ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BMTC ಮಾಸಿಕ ಪಾಸು ಮಾರಾಟಕ್ಕೆ ಕೋಟಿ ಕೋಟಿ ಕಮೀಷನ್ ಪಾವತಿ

|
Google Oneindia Kannada News

ಬೆಂಗಳೂರು, ಮಾ. 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಿರ್ವಾಹಕರ ಬಗ್ಗೆಯಾಗಲೀ, ಚಾಲಕರ ಬಗ್ಗೆಯಾಗಲೀ ಸ್ವಲ್ಪವೂ ಕನಿಕರವಿಲ್ಲ!

ಬಿಎಂಟಿಸಿ ಮಾಸಿಕ ಪಾಸುಗಳನ್ನು ಮಾರಾಟ ಮಾಡಲು ಕಮೀಷನ್ ಆಧಾರದ ಮೇಲೆ ಬಿಎಂಟಿಸಿ ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಂಡಿದೆ. ಕಮೀಷನ್ ರೂಪದಲ್ಲಿ ಕೋಟ್ಯಂತರ ರೂಪಾಯಿ ಪಾವತಿ ಮಾಡಿರುವ ಸಂಗತಿ ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದ ದಾಖಲೆಗಳಿಂದ ಬಹಿರಂಗವಾಗಿದೆ.

ಬಿಎಂಟಿಸಿಗೆ ಬಸ್ ಟಿಕೆಟ್ ಮುದ್ರಿಸುವ ಶಕ್ತಿ ಇಲ್ಲ: ಟಿಕೆಟ್ ಇಲ್ಲದೇ ನಿರ್ವಾಹಕರ ಪರದಾಟಬಿಎಂಟಿಸಿಗೆ ಬಸ್ ಟಿಕೆಟ್ ಮುದ್ರಿಸುವ ಶಕ್ತಿ ಇಲ್ಲ: ಟಿಕೆಟ್ ಇಲ್ಲದೇ ನಿರ್ವಾಹಕರ ಪರದಾಟ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 1940 ರಲ್ಲಿಯೇ ಬೆಂಗಳೂರು ಟ್ರಾನ್ಸ್ ಪೋರ್ಟ್ ಸರ್ವೀಸ್ ಹೆಸರಿನಲ್ಲಿ ಹುಟ್ಟಿಕೊಂಡಿರುವ ಸಂಸ್ಥೆ. ಅವತ್ತಿಗೆ ಕೇವಲ 98 ಬಸ್ ಗಳಿಂದ ಬಿಎಂಟಿಸಿ ಅರಂಭವಾಗಿತ್ತು. ಇವತ್ತಿಗೆ ಸುಮಾರು 6800 ಬಸ್‌ಗಳಿವೆ. ಐಶಾರಾಮಿ ಬಸ್‌ಗಳನ್ನು ರಸ್ತೆಗೆ ಇಳಿಸಿದೆ. 30 ಸಾವಿರ ಮಂದಿಗೆ ನೇರ ಉದ್ಯೋಗ ಕಲ್ಪಿಸಿದ ಮಹಾನ್ ಸಂಸ್ಥೆ. ದಿನಕ್ಕೆ ಎರಡೂವರೆ ಕೋಟಿ ಯಿಂದ ಮೂರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಬಿಎಂಟಿಸಿ ಪ್ರಸಕ್ತ 2021-22 ನೇ ಸಾಲಿನಲ್ಲಿ ಅತಿ ಹೆಚ್ಚು ಪ್ರಗತಿ ದಾಖಲಿಸಿದೆ. ದೇಶದ ಸಾರಿಗೆ ಸೇವೆ ವಿಚಾರದಲ್ಲಿ ಹಲವು ಪ್ರಶಸ್ತಿಗಳನ್ನು ಬಿಎಂಟಿಸಿ ಮುಡಿಗೇರಿಸಿಕೊಂಡಿದೆ.

Crores of money in commission form paid to Monthly BMTC Bus Pass Selling Agents

ಸಿಬ್ಬಂದಿ ವಿಚಾರದಲ್ಲಿ ದೊಂಬರಾಟ:

ಬಿಎಂಟಿಸಿ ಏಳಿಗೆಗಾಗಿ ಹಗಳಿರುಳು ಶ್ರಮಿಸುತ್ತಿರುವ ನೌಕರರ ವಿಚಾರಕ್ಕೆ ಬಂದರೆ ಬಿಎಂಟಿಸಿ ಇಬ್ಬಗೆ ನೀತಿ ಅನುಸರಿಸುತ್ತದೆ. ನಾಲ್ಕು ವರ್ಷ ಕಳೆದರೂ ವೇತನ ಪರಿಷ್ಕರಣೆ ಮಾಡಿಲ್ಲ. ಹೋರಾಟ ಮಡಿದ ನೌಕರರನ್ನು ಮುಲಾಜಿಲ್ಲದೇ ವಜಾ ಮಾಡಿದೆ. ಪರಿ ಪರಿ ಬೇಡಿಕೊಂಡರೂ ಸಿಬ್ಬಂದಿಯನ್ನು ವಾಪಸು ಪಡೆಯುವ ವಿಚಾರದಲ್ಲಿ ಜಪ್ಪಯ್ಯ ಎಂದ್ರೂ ಕದಲುತ್ತಿಲ್ಲ.

