾಡಿ, ''ನಮ್ಮ ಕ್ಯಾನ್ಸರ್ ಆಸ್ಪತ್ರೆಯಲಿ ಕೋವಿಡ್-19 ರೋಗಿಗಳಿಗೆ ಬೆಡ್‍ಗಳನ್ನು ಒದಗಿಸಲು ಅಸಾಧ್ಯವಾಗಿರುವ ಕಾರಣ ಸ್ಟೆಪ್-ಡೌನ್ ಆಸ್ಪತ್ರೆ ಮೂಲಕ ನಮ್ಮ ಸಮುದಾಯಕ್ಕೆ ನೆರವು ನೀಡಲು ಮುಂದಾಗಿದ್ದೇವೆ. ಸುಧಾರಿತ ಪ್ರಕ್ರಿಯೆ ಹಾಗೂ ತಂತ್ರಜ್ಞಾನದ ನೆರವಿನೊಂದಿಗೆ ದಾಖಲೆಯ ಸಮಯದೊಳಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಕ್ಲೀನಿಕಲ್ ಕಮಾಂಡರ್ ರೂಮ್‍ಗೆ ವೈದ್ಯಕೀಯ ಮತ್ತು ವೈದ್ಯಕೀಯೇತರ ಮಾಹಿತಿಗಳು ರವಾನೆಯಾಗಲಿದ್ದು, ಹಿರಿಯ ಇಂಟೆಸ್ಟಿವಿಸ್ಟ್ ಹಾಗೂ ನರ್ಸ್‍ಗಳು ನಿರ್ವಹಣೆ ಮಾಡಲಿದ್ದಾರೆ. ಇದು ರೋಗಿಗೆ ಅಗತ್ಯ ಸಮಯದಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ತಂಡಕ್ಕೆ ನೆರವಾಗಲಿದೆ. ದೇಶದಲ್ಲಿ ಈ ವ್ಯವಸ್ಥೆಯು ಮಾದರಿಯಾಗಲಿ ಎಂಬ ಬಯಕೆಯೊಂದಿಗೆ ನಮ್ಮೆಲ್ಲ ತಿಳಿವಳಿಕೆ, ಡೇಟಾ ವ್ಯವಸ್ಥೆ ಹಾಗೂ ಆರೋಗ್ಯ ಸೇವೆ ಪ್ರಕ್ರಿಯೆಯನ್ನು ನಾವಿಲ್ಲಿ ಹಂಚಿಕೊಳ್ಳಲಿದ್ದೇವೆ'' ಎಂದು ಹೇಳಿದರು.

Cytecare launches Step-down hospital moderately ill Covid patients

Recommended Video

ಪಾಕಿಸ್ತಾನ ಲೀಗನ್ನು (PSL) IPL ಗೆ ಹೋಲಿಸಬೇಡಿ | Oneindia Kannada

ಈ ಕೇಂದ್ರದ ಸ್ಥಾಪನೆಗಾಗಿ ಲಾಭೇತರ ಸಂಸ್ಥೆಯಾಗಿರುವ ಹ್ಯುಮಾನಿಸ್ಟ್ ಸೆಂಟರ್ ಫಾರ್ ಮೆಡಿಸಿನ್ 6 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ಸಂಗ್ರಹಿಸಿದ್ದರೆ, ಉದ್ಯಮಿಗಳ ಸಂಸ್ಥೆಯ ಬೆಂಗಳೂರು ಚಾಪ್ಟರ್ 130 ಆಕ್ಸಿಜನ್ ಕಾನ್ಸೆನ್‍ಟ್ರೇಟರ್ ಹಾಗೂ ಸ್ಟೆಪ್-ಡೌನ್ ಕೇಂದ್ರಕ್ಕೆ ಅಗತ್ಯವಿರುವ ಇನ್ನಿತರ ಅಗತ್ಯ ಆಕ್ಸೆಸರಿಗಳ ಖರೀದಿಗೆ ನಿಧಿ ಸಂಗ್ರಹಿಸಿದೆ.

English summary
Cytecare launches first-of-its-kind STEP-DOWN HOSPITAL with centralized clinical command centre for moderately ill Covid patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X