ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್‌: 800ಕ್ಕೂ ಅಧಿಕ ಫಿಟ್ನೆಸ್ ಸಿಬ್ಬಂದಿ ಕೆಲಸದಿಂದ ವಜಾ

|
Google Oneindia Kannada News

ಬೆಂಗಳೂರು, ಮೇ 4: ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ದೇಶದಲ್ಲಿ ಅನೇಕ ಕಂಪನಿಗಳು ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ. ಹಲವು ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದೆ. ಇದರಿಂದ ಫಿಟ್ನೆಸ್ ಕ್ಷೇತ್ರಕ್ಕೂ ಭಾರಿ ನಷ್ಟವಾಗಿದ್ದು, ದೇಶಾದ್ಯಂತ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.

ದೇಶದ ಪ್ರತಿಷ್ಠಿತ ಜಿಮ್ ಸಂಸ್ಥೆ ಕಲ್ಟ್ ಫಿಟ್, ಕ್ಯೂರ್ ಫಿಟ್ ಗಳು ನಷ್ಟದಿಂದ ಹೊರಬರಲು ತಮ್ಮ ಸಿಬ್ಬಂದಿಯ ವೇತನವನ್ನು ಕಡಿತಗೊಳಿಸಿದೆ. ಇನ್ನು ಒಂದು ಹೆಜ್ಜೆ ಮುಂದು ಹೋಗಿ ಸುಮಾರು 800ಕ್ಕೂ ಅಧಿಕ ಸಿಬ್ಬಂದಿಯನ್ನು ವಜಾಗೊಳಿಸಿದೆ.

ಕೊರೊನಾ ಸೋಂಕಿತನ ಮೇಲೆ ವೈದ್ಯನಿಂದ ಲೈಂಗಿಕ ದೌರ್ಜನ್ಯ!ಕೊರೊನಾ ಸೋಂಕಿತನ ಮೇಲೆ ವೈದ್ಯನಿಂದ ಲೈಂಗಿಕ ದೌರ್ಜನ್ಯ!

2016ರಲ್ಲಿ ಮಾಜಿ ಫ್ಲಿಪ್‌ಕಾರ್ಟ್ ಅಧಿಕಾರಿಗಳು ಕಲ್ಟ್.ಫಿಟ್ ಸಂಸ್ಥೆ ಸ್ಥಾಪಿಸಿದರು. ದೇಶದ ಅತ್ಯುನ್ನತ ಫಿಟ್ನೆಸ್ ಕೇಂದ್ರಗಳಲ್ಲಿ ಒಂದಾಗಿದ್ದು, ಅನೇಕ ಸೆಲೆಬ್ರಿಟಿಗಳು ಇದಕ್ಕೆ ರಾಯಭಾರಿಗಳಾಗಿ ಕೆಲಸ ಮಾಡಿದ್ದಾರೆ. ಭಾರತದಲ್ಲಿ ಸುಮಾರು 130 ಕಡೆ ಜಿಮ್ ಕೇಂದ್ರಗಳನ್ನು ಹೊಂದಿರುವ ಕಲ್ಟ್ ಫಿಟ್ ಸಂಸ್ಥೆ ಲಾಕ್‌ಡೌನ್‌ ಹೊಡೆತಕ್ಕೆ ನಲುಗಿದೆ. ಕೇವಲ ಸಿಬ್ಬಂದಿಗಳನ್ನು ಮಾತ್ರವಲ್ಲ, ಕೆಲವು ಕಡೆ ಜಿಮ್‌ಗಳನ್ನೇ ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

CultfIt Has Laid Off All Its Employees On International Labour Day

ಲಾಕ್‌ಡೌನ್‌ ಕಾರಣದಿಂದ ದೇಶದ ಎಲ್ಲ ಕಡೆ ಜಿಮ್‌ ಕೇಂದ್ರಗಳನ್ನು ಮುಚ್ಚಲಾಗಿತ್ತು. ಸುಮಾರು 40 ದಿನಗಳ ಸುದೀರ್ಘ ಲಾಕ್‌ಡೌನ್‌ ಬಳಿಕ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಬಹುಶಃ ಸದ್ಯದಲ್ಲೆ ಫಿಟ್ನೆಸ್ ಕೇಂದ್ರಗಳು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಆದರೆ, ಕ್ಯೂರ್ ಫಿಟ್ ಸಂಸ್ಥೆ ದೇಶದ ಸಣ್ಣ ನಗರಗಳಲ್ಲಿರುವ ಕೇಂದ್ರವನ್ನು ಮತ್ತೆ ತೆರೆಯದಿರಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ತರಬೇತಿದಾದರು, ವ್ಯವಸ್ಥಾಪಕರು ಸೇರಿದಂತೆ ಹಲವು ಸಿಬ್ಬಂದಿಯ ಕೆಲಸಕ್ಕೆ ಕತ್ತರಿ ಬಿದ್ದಿದೆ.

ಬೆಂಗಳೂರು, ದೇಶದ ಪ್ರಮುಖ ನಗರ ಹಾಗು ದುಬೈ ಸೇರಿದಂತೆ ಸುಮಾರು 200 ಫಿಟ್ನೆಸ್ ಕೇಂದ್ರಗಳನ್ನು ಕಲ್ಟ್ ಫಿಟ್ ಸಂಸ್ಥೆ ಹೊಂದಿದೆ. ಎಲ್ಲಾ ಕಡೆ ಸೇರಿ 5 ಸಾವಿರ ಕೆಲಸಗಾರರನ್ನು ಹೊಂದಿದೆ. ಈ ಮಧ್ಯ ಆನ್‌ಲೈನ್‌ನಲ್ಲಿ ತರಬೇತಿ ನೀಡಲು ಮ್ಯಾನೇಜ್ ಮೆಂಟ್ ನಿರ್ಧರಿಸಿದ್ದು, ಅದಕ್ಕಾಗಿ ತಯಾರಿ ಕೂಡ ನಡೆಸಿದೆ.

English summary
Cult fitness laying off employees in mass numbers without any additional compensation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X