ಇನ್ನು ಮಾಸಿಕ ಪಾಸ್ ವಿಚಾರಕ್ಕೆ ಬಂದ್ರೆ ಬೇರೆಯದ್ದೇ ಕಥೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ನಂಬಿ ಪ್ರತಿ ದಿನ ಪ್ರಯಾಣಿಸುವ ಪ್ರಯಾಣಿಕರು ಮಾಸಿಕ ಪಾಸು ಖರೀದಿಸುತ್ತಾರೆ. ಈ ಪಾಸುಗಳನ್ನು ಕಮೀಷನ್ ಆಧಾರದ ಮೇಲೆ ಮಾರಾಟ ಮಾಡುವ ಗುತ್ತಿಗೆಯನ್ನು ಬೆಂಗಳೂರಿನ ಖಾಸಗಿ ಏಜೆಂಟರಿಗೆ ಬಿಎಂಟಿಸಿ ವಹಿಸಿದೆ.

Crores of money in commission form paid to Monthly BMTC Bus Pass Selling Agents

ಸುಮಾರು 70ಕ್ಕೂ ಹೆಚ್ಚು ಏಜೆನ್ಸಿಗಳಿಗೆ ಬಿಎಂಟಿಸಿ ಮಾಸಿಕ ಬಸ್ ಪಾಸ್ ಗಳನ್ನು ಮಾರಾಟ ಮಾಡುವ ಕಾರ್ಯವನ್ನು ವಹಿಸಿದೆ. ಬಿಎಂಟಿಸಿ ಮಾಸಿಕ ಬಸ್ ಪಾಸ್ ಮಾರಾಟ ಮಾಡಿದವರಿಗೆ ಕಮೀಷನ್ ನೀಡಲಾಗುತ್ತದೆ. ಒಂದು ಪಾಸಿಗೆ ಮೂರು ರೂ.ನಿಂದ ಐದು ರೂ. ನೀಡಲಾಗುತ್ತದೆ. ಮಾಸಿಕ ಕನಿಷ್ಠ 3 ರಿಂದ 4 ಲಕ್ಷ ರೂ.ಗಳನ್ನು ಕಮೀಷನ್ ರೂಪದಲ್ಲಿ ಬಿಎಂಟಿಸಿ ಏಜೆಂಟರಿಗೆ ನೀಡುತ್ತಿದೆ. ಕಳೆದ 2013 ರಿಂದ 2020 ರ ಅವಧಿಯಲ್ಲಿ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಹಣ ಕಮೀಷನ್ ಹೆಸರಿನಲ್ಲಿ ಬಿಎಂಟಿಸಿ ವೆಚ್ಚ ಮಾಡಿದೆ. ಬಿಎಂಟಿಸಿಯ ಈ ನಿರ್ಧಾರದ ಬಗ್ಗೆ ಬಿಎಂಟಿಸಿ ಚಾಲಕರು ಅಪರಸ್ವರ ಎತ್ತಿದರೂ, ಒಳ್ಳೆಯ ಸಲಹೆ ನೀಡಿದರೂ ಮೇಲಾಧಿಕಾರಿಗಳು ಸ್ವೀಕರಿಸಿಲ್ಲ.

Crores of money in commission form paid to Monthly BMTC Bus Pass Selling Agents

ಏಜೆಂಟರಿಗೆ ಮಾಸಿಕ ಪಾಸು ಕೊಡುವ ಬದಲಿಗೆ, ನಿರ್ವಾಹಕರಿಗೆ ಕೊಟ್ಟಿದ್ದರೆ, ಆ ಪಾಸುಗಳನ್ನು ಬಸ್ ನಲ್ಲಿ ಮಾರಾಟ ಮಾಡುತ್ತಿದ್ದರು. ಏಜೆಂಟರಿಗೆ ಕೊಡುವ ಕಮೀಷನ್ ಸಿಬ್ಬಂದಿಗೆ ಕೊಟ್ಟಿದ್ದರೆ ಒಂದಷ್ಟು ಆರ್ಥಿಕ ಸಹಾಯ ಅಗುವುದು. ಬಸ್ ಟಿಕೆಟ್, ಡೈಲಿ ಪಾಸು ಕೊಡುವ ಸಿಬ್ಬಂದಿಗೆ ಮಾಸಿಕ ಪಾಸು ಮಾರಾಟ ಮಾಡುವುದು ದೊಡ್ಡ ಭಾರವಾದೀತೇ? ಬಿಎಂಟಿಸಿ ನೌಕರರಿಗೆ ಬಸ್‌ನಲ್ಲಿಯೇ ಮಾಸಿಕ ಪಾಸ್ ಮಾರಾಟ ಮಾಡುವ ಕೆಲಸ ವಹಿಸಿದ್ದಲ್ಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಏಜೆಂಟರಿಗೆ ಕೊಡುವ ಹಣವನ್ನು ಹೆಚ್ಚುವರಿ ಸೇವೆ ರೂಪದಲ್ಲಿ ಸಿಬ್ಬಂದಿಗೆ ಕೊಟ್ಟಿದ್ದಲ್ಲಿ ಒಂದಷ್ಟು ಅನುಕೂಲವಾಗುವುದು.

