ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಜಸ್ಟೀಸ್ ಸಂತೋಷ್ ಹೆಗ್ಡೆಗೆ ವಂಚನೆಗೆ ಯತ್ನ

|
Google Oneindia Kannada News

ಬೆಂಗಳೂರು, ಜೂ. 18: ನಿವೃತ್ತ ಲೋಕಾಯುಕ್ತ ನ್ಯಾ. ಎನ್‌. ಸಂತೋಷ್ ಹೆಗ್ಡೆ ಅವರಿಗೆ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ವಂಚಿಸಲು ಯತ್ನಿಸಲಾಗಿದೆ. ವಂಚನೆ ಮಾಡಲು ಯತ್ನಿಸಿದ ಸೈಬರ್ ವಂಚಕರ ವಿರುದ್ಧ ನಿವೃತ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಎಂಬಸಿ ಅಪಾರ್ಟಟ್‌ಮೆಂಟ್‌ನಲ್ಲಿ ವಾಸವಾಗಿರುವ ಎನ್. ಸಂತೋಷ್ ಹೆಗ್ಡೆ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಜೂ. 14 ರಂದು ಕರೆ ಮಾಡಿರುವ ಅಪರಿಚಿತರು, ನಿಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್ ಮುಕ್ತಾಯವಾಗಿದ್ದು, ಬರುವ ಒಟಿಪಿಯನ್ನು ಶೇರ್ ಮಾಡುವಂತೆ ಮನವಿ ಮಾಡಿದ್ದರು. ಕರೆ ಸ್ವೀಕರಿಸಿದ ಕೂಡಲೇ ವಂಚಕರು ಎಂದು ಅನುಮಾನಗೊಂಡಿದ್ದ ನಿವೃತ್ತ ಲೋಕಾಯುಕ್ತರು ಕರೆ ಕಡಿತ ಮಾಡಿರಲಿಲ್ಲ. ಆನಂತರ ಎರಡು ಸಲ ಮೊಬೈಲ್ ನಂಬರ್‌ಗೆ ಒಟಿಪಿ ಬಂದಿದ್ದು, 99******58 ನಿಂದ ಕರೆ ಮಾಡಿದ್ದ ಮಹಿಳೆ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Cyber criminals attempt to cheat Justice N. Santosh hegde in the name of credit card reward points

Recommended Video

ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ಸೃಷ್ಟಿಯಾಗಿದೆ ಸುಂದರ ಜಲಪಾತಗಳು | Oneindia Kannada

ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜನರು ಒಂದೊಂದು ರೂಪಾಯಿಗೂ ಪರದಾಡುತ್ತಿದ್ದಾರೆ. ಕೊರೊನಾ ಸಮಯವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಇದೀಗ ನಾನಾ ಹಾದಿಯಲ್ಲಿ ವಂಚನೆ ಮಾಡಲು ಯತ್ನಿಸುತ್ತಿದ್ದಾರೆ. ಅಪರಾಧ ಕೃತ್ಯಗಳು ಕಡಿಮೆಯಾದರೂ, ಸೈಬರ್ ಅಪರಾಧ ಕೃತ್ಯಗಳು ಜಾಸ್ತಿಯಾಗುತ್ತಿವೆ. ಖಾಲಿಯಿರುವ ಮನೆ ಬಾಡಿಗೆ ಪಡೆಯುವ ನೆಪದಲ್ಲಿ ವಂಚನೆ ಮಾಡಲಾಗಿದೆ. ಇದರ ಜತೆಗೆ ರೆಮ್ಡಿಸಿವಿಆರ್ ಇಂಜೆಕ್ಷನ್ ಕೊಡುವ ಸೋಗಿನಲ್ಲಿ ಸೈಬರ್ ವಂಚಕರು ಮೋಸ ಮಾಡಿದ್ದಾರೆ. ಮಾತ್ರವಲ್ಲ ಕೊರೊನಾ ಸೋಂಕಿತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿದೆ ಎಂಬ ಹೆಸರಿನಲ್ಲಿ ಮುಗ್ಧರಿಗೆ ಕರೆ ಹಣ ವಂಚನೆ ಮಾಡಿರುವ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ.

English summary
Cyber thieves attempt to defraud credit card, justice N. Santosh Hegde has lodged a complaint with the cyber police know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X