ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಡಿಗೆ ಮನೆ ಮಾಲೀಕರನ್ನು ಟಾರ್ಗೆಟ್ ಮಾಡ್ತಿರುವ ಸೈಬರ್ ಕಳ್ಳರು

|
Google Oneindia Kannada News

ಬೆಂಗಳೂರು, ಮೇ. 17: ನಿಮ್ಮದು ಬಾಡಿಗೆ ಮನೆಯಿದೆ. ಖಾಲಿಯಾದ ಬಾಡಿಗೆ ಮನೆ ಬಗ್ಗೆ ಆನ್‌ಲೈನ್‌ನಲ್ಲಿ ಜಾಹೀರಾತು ಹಾಕಿದ್ದೀರಾ ? ಹಾಗಿದ್ದರೆ ನಿಮಗೆ ಬಾಡಿಗೆ ಹಣ ಕೊಡ್ತೀವಿ ಈ ಲಿಂಕ್ ಬರಬಹುದು. ಈ ಲಿಂಕ್ ಲಿಂಕ್ ಒತ್ತಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮಂಗ ಮಾಯವಾಗುತ್ತದೆ ! ಆನ್‌ಲೈನ್ ಜಾಹೀರಾತು ನೋಡಿ ಕರೆ ಮಾಡುವರಿಗೆ ಬಾಡಿಗೆ ನೀಡುವ ಮುನ್ನ ಈ ಸ್ಟೋರಿ ಓದಿ.

ಕೊರೊನಾ ಸೋಂಕು ಬೆಂಗಳೂರಿನಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಬಹುತೇಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಕೂಲಿ ಕಾರ್ಮಿಕರು, ಐಟಿ ಉದ್ಯೋಗಿಗಳು ತೊರೆದಿರುವ ಕಾರಣ ಇದೀಗ ಬಾಡಿಗೆದಾರರನ್ನು ಹುಡುಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮನೆ ಬಾಡಿಗೆ ಆದಾಯದ ಮೂಲ ಮಾಡಿಕೊಂಡಿದ್ದವರು ಇದೀಗ ವಿಲ ವಿಲ ಒದ್ದಾಡುವಂತಾಗಿದೆ. ಬಾಡಿಗೆ ನಂಬಿಕೊಂಡು ಸಾಲ ಮಾಡಿ ಮನೆ ಕಟ್ಟಿದವರು ಇದೀಗ ಬಾಡಿಗೆದಾರರನ್ನು ಹುಡುಕಲು ಆನ್‌ಲೈನ್ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಜಾಹೀರಾತು ಹಾಕಿ ಬಾಡಿಗೆದಾರರನ್ನು ಹುಡುಕುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು ಇದೀಗ ಮನೆ ಬಾಡಿಗೆದಾರರ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಇಂಥದ್ದೇ ಪ್ರಕರಣಗಳು ಇದೀಗ ಬೆಂಗಳೂರಿನಲ್ಲಿ ವರದಿಯಾಗುತ್ತಿವೆ.

