ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ-2015

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 26 : 'ಬೆಂಗಳೂರು ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ-2015ನ್ನು ನವೆಂಬರ್ 22ರಂದು ಆಚರಿಸಲು ಲೈಂಗಿಕ ಕಾರ್ಮಿಕರ ಹಕ್ಕುಗಳ ಒಕ್ಕೂಟ (CSMR) ನಿರ್ಧರಿಸಿದೆ. ಆ ಕಾರಣಕ್ಕಾಗಿ ಅಕ್ಟೋಬರ್ 31 ರ ಶನಿವಾರ ಮಲ್ಲೇಶ್ವರ ಮೈದಾನದಲ್ಲಿ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

'ಲೈಂಗಿಕ ಅಲ್ಪಸಂಖ್ಯಾತರ ದಿನ'ವಾದ ನವೆಂಬರ್ 22ರಂದು ಬೆಂಗಳೂರು ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬವನ್ನು ಆಚರಿಸಲು ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲೈಂಗಿಕ ಕಾರ್ಮಿಕರ ಹಕ್ಕುಗಳ ಒಕ್ಕೂಟ (CSMR) ನಿರ್ಧರಿಸಿದ್ದು, ಈ ಹಬ್ಬದಲ್ಲಿ ದೇಶದ ವಿವಿಧ ಭಾಗಗಳ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು 'ಒಂದೆಡೆ' ಸಂಸ್ಥೆ ಸ್ಥಾಪಕರಾದ ಅಕೈ ಪದ್ಮಶಾಲಿ ಅವರು ತಿಳಿಸಿದರು.[ಲೈಂಗಿಕ ಅಲ್ಪಸಂಖ್ಯಾತರಿಗೊಂದು ವಿಶೇಷ ಮ್ಯಾಗಜೀನ್]

CSMR decide celebrate Bengaluru pride and Karnataka Queer Habba-2015, November 22nd

ಕರ್ನಾಟಕ ಕ್ವೀರ್ ಹಬ್ಬವನ್ನು ಸಿಎಸ್ಎಂಆರ್ ಸಂಸ್ಥೆ 2008 ರಿಂದ ನಡೆಸಿಕೊಂಡು ಬರುತ್ತಿದ್ದು, 8 ವರ್ಷಗಳು ಸಂದಿವೆ. ನಪುಂಸಕತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಲ್ಲಿರುವ ತಾರತಮ್ಯ ನೀತಿಯನ್ನು ಹೋಗಲಾಡಿಸುವುದೇ ಇದರ ಉದ್ದೇಶ. ಹಾಗಾಗಿ ಸ್ಪರ್ಧೆಗಳಿಗೆ ಎಲ್ಲರಿಗೂ ಮುಕ್ತವಾಗಿ ಆಹ್ವಾನ ನೀಡಲಾಗಿದೆ.

ಸಿಎಸ್ ಎಂಆರ್ ಸಂಸ್ಥೆಯು ಮಹಿಳಾ ಸಲಿಂಗಿಗಳು, ಪುರುಷ ಸಲಿಂಗಿಗಳು, ಉಭಯಲಿಂಗಿಗಳು ಹಾಗೂ ತೃತೀಯ ಲಿಂಗಿಗಳನ್ನು ಒಳಗೊಂಡಿರುವ ಬೆಂಗಳೂರಿನ ಪ್ರಾತಿನಿಧಿಕ ಸಂಘಟನೆಯಾಗಿದೆ. ಇದು ತನ್ನ ಅಧೀನದಲ್ಲಿ 50 ಸಂಘಟನೆಗಳನ್ನು ಒಳಗೊಂಡಿದೆ.

ಹೆಚ್ಚಿನ ಮಾಹಿತಿಗಾಗಿ : ಬೆಂಗಳೂರು ಪ್ರೈಡ್

2015 marks 8 years of Bangalore Pride. The stories of queer activism in the city, of course, significantly predate...

Posted by Bengaluru Pride & Karnataka Queer Habba onMonday, October 19, 2015

English summary
An activist belonging to the Coalitation for Sexual Minority Rights (CSMR) takes decision to celebrate Bengaluru pride and Karnataka Queer Habba-2015 on November 22nd at Malleshwaram, Bengaluru. So CSMR institution organize many sports on Saturday, October 31st, at Malleshwaram field.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X