ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್‌ನಿಂದ ಮಾವು ಖರೀದಿಸಲು ವೆಬ್‌ಸೈಟ್, ಮೊಬೈಲ್ ನೆಟ್ಟಗಿಲ್ಲ! ಗ್ರಾಹಕರ ಬೇಸರ

|
Google Oneindia Kannada News

ಬೆಂಗಳೂರು, ಮೇ 20: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (KSMDMCL) ವೆಬ್‌ಸೈಟ್ ಮೂಲಕ ಮಾವು ಖರೀದಿಸಬಹುದು ಎಂದು ಹೇಳಿತ್ತು. ಆದರೆ ವೆಬ್‌ಸೈಟ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಅಧಿಕೃತವಾಗಿ ನೀಡಿರುವ ಮೊಬೈಲ್‌ ಸಂಖ್ಯೆಗೆ ಅಥವಾ ದೂರವಾಣಿ ಕರೆ ಇಲಾಖೆಗೆ ತಲುಪುತ್ತಿಲ್ಲ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಎಸ್‌ಎಂಡಿಎಂಸಿಎಲ್‌ ವಿರುದ್ಧ ನಿಗಮದ ವೆಬ್‌ಸೈಟ್‌ ಕುರಿತು ಸಾಕಷ್ಟು ಗ್ರಾಹಕರಿಂದ ದೂರುಗಳು ಕೇಳಿ ಬಂದಿದ್ದು, ಕೆಎಸ್‌ಎಂಡಿಎಂಸಿಎಲ್‌ನ ಆನ್‌ಲೈನ್‌ ವೆಬ್‌ಸೈಟ್‌ ಸರಿಯಾಗಿ ಬಳಕೆಯಾಗುತ್ತಿಲ್ಲ ಹಾಗೂ ತುರ್ತು ಸೇವೆಗೆಂದು ಅಧಿಕೃತವಾಗಿ ನೀಡಿರುವ ಮೊಬೈಲ್‌ ಸಂಖ್ಯೆಗಳು ಮತ್ತು ದೂರವಾಣಿ ಕರೆಯ ಸಂಖ್ಯೆಗಳಿಗೆ ಪೋನ್ ಮಾಡಿದರೆ ನಿಗಮಕ್ಕೆ ತಲುಪುತ್ತಿಲ್ಲ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು KSMDMCLನ ವೆಬ್‌ ಪೇಜ್‌ನಲ್ಲಿ ಗ್ರಾಹಕರ ಸಂಪರ್ಕಕ್ಕಾಗಿ ನೀಡಲಾಗಿರುವ ಮೊಬೈಲ್ ಸಂಖ್ಯೆಯಾದ 7411168063 ಸಂಖ್ಯೆಯು ಕರೆ ಮಾಡಿದರೆ ಯಾವಾಗಲೂ ಬೀಪ್ ಶಬ್ಧ ಕೇಳಿಸುತ್ತದೆ. ಈ ಸಂಖ್ಯೆಗೆ ಬೆಳಗ್ಗೆ 9ರಿಂದ 6 ಗಂಟೆಯೊಳಗೆ ಕರೆ ಮಾಡಲು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಈ ಸಮಯದಲ್ಲೂ ಕರೆ ಮಾಡಿದಾಗ ಯಾವುದೇ ಸಂಪರ್ಕ ಸಾಧ್ಯವಾಗುತ್ತಿಲ್ಲವೆಂದು ಗ್ರಾಹಕರು ದೂರಿದ್ದಾರೆ.