Bengaluru: Cyber criminals targeting Rented house owners

ಎಚ್‌ಎಎಲ್ ನ ಬಸವೇಶ್ವರನಗರದಲ್ಲಿರುವ ಮಹೇಶ್‌ ಅವರ ಬಾಡಿಗೆ ಮನೆಗಳು ಖಾಲಿಯಾಗಿದ್ದವು. ಬಾಡಿಗೆದಾರರಿಗಾಗಿ ಸಾಮಾಜಿಕ ಜಾಲ ತಾಣವೊಂದರಲ್ಲಿ ಮನೆ ಖಾಲಿಯಿರುವುದಾಗಿ ಜಾಹೀರಾತು ಹಾಕಿದ್ದರು. ಜಾಹೀರಾತು ನೋಡಿದ್ದ ವ್ಯಕ್ತಿಯೊಬ್ಬ ಮಹೇಶ್‌ಗೆ ಕರೆ ಮಾಡಿ, ಸಚಿನ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದ. ಮನೆಯ ಪೋಟೋ ಮತ್ತು ವಿಡಿಯೋ ಕಳಿಸುವಂತೆ ಕೇಳಿದ್ದ. ಮನೆ ಪೋಟೋ ಕಳಿಸಿದ್ದ ಮಹೇಶ್ 30 ಸಾವಿರ ಅಡ್ವಾನ್ಸ್ ನೀಡುವಂತೆ ಕೇಳಿದ್ದರು. ಮನೆ ಮಾಲೀಕ ಪೋನ್ ಪೇ ನಂಬರ್ ಪಡೆದಿದ್ದ ಸೈಬರ್ ವಂಚಕ ಐದು ರೂಪಾಯಿಯನ್ನು ಪೋನ್ ಪೇ ಮೂಲಕ ರವಾನಿಸಿದ್ದ. ಆನಂತರ ತಾಂತ್ರಿಕ ತೊಂದರೆ ಎದುರಾಗಿದೆ. ನಾನು ಕಳಿಸುವ ಪೇಟಿಎಂ ಲಿಂಕ್ ಒತ್ತಿ, ನಿಮ್ಮ ಬ್ಯಾಂಕ್ ಖಾತೆಗೆ 30 ಸಾವಿರ ಮುಂಗಡ ಹಣ ಕಳಿಸುತ್ತೇನೆ ಎಂದು ಹೇಳಿ ಲಿಂಕ್‌ನ್ನು ಕಳಿಸಿದ್ದ.

Bengaluru: Cyber criminals targeting Rented house owners

Recommended Video

3ನೇ ಮಹಾಯುದ್ಧ ತಡೆಯಲು ವಿಶ್ವಸಂಸ್ಥೆ ಎಂಟ್ರಿ, ಇಸ್ರೇಲ್ ನಿರ್ಧಾರವೇನು? | Oneindia Kannada

ಮಹೇಶ್ ಖುಷಿಯಿಂದಲೇ ಲಿಂಕ್ ಒತ್ತಿದ್ದಾರೆ. ಲಿಂಕ್ ಒತ್ತುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ 50 ಸಾವಿರ ಹಣ ವಂಚಕನ ಖಾತೆಗೆ ವರ್ಗಾವಣೆಯಾಗಿದೆ. ಬಳಿಕ ಸೈಬರ್ ವಂಚಕ ಪೋನ್ ಸ್ವಿಚ್‌ ಆಫ್ ಮಾಡಿಕೊಂಡಿದ್ದು, ಮನನೊಂದ ಮಹೇಶ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೊರೊನಾ ಸೋಂಕು ಹೆಚ್ಚಳದಿಂದ ಬೆಂಗಳೂರಿನಲ್ಲಿ ಮನೆ ಖಾಲಿ ಕೊಂಡು ಅನೇಕರು ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಬಾಡಿಗೆ ಮನೆ ಮಾಲೀಕರು ಬಾಡಿಗೆದಾರರಿಗಾಗಿ ಆನ್‌ಲೈನ್‌ನಲ್ಲಿ ಜಾಹೀರಾತು ಹಾಕುತ್ತಿದ್ದಾರೆ. ಇಂಥ ಬಾಡಿಗೆ ಮನೆ ಮಾಲೀಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುವ ಸೈಬರ್ ಕಳ್ಳರು ಸಕ್ರಿಯವಾಗಿದ್ದಾರೆ. ಮುಂಗಡ ಹಣಕ್ಕೆಂದು ಕಳಿಸುವ ಲಿಂಕ್ ಒತ್ತಿ ಮೋಸಹೋಗಬಾರದು. ನಾನಾ ರೀತಿಯಲ್ಲಿ ಲಿಂಕ್ ಕಳಿಸುತ್ತಾರೆ. ಅವನ್ನು ಯಾವ ಕಾರಣಕ್ಕೂ ಒತ್ತಬಾರದು ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.

English summary
Cyber criminals cheated Building owner by sending fraudulent link through mobile phone know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X