• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟಿ ಸಂಜನಾ ಗಲ್ರಾನಿ ವಿರುದ್ಧ ಹೊಸ ಎಫ್‌ಐಆರ್ ದಾಖಲು ಮಾಡಿದ ಪೊಲೀಸರು

|

ಬೆಂಗಳೂರು, ಮೇ. 14: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾಗಿದ್ದ ನಟಿ ಸಂಜನಾ ಗಲ್ರಾನಿ ಮತ್ತೆ ವಿವಾದದಲ್ಲಿ ಸಿಲುಕಿದ್ದಾರೆ. ಹೈಕೋರ್ಟ್ ನಿಂದ ಜಾಮೀನು ಪಡೆದ ಬಳಿಕ ಬಹಿರಂಗವಾಗಿ ಕಾಣಿಸಿಕೊಳ್ಳದ ಸಂಜನಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಂದಹಾಗೆ 2019 ರಲ್ಲಿ ಕ್ಲಬ್ ನಲ್ಲಿ ನಡೆದಿದ್ದ ಗಲಾಟೆಯೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಪ್ರಕರಣ ದಾಖಲಾಗಿದೆ.

ಸಂಜಾನಾ ಕಿರಿಕ್ಕು ಪಾರ್ಟಿ: 2019 ರಲ್ಲಿ ಲ್ಯಾವೆಲ್ಲೆ ರಸ್ತೆಯಲ್ಲಿರುವ ಕ್ಲಬ್ ವೊಂದರಲ್ಲಿ ನಟಿ ಸಂಜನಾ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದಳು. ಇದೇ ವೇಳೆ ಮಾಡೆಲ್ ವಂದನಾ ಜೈನ್ ಕೂಡ ತನ್ನ ಸ್ನೇಹಿತನೊಂದಿಗೆ ಪಾರ್ಟಿ ಮಾಡುತ್ತಿದ್ದಳು. ಈ ವೇಳೆ ವಂದನಾ ಜೈನ್ ಸ್ನೇಹಿತನ ಜತೆ ಸಂಜನಾ ಮಾತುಕತೆ ನಡೆಸಿದಳು. ಈ ವೇಳೆ ಅವಾಚ್ಯ ಪದಗಳನ್ನು ಬಳಿಸಿ ವಂದನಾ ಜೈನ್ ರನ್ನು ನಿಂದನೆ ಮಾಡಿದ್ದಳು ಸಂಜನಾ. ತನ್ನ ಬಗ್ಗೆ ಕೆಟ್ಟ ಪದ ಬಳಸಿ ಮಾತನಾಡದಂತೆ ವಂದನಾ ಜೈನ್ ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದ ಕುಪಿತಗೊಂಡಿರುವ ಸಂಜನಾ, ಸ್ನೇಹಿತನ ಪಕ್ಕದಲ್ಲಿ ಕೂತಿದ್ದ ವಂದನಾ ಜೈನ್ ಮುಖಕ್ಕೆ ವಿಸ್ಕಿ ಎರಚಿ ಹಲ್ಲೆ ನಡೆಸಿದ್ದಾರೆ. ಇದರಿಂದ ವಂದನಾ ಕಣ್ಣಿಗೆ ಗಾಯವಾಗಿದೆ ಎನ್ನಲಾಗಿದೆ.

   ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

   ಈ ಕುರಿತು ವಂದನಾ ಜೈನ್ ನ್ಯಾಯಾಲಯದ ಮೊರೆ ಹೋಗಿ ಖಾಸಗಿ ದೂರು ಸಲ್ಲಿಸಿದ್ದರು. ದೂರನ್ನು ವಿಚಾರಣೆ ನಡೆಸಿದ ನ್ಯಾಯಾಲಯ ನಟಿ ಸಂಜನಾ ಎಸಗಿರುವ ಕೃತ್ಯದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಸಂಜನಾ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.

   English summary
   Cubbon Park police have been registered a criminal case against actress Sanjjanaa Galrani know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X