Customers Upset on Karnataka Govt Mangoes selling web portal KSMDMCL

ಕರ್ನಾಟಕ ಸರ್ಕಾರದ ಒಂದು ಉದ್ಯಮ ಹಾಗೂ ಗ್ರಾಹಕರಿಗೆ ಮುಕ್ತ ವ್ಯಾಪಾರ ಹೊಂದಬೇಕೆಂದು ಉದ್ದೇಶ ಹೊಂದಿರುವ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಗ್ರಾಹಕರ ಸಹಾಯವಾಣಿ ಹಾಗೂ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ 91-06366783105 ಈ ಸಂಖ್ಯೆಗೆ ಕರೆ ತಾಗುತ್ತಿಲ್ಲ, ಸಾಕಷ್ಟು ಸಲ ಪ್ರಯತ್ನಿಸಿದರೂ ಯಾವುದೇ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಅನೇಕ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಮೇ.16ರಿಂದ ಆನ್‌ಲೈನ್‌ನಲ್ಲಿ ರೈತರ ಬೆಳೆದ ಮಾವಿನ ಹಣ್ಣುಗಳನ್ನು ನಿಗಮವು ಮಾರಾಟ ಮುಂದಾಗಿದೆ. 2020ರಲ್ಲಿ ಕರ್ನಾಟಕ ಸರ್ಕಾರವು ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌಡ್‌ಗಳ ಮಧ್ಯೆ ಆನ್‌ಲೈನ್ ಮಾರ್ಕೆಟಿಂಗ್ ಮತ್ತು ಅಂಚೆ ಸೇವೆಯನ್ನು ಬಳಸಿಕೊಂಡು ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಗೆ ಇ- ಮಾರುಕಟ್ಟೆಗೆ ಮುಂದೆ ಬಂದಿತ್ತು.ಆದರೆ ಈ ಬಾರಿ ಅಧಿಕೃತ ವೆಬ್‌ಸೈಟ್‌ ಬಳಸಿಕೊಂಡು ಆನ್‌ಲೈನ್ ವ್ಯಾಪಾರದ ಮೂಲಕ ಮಾವು ಮಾರಾಟವಾಗಲಿದೆ.

ನೀವು ಹಣ್ಣುಗಳನ್ನು ತಿಂದು ಸವಿಯಬೇಕೆಂದು ಇ-ವ್ಯಾಪಾರದಲ್ಲಿ ಬುಕ್ಕಿಂಗ್ ಮಾಡಿದರೆ ಸಾಕು ಜನರ ಬಾಗಿಲಿಗೆ ಅಂಚೆ ಸೇವೆಯನ್ನು ಬಳಸಿಕೊಂಡು ಮನೆಗೆ ಹಣ್ಣುಗಳನ್ನು ತಲುಪಿಸುವ ಯೋಜನೆಯನ್ನು ಮಾವು ನಿಗಮ ಹಾಕಿಕೊಂಡಿತ್ತು.ಆದರೆ ಇ-ವ್ಯಾಪಾರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ ಎಂದು ಬುಕ್ಕಿಂಗ್ ಮಾಡಿ ಮನೆಗೆ ಮಾವುಗಳನ್ನು ತರಸಿಕೊಳ್ಳದ ಗ್ರಾಹಕರು ನಿರಾಸೆಪಟ್ಟಿದ್ದಾರೆ.

Customers Upset on Karnataka Govt Mangoes selling web portal KSMDMCL

ಗ್ರಾಹಕರು ಬುಕ್ಕಿಂಗ್ ಮಾಡಿದರೆ ಸಾಕು ತಾಜಾ ಮಾವಿನ ಹಣ್ಣುಗಳು ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ ಎಂದು ಹೇಳಿಕೊಮಡಿದ್ದ ಮಾವು ನಿಗಮವು ಈ ಯೋಜನೆಯ ಆನ್‌ಲೈನ್‌ ವ್ಯವಹಾರ ಹಾಗೂ ಖರೀದಿಯಲ್ಲಿ ಸಾಕಷ್ಟು ಸಮಸ್ಯೆಗಳು ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಸಹಾಯಕವಾಗಿಲ್ಲ ಎನ್ನುವುದು ನಿಗಮದ ಅಧಿಕೃತ ಈ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರುವ ಅನೇಕ ಗ್ರಾಹಕರು ಸಮಸ್ಯೆಯಾಗಿದೆ ಎಂದು ದೂರಿದ್ದಾರೆ. ದಿನಕ್ಕೆ ಲಕ್ಷಾಂತರ ಆನ್‌ಲೈನ್‌ ಗ್ರಾಹಕರು ಈ ವೆಬ್‌ಸೈಟ್‌ ಭೇಟಿಯಾಗುತ್ತಿದ್ದು ಆದರೆ ಗ್ರಾಹಕರ ಸಮಸ್ಯೆ ಸರಿಪಡಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

Recommended Video

ಬೆಂಗಳೂರಿನಲ್ಲಿ ಭಾರೀ ಮಳೆ , ಸಿದ್ದರಾಮಯ್ಯ ಹೇಳಿದ್ದೇನು | OneIndia Kannada

English summary
Consumers have been complaining about the department's website receiving complaints from buyers that the online website for purchase (KSMDMCL) is not being used properly and that the official mobile number or phone call is not reaching the department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X