ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಎಲ್‌ಸಿ ವಿ.ಸೋಮಣ್ಣ ಹೆಸರು ಬಳಸಿ ಕೋಟ್ಯಂತರ ಹಣ ವಂಚನೆ

By Manjunatha
|
Google Oneindia Kannada News

ಬೆಂಗಳೂರು, ಏಪ್ರಿಲ್ 04: ಬಿಜೆಪಿಯ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕಿಗೆ ಹಾಗೂ ಚಿನ್ನಾಭರಣ ಅಂಗಡಿಗೆ ವಂಚನೆ ಎಸಗಿದ್ದ ವ್ಯಕ್ತಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್.ಸೋಮಣ್ಣ ಎಂಬಾತ ತಾನೇ ವಿ.ಸೋಮಣ್ಣ ಎಂದು ನಂಬಿಸಿ ನಗರದ ಕರ್ನಾಟಕ ಬ್ಯಾಂಕ್‌ ಒಂದರ ವ್ಯವಸ್ಥಾಪಕರ ಬಳಿ ಬರೋಬ್ಬರಿ 2.5 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದ.

ಹನೂರು ಕೈತಪ್ಪಿದ ಬಳಿಕ ಸೋಮಣ್ಣನ ಕಥೆಯೇನು?ಹನೂರು ಕೈತಪ್ಪಿದ ಬಳಿಕ ಸೋಮಣ್ಣನ ಕಥೆಯೇನು?

ಪರಿಷತ್ ಸದಸ್ಯ ವಿ.ಸೋಮಣ್ಣ ಎಂದು ನಂಬಿಸಿ, ಯಾವುದೋ ಸರ್ಕಾರದ ಕೆಲಸ ಮಾಡಿಸಿದ್ದೆ ಗುತ್ತಿಗೆದಾರರಿಗೆ ಇಂದೇ ಹಣ ಕೊಡಬೇಕು, ಸರ್ಕಾರದಿಂದ ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆ ಆಗುತ್ತದೆ ಆಗ ಮರಳಿ ಕೊಡುತ್ತೇನೆ ಎಂದು ಹೇಳಿ ಕರ್ನಾಟಕ ಬ್ಯಾಂಕ್ ಮ್ಯಾನೇಜರ್‌ನಿಂದ 2.5 ಕೋಟಿ ರೂಪಾಯಿ ಪಡೆದುಕೊಂಡು ಹೋಗಿದ್ದರು.

crores together money fraud by using MLC V.Somannas name

ನಂತರ ಮೋಸ ಹೋಗಿರುವುದು ತಿಳಿದ ಬ್ಯಾಂಕ್ ಮ್ಯಾನೆಜರ್ ದೊರೆಸ್ವಾಮಿ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಎಲ್.ಸೋಮಣ್ಣನನ್ನು ಬಂಧಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಈ ಹಿಂದೆ ಈತ ಸೋಮಣ್ಣ ಅವರ ಹೆಸರು ಬಳಸಿ ಚಿನ್ನದ ವ್ಯಾಪಾರಿಯಿಂದ ಕೋಟ್ಯಂತರ ಮೌಲ್ಯದ ಸರಗಳನ್ನು ಕೊಂಡೊಯ್ದಿದ್ದ. ಪಕ್ಷದ ವತಿಯಿಂದ ಸಾಮೂಹಿಕ ವಿವಾಹ ಮಾಡಿಸುತ್ತಿದ್ದೇನೆ ಎಂದು ಹೇಳಿ 100 ಚಿನ್ನದ ಸರಗಳನ್ನು ಕೊಂಡೊಯ್ದಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

English summary
A fraud called L.Somanna cheats 2.5 crore to a Karnataka bank manager in Bengaluru. Basavanagara Police arrested him. He introduced himself as MLC V.Somanna and taken 2.5 crore rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X