ಖಾಸಗಿ ಏಜೆಂಟರ ಹೆಸರಿನಲ್ಲಿ ಬಿಎಂಟಿಸಿ ಕೌಂಟರ್ ನಲ್ಲಿ ಮಾಸಿಕ ಪಾಸು ಮಾಡಿದವರು ಇದ್ದಾರೆ. ಬಿಎಂಟಿಸಿ ನೌಕರರಿಗೆ ಪಾಸು ಮಾರಾಟ ಮಾಡುವುದನ್ನು ಕೊಡುವ ಬದಲಿಗೆ ಖಾಸಗಿ ಏಜೆಂಟರಿಗೆ ನೀಡಿ ಕೋಟ್ಯಂತರ ರೂಪಾಯಿ ಬಿಎಂಟಿಸಿ ವ್ಯಯಿಸುತ್ತಿದೆ. ಅದರ ಬದಲಿಗೆ ಸಿಬ್ಬಂದಿಗೆ ವಹಿಸಿ ಆ ಹಣವನ್ನು ನೌಕರರ ಯೋಗ ಕ್ಷೇಮಕ್ಕೆ ವೆಚ್ಚ ಮಾಡಬಹುದಿತ್ತು. ಸಂಸ್ಥೆಗಾಗಿ ಎಷ್ಟೇ ಪ್ರಾಮಾಣಿಕ ಕೆಲಸ ಮಾಡಿದ್ರೂ ನಮ್ಮನ್ನು ಮಾತ್ರ ಕೀಳಾಗಿಯೇ ನಡೆಸಿಕೊಳ್ಳಲಾಗುತ್ತಿದೆ ಎಂದು ಬಿಎಂಟಿಸಿ ನಿರ್ವಾಹಕರು ಆಗ್ರಹಿಸಿದ್ದಾರೆ.

Crores of money in commission form paid to Monthly BMTC Bus Pass Selling Agents

ಕೊರೊನಾ ಸೋಂಕು, ಡೀಸೆಲ್ ದರ ಸತತ ಹೆಚ್ಚಳದಿಂದ ಬಿಎಂಟಿಸಿ ನಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಬಿಎಂಟಿಸಿ ದುಂದು ವೆಚ್ಚದ ಹಾದಿಗಳನ್ನು ಕಡಿತ ಮಾಡಿಲ್ಲ. ನಷ್ಟ ನೆಪ ಮುಂದಿಟ್ಟುಕೊಂಡು ನೌಕರರ ವೇತನ ನಾಲ್ಕು ವರ್ಷದಿಂದಲೂ ಪರಿಷ್ಕರೆ ಮಾಡಿಲ್ಲ. ಅದರೆ ಕಮೀಷನ್ ರೂಪದಲ್ಲಿ ಪಾಸು ಮಾರಾಟ ಮಾಡಿದವರಿಗೆ ಕೊಡಲು ಬಿಎಂಟಿಸಿ ಬಳಿ ಹಣವಿದೆ. ಸಂಸ್ಥೆಗಾಗಿ ದುಡಿಯುವರು ಏಳಿಗೆಯಾಗಿಬಿಟ್ಟರೆ ಎಂಬ ಮನಸ್ಥಿತಿಯಲ್ಲಿ ಬಿಎಂಟಿಸಿ ಉನ್ನತ ಅಧಿಕಾರಿಗಳು ನೌಕರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ನಿರ್ವಾಹಕರು ಅರೋಪಿಸಿದ್ದಾರೆ. ಬಿಡಿಗಾಸಿಗೆ ದುಡಿಯುವ ಬಿಎಂಟಿಸಿ ನೌಕರರಿಗೆ ಮಾಸಿಕ ಪಾಸು ಮಾರಾಟ ಮಾಡುವ ಕೆಲಸ ವಹಿಸುವುದರಲ್ಲಿ ತಪ್ಪೇನಿದೆ? ಈ ಬಗ್ಗೆ ಅಧಿಕಾರಿಗಳು ಈಗಲಾದರೂ ಮನಸು ಮಾಡುವರೇ.

Recommended Video

Petrol ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಧಮ್ಕಿ ಹಾಕಿದ Baba Ramdev | Oneindia Kannada

English summary
BMTC Scam: Crores of money in commission form paid to Monthly BMTC Bus Pass Selling Agents. Revealed in latest RTI information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X